ಅತ್ಯಾಚಾರಿಗೆ ಪೊಲೀಸರ ಗುಂಡೇಟು

Picture of RB NEWS

RB NEWS

Bureau Report

ಧಾರವಾಡ ಮೇ 04: ಹುಬ್ಬಳ್ಳಿಯ ಬಾಲಕಿಗೆ ಲೈಂಗಿಕ ದೌರ್ಜನ್ಯ ವೆಸಗಿದ ಆರೋಪಿ ಸದ್ದಾಂ ಹುಸೇನ್‌ ನನ್ನು ಪೊಲೀಸರು ಗುಂಡುಹಾರಿಸಿ ಬಂಧಿಸಿದ್ದಾರೆ.

ಆರೋಪಿ ಸದ್ದಾಂ ಹುಸೇನ್ ನನ್ನು ಪೊಲೀಸರ ಬಂಧಿಸಲು ಮುಂದಾದಾಗ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದನು. ಈ ವೇಳೆ ಪೊಲೀಸರು ಆರೋಪಿ ಸದ್ದಾಂ ಹುಸೇನ್‌ ಎಡಗಾಲಿಗ ಗುಂಡು ಹಾರಿಸಿ ಬಂಧಿಸಿದ್ದಾರೆ.

ಬಾಲಕಿ ಜೊತೆ ಸ್ನೇಹ ಬೆಳೆಸಿದ ಆರೋಪಿ ಸದ್ದಾಂ ಹುಸೇನ್ ಪ್ರೀತಿಸುವುದಾಗಿ ಹೇಳಿ ಅತ್ಯಾಚಾರ ಎಸಗಿದ್ದ. ವಾಂತಿ, ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಅವಳನ್ನು ಕಿಮ್ಸ್‌ಗೆ ದಾಖಲಿಸಿದಾಗ, ಗರ್ಭಧರಿಸಿರುವುದು ಗಮನಕ್ಕೆ ಬಂದಿತ್ತು. ವಿಷಯ ತಿಳಿದ ಆರೋಪಿ ಬಾಲಕಿಗೆ ಕರೆ ಮಾಡಿ ಪೊಲೀಸರಿಗೆ ತಿಳಿಸಿದರೆ ಜೀವತೆಗೆಯುವುದಾಗಿ ಬೆದರಿಸಿದ್ದ’ ಎಂದು ಬಾಲಕಿ ಪೋಷಕರು ಶುಕ್ರವಾರ ನವನಗರ ಠಾಣೆಯಲ್ಲಿ ಪೋಕ್ಸ್‌ ಪ್ರಕರಣ ದಾಖಲಿಸಿದ್ದರು.

ಆರೋಪಿ ಸದ್ದಾಂ ಹುಸೇನ್ ಹಲ್ಲೆ ಮಾಡಿದ್ದರಿಂದ ವಿದ್ಯಾಗಿರಿ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟ‌ರ್ ಸಂಗಮೇಶ ಹಾಗೂ ಕಾನ್ಸ್‌ಟೇಬಲ್‌ ಅರುಣ್ ಅವರಿಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಆರೋಪಿ ಸದ್ದಾಂ ಹುಸೇನ್‌ನನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top