ಎಲ್ಲಾ ಕ್ಷೇತ್ರಗಳಲ್ಲಿ ಛಾಯಾಗ್ರಹಣಕ್ಕೆ ಮಹತ್ವ ಸ್ಥಾನ
ಉಡುಪಿ : ದಿನ ನಿತ್ಯದ ಆಗುಹೋಗುಗಳನ್ನು ತಮ್ಮ ಕ್ಯಾಮರಾ ಕಣ್ಣೊಳಗೆ ಸಮರ್ಪಕವಾಗಿ ಸೆರೆ ಹಿಡಿಯ ಬಲ್ಲ ಸಾಮಾರ್ಥ್ಯವನ್ನು ಛಾಯಾಗ್ರಾಹಕ ಹೊಂದಿರುವವನು ಎಂದು ಛಾಯಾಚಿತ್ರ ಪತ್ರಕರ್ತ ಜನಾರ್ದನ ಕೊಡವೂರು ಅಭಿಮತ ವ್ಯಕ್ತಪಟ್ಟರು.
ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನಲ್ಲಿ ಶನಿವಾರದಂದು ಕನ್ನಡ ವಿಭಾಗ ಹಾಗೂ ಎನ್ ಎಸ್ ಎಸ್ ಸಹಯೋಗದೊಂದಿಗೆ “ಪತ್ರಿಕೋದ್ಯಮದಲ್ಲಿ ಛಾಯಾಚಿತ್ರಗಳ ಪಾತ್ರ” ಎಂಬ ವಿಷಯದ ಕುರಿತು ನಡೆದ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.
ವಿಶಾಲವಾದ ಜಗತ್ತಿನ ಅತಿದೊಡ್ಡ ಜಾಲವೆನಿಸಿದ ಛಾಯಾಚಿತ್ರಗ್ರಹಣದಲ್ಲಿ ಯುವ ಮನಸ್ಸುಗಳಿಗೆ ವಿಪುಲ ಅವಕಾಶಗಳಿವೆ. ಪತ್ರಿಕೋದ್ಯಮ ಸೇರಿದಂತೆ ಮಾಧ್ಯಮದ ಎಲ್ಲಾ ಕ್ಷೇತ್ರಗಳಲ್ಲಿಯೂ ಛಾಯಾಗ್ರಹಣಕ್ಕೆ ಇರುವ ಸವಾಲುಗಳನ್ನು ಗಮನಿಸಿಕೊಂಡು ವಿದ್ಯಾರ್ಥಿಗಳು ಈ ಕ್ಷೇತ್ರದಲ್ಲಿ ನೆಲೆಯೂರುವ ಪ್ರಯತ್ನ ಮಾಡಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಡಾ. ಸುಕನ್ಯಾ ಮೇರಿ. ಜೆ ಅವರು ವಹಿಸಿಕೊಂಡಿದ್ದರು.
ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಪ್ರಜ್ಞಾ ಮಾರ್ಪಳ್ಳಿ ನಿರೂಪಿಸಿ ಸ್ವಾಗತಿಸಿದರು. ಎನ್ ಎಸ್ ಎಸ್ ಘಟಕದ ಯೋಜನಾಧಿಕಾರಿಗಳಾದ ಚಿರಂಜನ್ ಕೆ ಶೇರಿಗಾರ್ ಅವರು ವಂದಿಸಿದರು.






































