ಅಕ್ರಮ ಗೋಸಾಗಾಟ: ಆರೋಪಿಗಳಿಗೆ ನ್ಯಾಯಾಂಗ ಬಂಧನ

Picture of RB NEWS

RB NEWS

Bureau Report

ಮೂಡುಬಿದಿರೆ : ಅಕ್ರಮ ಜಾನುವಾರ ಸಾಗಾಟ ಪ್ರಕರಣದ  ಮೂವರು ಆರೋಪಿಗಳಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

ಮನ್ಸೂರ್ ಅದ್ಯಪಾಡಿ ಅಲಿಯಾಸ್ ಮೊಹಮ್ಮದ್ ಮನ್ಸೂರ್, ಮೊಹಮ್ಮದ್ ಅಶ್ವದ್ ಮತ್ತು ಅಬ್ದುಲ್ ಮೊಹಮ್ಮದ್ ನಿಶಾಮ್  ಪ್ರಕರಣದ ಆರೋಪಿಗಳು.


ಆರೋಪಿಗಳು ಕಾನೂನು ಉಲ್ಲಂಘಿಸಿ ಮೂರು ಜಾನುವಾರುಗಳನ್ನು ಸಾಗಾಟಮಾಡುತ್ತಿದ್ದಾಗ ಪೊಲೀಸ್ ಬಲೆಗೆ ಸಿಕ್ಕು ಬಿದ್ದಿದ್ದರು.  ಆರೋಪಿಗಳ ವಿರುದ್ಧ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 178/2025 ಕಲಂ 111 ಬಿ.ಎನ್.ಎಸ್, 11(1)(ಡಿ) ಪ್ರಾಣಿ ಹಿಂಸಾ ಪ್ರತಿಬಂಧಕ ಕಾಯ್ದೆ ಮತ್ತು ಕಲಂ: 4, 5, 7, 12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಆಧ್ಯಾದೇಶ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಮೊದಲ ಆರೋಪಿ ಮನ್ಸೂರ್ ಅದ್ಯಪಾಡಿ ವಿರುದ್ಧ ಈ ಹಿಂದೆ ವಿವಿಧ ಪೊಲೀಸ್ ಠಾಣೆಗಳಲ್ಲಿ 29 ಪ್ರಕರಣಗಳು ದಾಖಲಾಗಿರುತ್ತದೆ.  ಎರಡನೇ ಆರೋಪಿ ಮೊಹಮ್ಮದ್ ಅಶ್ವದ್ ವಿರುದ್ಧ ಈ ಹಿಂದೆ ಉಳ್ಳಾಲದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯಡಿ ಒಂದು ಪ್ರಕರಣ ದಾಖಲಾಗಿತ್ತು. ಮೂರನೇ ಆರೋಪಿ ಅಬ್ದುಲ್ ಮೊಹಮ್ಮದ್ ನಿಶಾಮ್ ವಿರುದ್ಧ ದಾಖಲಾದ ಮೊದಲ ಪ್ರಕರಣ ಇದಾಗಿದೆ.

ಆರೋಪಿಗಳ ವಿರುದ್ಧ ಸಂಘಟಿತ ಅಪರಾಧ ಪ್ರಕರಣದಂತೆ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನವನ್ನು ವಿಧಿಸಿರುತ್ತದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top