ಅತೀ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ವಿಶೇಷ ಆಯುರ್ವೇದೀಯ ಚಿಕಿತ್ಸೆ

Picture of RB NEWS

RB NEWS

Bureau Report

ಮೂಡುಬಿದಿರೆ: ಸ್ಥಳೀಯ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಇದೇ ಸೆಪ್ಟೆಂಬರ್ 1ರಿಂದ ಮುಂದಿನ ಆರು ತಿಂಗಳ ತನಕ ಒಳ ರೋಗಿ ಎಲ್ಲಾ ಚಿಕಿತ್ಸೆಗೆ ಜನರಲ್ ವಾರ್ಡ್ ನವರಿಗೆ ಸಂಪೂರ್ಣ ಉಚಿತವಾಗಿರುತ್ತದೆ. ಒಳ ರೋಗಿ ಎಲ್ಲಾ ವಿಧದ ಚಿಕಿತ್ಸೆಗಳಲ್ಲಿ ಶೇಕಡಾ 20ರಷ್ಟು ರಿಯಾಯಿತಿಯನ್ನು ನೀಡಲಾಗುತ್ತಿದೆ. ಅದೇ ರೀತಿ ಆಯುಧ ಔಷಧಿಗಳಿಗೆ ಶೇಕಡಾ ಹತ್ತರಷ್ಟು ರಿಯಾಯಿತಿಯನ್ನು ನೀಡಲಾಗುತ್ತಿದೆ.
ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಎಲ್ಲಾ ವಿಧದ ನೋವುಗಳು, ಎಲ್ಲಾ ವಿಧದ ದೈಹಿಕ ಹಾಗೂ ಶಾರೀರಿಕ ತೊಂದರೆಗಳು, ಎಲ್ಲಾ ವಿಧದ ಚರ್ಮರೋಗಗಳು, ಎಲ್ಲಾ ಮಾನಸಿಕ ತೊಂದರೆಗಳು, ಎಲ್ಲಾ ನಮೂನೆಯ ದೈಹಿಕ ಸಮಸ್ಯೆಗಳು, ಸ್ತ್ರೀ ಸಂಬಂಧಿ ಎಲ್ಲ ಕಾಯಿಲೆಗಳು, ಮಕ್ಕಳ ಎಲ್ಲ ರೀತಿಯ ಖಾಯಿಲೆಗಳಿಗೂ ಸೂಕ್ತ ಚಿಕಿತ್ಸೆ ಲಭ್ಯವಿದೆ. ಆದರೆ ಈ ಸೌಲಭ್ಯವನ್ನು ಪಡೆಯಲು ಮೊದಲಾಗಿ ಮೊಬೈಲ್ ಸಂಖ್ಯೆ 9663555378 ಕ್ಕೆ ತಿಳಿಸಿ ನೋಂದಣಿ ಮಾಡಬೇಕಾಗಿರುತ್ತದೆ. ಆಸಕ್ತರು alvasayur@gmail.com / alvasayurveda.com ನಲ್ಲಿ ಕೂಡ ನೋಂದಾಯಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top