ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವದ ಸಂಭ್ರಮ

Picture of RB NEWS

RB NEWS

Bureau Report

ಉಡುಪಿ: ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಲಕ್ಷದೀಪೋತ್ಸವದ ಪ್ರಯುಕ್ತ ಪರ್ಯಾಯ ಶ್ರೀ ಪುತ್ತಿಗೆ ಮಠದ ಉಭಯ ಶ್ರೀಪಾದರು ರಥಬೀದಿಯ ಸುತ್ತಲೂ ಹಣತೆಯನ್ನಿಟ್ಟು ದೀಪೋತ್ಸವಕ್ಕೆ ಚಾಲನೆಯನ್ನು ನೀಡಿದರು.

ಉಡುಪಿಯ ಶ್ರೀ ಕೃಷ್ಣ ಮಠದ ಮಧ್ವ ಸರೋವರದಲ್ಲಿ ಉತ್ಥಾನ ದ್ವಾದಶಿಯ ಪ್ರಯುಕ್ತ ಪರ್ಯಾಯ ಶ್ರೀ ಪುತ್ತಿಗೆ ಮಠದ ಉಭಯ ಶ್ರೀಪಾದರು ಕ್ಷೀರಾಭ್ದಿಯನ್ನು ಮಾಡಿ, ಅರ್ಘ್ಯವನ್ನು ನೀಡಿದರು.

ಲಕ್ಷದೀಪೋತ್ಸವ ದ ಅಂಗವಾಗಿ ಮಧ್ವ ಸರೋವರದಲ್ಲಿ ಪಾರ್ಥ ಸಾರಥಿ ರಥದ ಮಾದರಿಯ ತೆಪ್ಪದಲ್ಲಿ ಆಕರ್ಷಕ ತೆಪ್ಪದಲ್ಲಿ ಶ್ರೀ ಕೃಷ್ಣ ಮುಖ್ಯಪ್ರಾಣ ದೇವರನ್ನಿಟ್ಟು ತೆಪ್ಪೋತ್ಸವವನ್ನು ನೆರವೇರಿಸಲಾಯಿತು.

ಅಲಂಕೃತ ರಥಗಳಲ್ಲಿ ಶ್ರೀ ಕೃಷ್ಣ ಮುಖ್ಯಪ್ರಾಣ ದೇವರು ಹಾಗೂ ಅನಂತೇಶ್ವರ, ಚಂದ್ರೇಶ್ವರ ದೇವರನ್ನಿಟ್ಟು ರಥಬೀದಿಯ ಸುತ್ತಲೂ ವೈವಿಧ್ಯಮಯ ಲಕ್ಷ ದೀಪಗಳ ನಡುವೆ, ನಾದಸ್ವರ, ಪಂಚ ವಾದ್ಯ, ಚಂಡೆ ವಾದ್ಯಗಳೊಂದಿಗೆ ಆಕರ್ಷಕ ಸುಡುಮದ್ದು ಪ್ರದರ್ಶನದೊಂದಿಗೆ ತುಳಸಿ ಸಂಕೀರ್ಥನೆಯೊಂದಿಗೆ ರಥೋತ್ಸವವು ಅತ್ಯಂತ ವೈಭವದಿಂದ ನಡೆಯಿತು. ನಂತರ ಮಧ್ವ ಮಂಟಪದಲ್ಲಿ ತೊಟ್ಟಿಲು ಪೂಜೆಯು ನಡೆಯಿತು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top