ಆರ್.ಬಿ.ನ್ಯೂಸ್ ವರದಿಗೆ ಕಣ್ಣು ತೆರೆದ ಉಡುಪಿ ನಗರಸಭೆ

Picture of RB NEWS

RB NEWS

Bureau Report

ಆರ್.ಬಿ.ನ್ಯೂಸ್ ವರದಿಗೆ ಕಣ್ಣು ತೆರೆದ ಉಡುಪಿ ನಗರಸಭೆ

ಪತ್ರಿಕಾರಂಗ ಸಮಾಜದಲ್ಲಿ ಅಂಕುಡೊಂಕುಗಳನ್ನು ಪ್ರಾಮಾಣಿಕವಾಗಿ ಎತ್ತಿತೋರಿಸಿದಾಗ ಅದಕ್ಕೆ ಸಕರಾತ್ಮಕವಾಗಿ ಸ್ಪಂದನೆ ಸಿಕ್ಕಿದಾಗ ಅಭಿವೃದ್ದಿಗೆ ಸಹಕಾರಿಯಾಗುತ್ತದೆ.

ಈ ನಿಟ್ಟಿನಲ್ಲಿ ಆರ್.ಬಿ.ನ್ಯೂಸ್ ಜುಲಾಯಿ 19ರಂದು ನೀರಿನಲ್ಲಿ ರಸ್ತೆಯೋ? ರಸ್ತೆಯಲ್ಲಿ ನೀರೋ? ಎಂಬ ಶೀರ್ಷಿಕೆಯಡಿಯಲ್ಲಿ ಸಚಿತ್ರವರದಿಯೊಂದನ್ನು ಪ್ರಕಟಿಸಿ ಉಡುಪಿ ನಗರ ಸಭೆಯ ಆಡಳಿತವನ್ನು ಕಣ್ಣು ತೆರೆಸುವ ಕಾರ್ಯ ನಡೆಸಿತು.
ಉಡುಪಿ ನಗರಸಭೆಯ ಕುಕ್ಕಿಕಟ್ಟೆ ಪರಿಸರದಲ್ಲಿ ಮೂಲ ಸೌಕರ್ಯ ವಂಚಿತಗೊಂಡಿರುವುದರಿಂದ ಮಳೆಗಾಲದಲ್ಲಿ ಮಳೆ ನೀರು ಇಡೀ ರಸ್ತೆಯನ್ನೇ ಆವರಿಸುತ್ತಿದೆ… ಎಂಬುವುದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸಚಿತ್ರ ವರದಿ ಪ್ರಕಟಗೊಂಡು ಬರೀ 24 ಗಂಟೆಗಳೊಳಗಾಗಿ ಉಡುಪಿ ನಗರ ಸಭೆ ಸಕರಾತ್ಮಕವಾಗಿ ಸ್ಪಂದಿಸಿದ್ದು, ಮಳೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆಯ ಕಾಮಗಾರಿ ನಡೆಯುತ್ತಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top