




Slim ಮಾಡುವ ಅನಿವಾರ್ಯತೆ ಇದೆಯೇ?
*ಡಾ.ಮಾಲತಿ ಪೈ
ಆಫೀಸಿನಲ್ಲಿ ನಿರಂತರ ಕುಳಿತು ಕೆಲಸ ಮಾಡುವವರಿಗಾಗಿ ಹೆಲ್ತ್ ಟಿಪ್ಸ್ ಕೆಲ ಜನರು ಬೆಳಗ್ಗೆ ಎದ್ದು ಒಂದು ಗಂಟೆ ವಾಕಿಂಗ್, ಜಾಗಿಂಗ್ ಮತ್ತು ಸೈಕ್ಲಿಂಗ್ ಅಂತಹ ವ್ಯಾಯಾಮಗಳನ್ನು ಮಾಡುತ್ತಾರೆ. ಇದು ಅವರನ್ನು ದಿನಪೂರ್ತಿ ಸಕ್ರಿಯವಾಗಿರುವ ಹಾಗೆ ನೋಡಿಕೊಳ್ಳುತ್ತದೆ. ಇನ್ನೂ ಕೆಲವರು ಬೆಳಗ್ಗೆ ಆಫೀಸಿಗೆ ಹೋದರೆ ಸಂಜೆ ಮನೆಗೆ ಬಂದು ಸಾಕಾಯ್ತು ಕೆಲಸ ಮಾಡಿ ಅಂತ ಒಂದು ಕಡೆ ಕುಳಿತುಕೊಂಡು ಬಿಡುತ್ತಾರೆ. ಹೀಗೆ ಹೆಚ್ಚು ನಡೆದಾಡದೆ ಮತ್ತು ದೈಹಿಕ ಚಟುವಟಿಕೆಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳದೆ ಇರುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ.
ಒಟ್ಟಿನಲ್ಲಿ ಹೇಳುವುದಾದರೆ ಈ ಆಫೀಸ್ ಕೆಲಸದಲ್ಲಿ ಜಡತ್ವ ಜೀವನಶೈಲಿಯನ್ನು ಮೈಗೂಡಿಸಿಕೊಂಡು ದೇಹದ ತೂಕ ಹೆಚ್ಚಾಗುತ್ತಿದೆ. ಈ ತೂಕವನ್ನು ಕಡಿಮೆ ಮಾಡಿಕೊಳ್ಳಲು ಇಲ್ಲಿವೆ ನೋಡಿ 5 ಸಲಹೆಗಳು. ಅನೇಕ ಮಂದಿ ಬೆನ್ನುನೋವು, ಕುತ್ತಿಗೆ ನೋವು, ಕಣ್ಣು ಮುಂತಾದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ದಿನವಿಡೀ ಕಚೇರಿಯಲ್ಲಿ ಕುಳಿತು ಕೆಲಸ ಮಾಡುವವರಲ್ಲಿ ಇಂತಹ ಸಮಸ್ಯೆಗಳು ಹೆಚ್ಚು ಕಂಡುಬರುತ್ತವೆ. ಕೆಲವರು ಕಚೇರಿಯಲ್ಲಿ ಇನ್ ಕೆಲವರು ಮನೆಯಲ್ಲಿ ಕುಳಿತು ದಿನವಿಡೀ ಕಂಪ್ಯೂಟರ್ ಅಥವಾ ಟಿವಿ ಇನ್ನಿತರ ಕೆಲಸಗಳನ್ನು ಮಾಡುತ್ತಾರೆ. ಹೀಗೆ ಹಲವು ಗಂಟೆಗಳ ಕಾಲ ಒಂದೇ ಖುರ್ಚಿಯಲ್ಲಿ ಕುಳಿತು ಕೆಲಸ ಮಾಡುವುದರಿಂದ ಅನೇಕ ಗಂಭೀರ ಮತ್ತು ಮಾರಣಾಂತಿಕ ಖಾಯಿಲೆಗಳು ಹೆಚ್ಚುತ್ತವೆ.
ಕುರ್ಚಿಯ ಮೇಲೆ ಕುಳಿತೆ ಮಾಡಬೇಕಾದಂತಹ ಸ್ಟ್ರೆಚ್ ಗಳನ್ನು ಮತ್ತು ಉಸಿರಾಟದ ವ್ಯಾಯಾಮಗಳನ್ನು ತಿಳಿದುಕೊಳ್ಳೋಣ. 1. ಕಣ್ಣುಗಳನ್ನು ಎಡ ಬಲ ಮೇಲೆ ಕೆಳಗೆ ಸುತ್ತುವ ಕ್ರಮವನ್ನು ಆಗಾಗ ಅನುಸರಿಸಿಕೊಳ್ಳಿ. 2. ಕಾಲಿನ ಪಾದವನ್ನು ಹಿಂದೆ ಮುಂದೆ ಹಲವಾರು ಬಾರಿ ಬಾಗಿಸಿರಿ. 3 ಪಾದವನ್ನು ಎರಡು ಪಾದಗಳನ್ನು ಅಂದರೆ ಒಂದು ಪಾದ ಆದ ನಂತರ ಇನ್ನೊಂದು ಪಾದವನ್ನು ರೋಟೆಟ್ ಆಗಿ ಪಾದವನ್ನು ತಿರುಗಿಸಿರಿ 3. ಎಮೋಷನಲ್ ಬ್ರೀದಿಂಗನ್ನು ಅಭ್ಯಾಸ ಮಾಡಿರಿ. 4. ಯೋಗ ನಡಿಗೆಯನ್ನು ಅಭ್ಯಾಸ ಮಾಡಿರಿ. ಬಲ ಭುಜವನ್ನು ಮತ್ತು ಎಡ ಭುಜವನ್ನು ವೃತ್ತಾಕಾರದಲ್ಲಿ ಸುತ್ತಿ ಡೀಪ್ ಬ್ರಿದನ್ನು ಮಾಡಿ. ಮೊಣ ಗಂಟನ್ನು ತಿರುಗಿಸುವುದು ನಂತರ ವಿರುದ್ಧ ಗತಿಯಲ್ಲಿ ತಿರುಗಿಸುವುದು. 5. ಅಜ್ಞಾಚಕ್ರವನ್ನು ಆಕ್ಟಿವೇಟ್ ಮಾಡುವುದು. 6.ಎಮೋಷನಲ್ ಬ್ರೀದಿಂಗನ್ನು ಮಾಡುವುದು.
ಖುರ್ಚಿ (Chair) ಯಿಂದ ಅನಾರೋಗ್ಯ ಖಂಡಿತ : ಈಗಿನ ಮುಂದುವರೆದ ಜಗತ್ತಿನಲ್ಲಿ ಖರ್ಚು ವೆಚ್ಚಗಳು ಹೆಚ್ಚಿರುತ್ತವೆ. ಆದ್ದರಿಂದ ಎಲ್ಲರೂ ದುಡಿಯುವುದು ಅನಿವಾರ್ಯವಾಗಿದೆ. ಕೆಲಸ ಮಾಡಿ ಹಣ ಗಳಿಸುವುದು ಒಳ್ಳೆಯದೇ ಆದರೂ ಹೆಚ್ಚಿನ ಸಮಯ ಖುರ್ಚಿಯ ಮೇಲೆ ಕುಳಿತು ಕೆಲಸ ಮಾಡುವುದು ನಮ್ಮ ಜೀವಕ್ಕೆ ಅಪಾಯ ಉಂಟು ಮಾಡುತ್ತದೆ ಡೆಸ್ಕ್ (desk) ಜಾಬ್ ಒಬ್ಬ ವ್ಯಕ್ತಿಯ ಸಾವಿನ ಅಪಾಯವನ್ನು ಪ್ರತಿಶತ 16 ರಷ್ಟು ಹೆಚ್ಚಿಸುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ.
ಸುಮಾರು 17 ವರ್ಷಗಳ ಹಿಂದೆ ನಾನು ಅಣ್ಣಾಮಲೈ ಯೂನಿವರ್ಸಿಟಿಲ್ಲಿ ಎಂ ಎಸ್ ಸಿ ಇನ್ ಯೋಗ
ಶಿಕ್ಷಣವನ್ನು ಪಡೆಯುವ ಸಂದರ್ಭದಲ್ಲಿ ವಿದೇಶಿ ಮಹಿಳೆ ತಮ್ಮ ಸಂಪ್ರಬಂಧವನ್ನು ದಾಖಲೆ ಸಮೇತ ಪ್ರಸ್ತುತಪಡಿಸಿದ್ದರು ವರದಿಯ ತುಣುಕು ತಮ್ಮ ಮುಂದೆ ಇಡುತ್ತಿದ್ದೇನೆ
JAMA ನೆಟ್ ವರ್ಕ್ ಓಪನ್ ಜರ್ನಲ್ ನಲ್ಲಿ ಪ್ರಕಟವಾದ ವರದಿ ಮತ್ತು ಸುಮಾರು 13 ವರ್ಷಗಳಲ್ಲಿ 4,81,688 ಜನರ ಮೇಲೆ ನಡೆಸಿದ ಸಂಶೋಧನೆ (Research) ಯಲ್ಲಿ ಈ ವಿಷಯ ಸಾಬೀತಾಗಿದೆ. ಬಹಳ ಹೊತ್ತು ಕುಳಿತಲ್ಲೇ ಕೆಲಸ ಮಾಡುವ ಜನರಿಗೆ ಹೃದಯ ರಕ್ತನಾಳದ ಖಾಯಿಲೆ (ಸಿವಿಡಿ)ಯ ಅಪಾಯವೂ ಪ್ರತಿಶತ 30 ರಷ್ಟು ಹೆಚ್ಚಿರುತ್ತದೆ ಎಂದು ಅಧ್ಯಯನಗಳು ತಿಳಿಸಿವೆ. ಮನುಷ್ಯನ ಶರೀರದ ರಚನೆ ಅವನು ನಡೆಯಲು, ಓಡಲು, ಜಿಗಿಯಲು ಅನುಕೂಲವಾಗಿದೆ. ಆತನ ದೇಹದ ರಚನೆ ಹೀಗಿರುವಾಗ ಒಬ್ಬ ಮನುಷ್ಯ ನಡೆದಾಡದೇ ಹೆಚ್ಚು ಹೊತ್ತು ಕುಳಿತಿರುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ವ್ಯಕ್ತಿ ಹಲವು ಗಂಟೆಗಳು ಕುಳಿತಿರುವುದರಿಂದ ಆತ ರಕ್ತದೊತ್ತಡ, ಸಕ್ಕರೆ ಖಾಯಿಲೆ, ಬೊಜ್ಜು, ಮೆಟಾಬಾಲಿಕ್ ಸಿಂಡ್ರೋಮ್. ಹೃದಯ ಮತ್ತು ಕ್ಯಾನ್ಸರ್ ನಂತಹ ಗಂಭೀರ ಖಾಯಿಲೆಗಳಿಗೆ ಗುರಿಯಾಗುತ್ತಾನೆ.
8 ಗಂಟೆಗೂ ಹೆಚ್ಚಿನ ಕಾಲ ಕುಳಿತಿರಬೇಡಿ : ಒಬ್ಬ ವ್ಯಕ್ತಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢವಾಗಿದ್ದಾಗ ಮಾತ್ರ ಆತ ಆರೋಗ್ಯವಂತನಾಗಿರಲು ಸಾಧ್ಯ. ಆದರೆ ಈಗಿನ ಒತ್ತಡಹಾಗೂ ಬಿಡುವಿಲ್ಲದ ಜೀವನಶೈಲಿಯಲ್ಲಿ ದೈಹಿಕ ಚಟುವಟಿಕೆಗಳು ಕಡಿಮೆಯಾಗಿವೆ. ಅನೇಕ ಮಂದಿ ದಿನಪೂರ್ತಿ ಕಂಪ್ಯೂಟರ್, ಮೊಬೈಲ್ ಮುಂದೆ ಕುಳಿತಿರುತ್ತಾರೆ. ಕೆಲವೊಮ್ಮೆ ನಾವು ಕುಳಿತುಕೊಳ್ಳುವ ಭಂಗಿ ಕೂಡ ನಮ್ಮ ಬೆನ್ನು ನೋವು ಹಾಗೂ ಕುತ್ತಿಗೆ ನೋವಿಗೆ ಕಾರಣವಾಗುತ್ತದೆ. ಒಬ್ಬ ವ್ಯಕ್ತಿ ದಿನಕ್ಕೆ ಎಂಟು ಗಂಟೆಗಳಿಗಿಂತ ಹೆಚ್ಚು ಕುಳಿತಿದ್ದರೆ ಅದರಿಂದ ಸಾವಿನ ಅಪಾಯ, ಸ್ಥೂಲಕಾಯತೆಯ ಅಪಾಯ ಹೆಚ್ಚಿಗೆ ಇದೆ ಹಾಗೂ ಕುಳಿತಿರುವುದು ಧೂಮಪಾನದಷ್ಟೇ ಅಪಾಯಕರ ಎಂಬುದನ್ನು ಅಧ್ಯಯನಗಳು ಸಾಬೀತುಪಡಿಸಿವೆ.
ಹೆಚ್ಚಿನ ಸಮಯ ಕುಳಿತು ಕೆಲಸ ಮಾಡುವವರಿಗೆ ದೈಹಿಕ ಚಟುವಟಿಕೆಯ ಅವಶ್ಯಕತೆ ಇರುತ್ತದೆ. ಬ್ರಿಟಿಷ್ ಜರ್ನಲ್ ಆಫ್ ಸ್ಪೋರ್ಟ್ ಮೆಡಿಸಿನ್ ನಲ್ಲಿ ಪ್ರಕಟವಾದ ಅಧ್ಯಯನ, ಕಚೇರಿಯಲ್ಲಿ ಕುಳಿತು ಕೆಲಸ ಮಾಡುವವರಿಗೆ ದಿನವೊಂದಕ್ಕೆ 22 ನಿಮಿಷಗಳ ದೈಹಿಕ ಚಟುವಟಿಕೆಯ ಅಗತ್ಯವಿದೆ. ದೈಹಿಕ ಚಟುವಟಿಕೆಯು ಕುಳಿತು ಕೆಲಸ ಮಾಡುವುದರಿಂದ ಉಂಟಾಗುವ ದುಷ್ಪರಿಣಾಮಗಳನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದೆ. ವಾರದಲ್ಲಿ 150 ನಿಮಿಷಗಳ ದೈಹಿಕ ಚಟುವಟಿಕೆ, ಚುರುಕಾದ ನಡಿಗೆ, ವ್ಯಾಯಾಮ, ಬೆಟ್ಟ ಹತ್ತುವುದು ಅಥವಾ ತೋಟಗಾರಿಕೆ ಮುಂತಾದ ಚಟುವಟಿಕೆಯನ್ನು ತೊಡಗುವುದರಿಂದ ಕೆಲವು ಆರೋಗ್ಯ ಸಮಸ್ಯೆಗಳಿಂದ ದೂರವಿರಬಹುದು ಎಂದು ಅಧ್ಯಯನಗಳು ಹೇಳುತ್ತವೆ. ಕೆಲಸದ ಸಮಯದ ನಡುವೆ 5 ನಿಮಿಷ ವಿಶ್ರಾಂತಿ ತೆಗೆದುಕೊಂಡು ವ್ಯಾಯಾಮ ಮಾಡುವುದರಿಂದಲೂ ಸ್ನಾಯುಗಳು ಸಡಿಲಗೊಳ್ಳುತ್ತವೆ.
ನಮ್ಮ ದೇಹ ರಚನೆ ಇರೋದು ಇಡೀ ದಿನ ಕುಳಿತುಕೊಳ್ಳೋದಕ್ಕೆ ಅಲ್ಲ. ನಿಂತು, ನಡೆದಾಡಿ ಕೆಲಸ ಮಾಡುವ ಸಾಮರ್ಥ್ಯ ನಮಗಿದೆ. ಆದ್ರೆ ದಿನದಲ್ಲಿ ಹತ್ತು ಗಂಟೆಗೂ ಹೆಚ್ಚು ಕಾಲ ಕುಳಿತೇ Slim ಮಾಡುವ ಅನಿವಾರ್ಯತೆ ಅನೇಕರಿಗಿದೆ.


































