ಅಂಗಡಿಯಲ್ಲಿ ದೋಚಿದರು: ರೈಲಿನಲ್ಲಿ ಸಿಕ್ಕಿ ಬಿದ್ದರು!
ಮಂಗಳೂರು: ನಗರದ ಪಂಪ್ವೆಲ್ ಸಮೀಪದ ಕಪಿತಾನಿಯಾದ ಬಿಎಚ್ ಟ್ರೇಡರ್ಸ್ ಎಂಬ ಹೆಸರಿನ ದಿನಸಿ ಅಂಗಡಿ ಯಿಂದ ಸುಮಾರು 10 ಲಕ್ಷ ರೂ. ನಗದು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತರನ್ನು ಉತ್ತರ ಪ್ರದೇಶ ಮೂಲದ ನಝೀರ್ ಯಾನೆ ಹೌಸಿಲ್ ಖಾನ್ (27) ಮತ್ತು ಇಲ್ಯಾಸ್ ಖಾನ್(22) ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
ತನ್ನ ಕಚೇರಿಯಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜು.8ರಂದು ಕಪಿತಾನಿಯೋದ ಬಿಎಚ್ ಟ್ರೇಡರ್ಸ್ ದಿನಸಿ ಅಂಗಡಿಯ ಶೆಟರ್ನ್ನು ಇಬ್ಬರು ಮೀಟಿ ಕ್ಯಾಶ್ ಕೌಂಟರ್ಲ್ಲಿದ್ದ ನಗದನ್ನು ಕಳ್ಳತನ ಮಾಡಿ ಪರಾರಿ ಯಾಗಿದ್ದರು. ಈ ಬಗ್ಗೆ ಅಂಗಡಿ ಮಾಲಕ ಉಮ್ಮರ್ ಫಾರೂಕ್ ಕಂಕನಾಡಿ ನಗರ ಠಾಣೆಗೆ ದೂರು ನೀಡಿದ್ದರು.
ತಕ್ಷಣ ಕಾರ್ಯಾಚರಣೆ ನಡೆಸಿದ ಕಂಕನಾಡಿ ನಗರ ಠಾಣೆಯ ನಿರೀಕ್ಷಕ ಟಿ.ಡಿ. ನಾಗರಾಜ್ ನೇತೃತ್ವದ ಪೊಲೀಸ್ ತಂಡವು ಕೃತ್ಯ ನಡೆದ 16 ಗಂಟೆಯಲ್ಲೇ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಕಂಕನಾಡಿ ನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.
ರಿಕ್ಷಾ ಚಾಲಕರಿಂದ ಮಾಹಿತಿ: ಕೃತ್ಯ ನಡೆದ ಸ್ಥಳ ಮತ್ತು ಪಂಪ್ವೆಲ್ ಸುತ್ತಮುತ್ತ ದೊರೆತ ಸಿಸಿಟಿವಿ ಫೂಟೇಜ್ ಆಧಾರ ದಲ್ಲಿ ರಾತ್ರಿ ವೇಳೆ ಸಂಚರಿಸಿದ ಸಂಶಯಿತರ ಬಗ್ಗೆ ರಿಕ್ಷಾ ಚಾಲಕರನ್ನು ಪೊಲೀಸರು ವಿಚಾರಿಸಿದಾಗ ಆ ದಿನ ರಾತ್ರಿ ಇಬ್ಬರು ಹಿಂದಿ ಮಾತನಾಡುವ ಸಂಶಯಿತರನ್ನು ರೈಲ್ವೆ ನಿಲ್ದಾಣಕ್ಕೆ ಬಿಟ್ಟ ಬಗ್ಗೆ ಮಾಹಿತಿ ದೊರಕಿತ್ತು. ಅದರಂತೆ ರೈಲ್ವೆ ನಿಲ್ದಾಣದ ಸಿಸಿಟಿವಿ ಪರಿಶೀಲಿಸಿ ಉತ್ತರ ಭಾರತಕ್ಕೆ ಪ್ರಯಾಣಿಸಬಹುದಾದ ರೈಲುಗಳ ವೇಳಾಪಟ್ಟಿ ಪರಿಶೀಲಿಸಿ ಎರ್ನಾಕುಲಂ-ಪುಣೆ ಎಕ್ಸ್ಪ್ರೆಸ್ನಲ್ಲಿ ಆ ದಿನ ರಾತ್ರಿ ಇಬ್ಬರು ಮಂಗಳೂರಿನಿಂದ ಪುಣೆಗೆ ಎರಡು ಟಿಕೆಟ್ ಬುಕ್ ಮಾಡಿ ಹೊರಟಿರುವ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದರು ಎಂದು ಕಮಿಷನ್ ತಿಳಿಸಿದ್ದಾರೆ.
ರಾತ್ರಿ 8:30ರ ವೇಳೆಗೆ ರೈಲು ಮಹಾರಾಷ್ಟ್ರದ ಸತಾರ ದಾಟಿ ಮುಂದೆ ಹೋಗುತ್ತಿದ್ದು 11:45ರ ಸುಮಾರಿಗೆ ಪುಣೆ ತಲು ಪುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ತಕ್ಷಣ ಮಂಗಳೂರಿನ ಆರ್ಪಿಎಫ್ ಪೊಲೀಸರ ಮೂಲಕ ಪುಣೆ ಆರ್ಪಿಎಫ್ ಪೊಲೀಸರನ್ನು ಸಂಪರ್ಕಿಸಿ ವ್ಯಕ್ತಿಗಳ ಚಹರೆ, ಧರಿಸಿದ ಬಟ್ಟೆಗಳ ಬಗ್ಗೆ ಮಾಹಿತಿ ರವಾನಿಸಿ ವಶಕ್ಕೆ ಪಡೆಯಲು ಸೂಚಿಸಿ ದ್ದರು. ಅಲ್ಲದೆ ತಾನು ಪುಣೆಯ ಜಿಆರ್ಪಿ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದೆ. ಅದರಂತೆ ಇಬ್ಬರು ಪಡೆಯಲಾಯಿತು ಎಂದರು.
ರೈಲ್ವೆ ಪೊಲೀಸರ ನೆರವು: ರಾತ್ರಿ 11:45ರ ವೇಳೆಗೆ ಪುಣೆಯ ಆರ್ಪಿಎಫ್ ಹಾಗೂ ಜಿಆರ್ಪಿ ಪೊಲೀಸರು ಇಬ್ಬರು ಸಂಶಯಿತರನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಇನ್ಸ್ಪೆಕ್ಟರ್ ಟಿ.ಡಿ. ನಾಗರಾಜ್ ನೇತೃತ್ವದ ಎಸ್ಸೆ ಶಿವಕುಮಾರ್, ಸಿಬ್ಬಂದಿ ಗಳಾದ ಜಯಾನಂದ, ರಾಜೇಸಾಬ್ ಮುಲ್ಯಾ ಚೇತನ್, ಪ್ರವೀಣ್ ತಂಡವು ಪುಣೆಗೆ ತೆರಳಿ ಜಿಆರ್ಪಿ ಪೊಲೀಸರ ವಶದ ಲ್ಲಿದ್ದ ಇಬ್ಬರನ್ನು ವಿಚಾರಿಸಿದಾಗ ಕೃತ್ಯ ಒಪ್ಪಿಕೊಂಡಿದ್ದಾರೆ. ಆರೋಪಿಗಳು ರೈಲ್ವೆ ಫ್ಲಾಟ್ಫಾರ್ಮ್ನ ಬೇರೊಂದು ಕಡೆ ಹಣದ ಬ್ಯಾಗ್ನ್ನು ಬಚ್ಚಿಟ್ಟಿರುವುದಾಗಿ ತಿಳಿಸಿದ್ದರು. ಈ ವೇಳೆ ಕಳವುಗೈದ 1.13 ಲಕ್ಷ ರೂ. ನಗದನ್ನು ವಶಪಡಿಸಲಾಗಿದೆ. ನಂತರ ಪುಣೆ ನ್ಯಾಯಾಲಯದಲ್ಲಿ ಟ್ರಾನ್ಸಿಟ್ ವಾರೆಂಟ್ ಪಡೆದು ಮಂಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ತಿಳಿಸಿದರು.






































