ಅಕ್ರಮ ವ್ಯವಹಾರಗಳು ಕಾನೂನು ಕ್ರಮಗಳಿಂದ ತಪ್ಪಿಸಿಕೊಳ್ಳಲಾಗದು: ಕಾಂಗ್ರೆಸ್ ತಿರುಗೇಟು

Picture of RB NEWS

RB NEWS

Bureau Report

ಅಕ್ರಮ ವ್ಯವಹಾರಗಳು ಕಾನೂನು ಕ್ರಮಗಳಿಂದ ತಪ್ಪಿಸಿಕೊಳ್ಳಲಾಗದು: ಕಾಂಗ್ರೆಸ್ ತಿರುಗೇಟು

ಕಾರ್ಕಳ :ಬಿಜೆಪಿಯ ಪೂರ್ವಾಶ್ರಮವಾಗಿದ್ದ ಜನಸಂಘದ ಕಾಲದಿಂದಲೂ ಕಾರ್ಕಳದಲ್ಲಿ ಕಾಂಗ್ರೆಸ್ ವಿರುದ್ದವಾಗಿ ಕೆಲಸ ಮಾಡಿದ್ದ ಅದೆಷ್ಟೋ ಬಿಜೆಪಿ ಕಾರ್ಯಕರ್ತರಿಗೆ, ಬಿಜೆಪಿ ಪರವಾಗಿದ್ದುಕೊಂಡು ಕಾನೂನು ಬದ್ದವಾಗಿ ತಮ್ಮ ತಮ್ಮ ವ್ಯಾಪಾರ ವ್ಯವಹಾರಗಳನ್ನು ನಡೆಸುತ್ತಿರುವ ಅದೆಷ್ಟೋ ಉದ್ಯಮಿಗಳಿಗೆ ಕಾರ್ಕಳದಲ್ಲಿ ವ್ಯವಹಾರ ನಡೆಸಲು ಇಂದಿನವರೆಗೂ ಯಾವುದೇ ತೊಂದರೆಯುಂಟಾಗಿಲ್ಲ. ಅವರೆಲ್ಲರೂ ಇಂದಿಗೂ ಅವರ ಉದ್ಯಮಗಳನ್ನು, ವ್ಯಾಪಾರ ವ್ಯವಹಾರಗಳನ್ನು ಯಾವುದೇ ಆತಂಕವಿಲ್ಲದೇ ನಡೆಸುತ್ತಿದ್ದಾರೆ. ಅವರ್ಯಾರೂ ಇಲ್ಲಿಯ ತನಕ ತಮ್ಮ ವ್ಯವಹಾರಗಳಿಗೆ ತೊಂದರೆಯಾಗಿದೆ ಎಂದು ದೂರಿಕೊಂಡ ಉದಾಹರಣೆಗಳಿಲ್ಲ,
ಆದರೆ ಈಗಿನ ಕೆಲವು ಬಿಜೆಪಿ ಪದಾಧಿಕಾರಿಗಳಿಗೆ ತೊಂದರೆಯುಂಟಾಗಿದ್ದರೆ ಅವರು ನಡೆಸುವ ಸ್ವಾರ್ಥ ತುಂಬಿದ ಅಕ್ರಮ ವ್ಯವಹಾರಗಳೇ ಕಾರಣ ಹೊರತು ಕಾಂಗ್ರೆಸ್ ಪಕ್ಷವಲ್ಲ ಎಂದು ಕಾರ್ಕಳ ತಾಲೂಕು ಭೂ ಮಂಡಳಿಯ ಸದಸ್ಯ ತಾರಾನಾಥ್ ಕೋಟ್ಯಾನ್ ಸೂರಾಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾರ್ಕಳದಲ್ಲಿ ಸುನೀಲ್ ಕುಮಾರ್ ಶಾಸಕರಾಗಿ ಆಯ್ಕೆಯಾದಂದಿನಿಂದಲೂ ಅಕ್ರಮ ವ್ಯವಹಾರ ನಡೆಸುವವರನ್ನು ಬೆಳೆಸಿದ ಕಾರಣ ಇಂದು ಅಕ್ರಮ ವ್ಯವಹಾರದಲ್ಲಿ ತೊಡಗಿದ್ದವರಿಗೆ ತೊಂದರೆಯುಂಟಾಗುತ್ತಿದೆ.

ಸ್ವತಃ ಶಾಸಕರೇ ಇಂತಹ ಅಕ್ರಮ ಅವ್ಯವಹಾರವನ್ನು ನಡೆಸುವವರಿಗೆ ಪ್ರೋತ್ಸಾಹಿಸಿದ ಕಾರಣ ಅವರಿಗೆ ತೊಂದರೆಯುಂಟಾಗುತ್ತಿದೆಯೇ ಹೊರತು ಇದರಲ್ಲಿ ಕಾಂಗ್ರೆಸ್ ಪಕ್ಷದ ಯಾವುದೇ ದ್ವೇಷ ರಾಜಕಾರಣವಿಲ್ಲ. ಕಾನೂನಿನ ಪ್ರಕಾರವಾಗಿ ವ್ಯವಹಾರ ನಡೆಸುವ ಅದೆಷ್ಟೋ ವ್ಯವಹಾರಸ್ಥರು ಇಂದಿಗೂ ಕಾರ್ಕಳದಲ್ಲಿ ನಿರಾತಂಕವಾಗಿ, ನೆಮ್ಮದಿಯಿಂದ ತಮ್ಮ ವ್ಯವಹಾರಗಳನ್ನು ನಡೆಸುತ್ತಿದ್ದಾರೆ. ಶಾಸಕ ಸುನೀಲ್ ಕುಮಾರ್ ಕೃಪಾಕಟಾಕ್ಷದೊಂದಿಗೆ ಅಕ್ರಮ ವ್ಯವಹಾರ ಹೊಂದಿರುವವರು ಕಾನೂನಿನ ಕೈಗೆ ಸಿಲುಕಿಕೊಂಡಾಗ ಕಾಂಗ್ರೆಸ್ ಪಕ್ಷವನ್ನು ದೂರಿದರೆ ಯಾವುದೇ ಪ್ರಯೋಜನವಿಲ್ಲ.

ಶಾಸಕ ಸುನೀಲ್ ಕುಮಾರ್ ತಮ್ಮ ಬೆಂಬಲಿಗರಿಗೆ ಕಾನೂನಿನ ಪಾಠ ಮಾಡಿ ಸರಿ ದಾರಿಯಲ್ಲಿ ವ್ಯವಹಾರ ನಡೆಸಲು ಕಿವಿ ಮಾತು ಹೇಳಬೇಕೇ ಹೊರತು ಪತ್ರಿಕಾಗೋಷ್ಠಿ ನಡೆಸಲು ಕುಮ್ಮಕ್ಕು ನೀಡಿ ಅಕ್ರಮ ವ್ಯವಹಾರ ನಡೆಸಲು ಇನ್ನಷ್ಟೂ ಪ್ರೋತ್ಸಾಹ ನೀಡಬಾರದು ಎಂದು ವಿವರಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top