
ಕಾರ್ಕಳ ವಿಧಾನಸಭಾ ಕ್ಷೇತ್ರದ ಮುಖ್ಯರಸ್ತೆಗಳ ನಿರ್ಮಾಣಕ್ಕೆ ರೂ.13.00 ಕೋಟಿ ಅನುದಾನ ಬಿಡುಗಡೆ
ಕಾರ್ಕಳ ಜ:24 :ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಹಾದು ಹೋಗುವ ಲೋಕೋಪಯೋಗಿ ಇಲಾಖೆ ಅಧೀನದಲ್ಲಿ ಬರುವ ಪ್ರಮುಖ ನಗರಗಳನ್ನು ಸಂಪರ್ಕಿರಾಜ್ಯ ಹೆದ್ದಾರಿಗಳನ್ನು ಹಾಗೂ ಜಿಲ್ಲಾ ಮುಖ್ಯ ಸಂಪರ್ಕ ರಸ್ತೆಗಳನ್ನು ಮತ್ತು ಸೇತುವೆಗಳನ್ನು ಅಭಿವೃದ್ಧಿಪಡಿಸಲು ಶಾಸಕ ವಿ ಸುನಿಲ್ ಕುಮಾರ್ ರವರು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರು.

ಪರಿಣಾಮವಾಗಿ ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಲೋಕೋಪಯೋಗಿ ಇಲಾಖೆಯಿಂದ ಒಟ್ಟು ರೂ. 13.00 ಕೋಟಿ ಅನುದಾನ ಬಿಡುಗಡೆಯಾಗಿದೆ.


ಈ ಕೆಳಗಿನ ರಸ್ತೆಗಳು ಮತ್ತು ಸೇತುವೆಗಳು ಈ ಅನುದಾನದಲ್ಲಿ ಅಭಿವೃದ್ಧಿಗೊಂಡು ಸಾರ್ವಜನಿಕ ಸಂಚಾರಕ್ಕೆ ಇನ್ನಷ್ಟು ಅನುಕೂಲಕರವಾಗಲಿದೆ.
ಕಾರ್ಕಳ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿ ಮಂಜೂರಾದ ಕಾಮಗಾರಿಗಳ ವಿವರ
- ಮುದ್ರಾಡಿ – ಹೆಬ್ರಿ-ಬ್ರಹ್ಮಾವರ ರಾಜ್ಯ ಹೆದ್ದಾರಿ ಮುದ್ರಾಡಿ ಪೇಟೆಯಿಂದ ಜರುವತ್ತು ಸೇತುವೆ ವರೆಗೆರಸ್ತೆಯ ನವೀಕರಣಗೊಳಿಸುವುದು. ರೂ.120.00ಲಕ್ಷ.
- ಸುಬ್ರಹ್ಮಣ್ಯ-ಉಡುಪಿ ರಾಜ್ಯ ಹೆದ್ದಾರಿ-37ರ ಚೆಂಡೆ ಬಸದಿ ಕ್ರಾಸ್-ಬಜಗೋಳಿವರೆಗೆ ರಸ್ತೆಯನ್ನು ನವೀಕರಣಗೊಳಿಸುವುದು. ರೂ. 150.00 ಲಕ್ಷ
- ಕಾಂಜರಕಟ್ಟೆ – ಇನ್ನಾ – ಸಾಂತೂರುಕೊಪ್ಲ ಮುಂಡ್ಕೂರು ಕಜೆಮಾರಿಗುಡಿ-ಸಚ್ಚರಿಪೇಟೆ ಜಿಲ್ಲಾ ಮುಖ್ಯ ರಸ್ತೆಯನ್ನು ಅಭಿವೃದ್ಧಿಗೊಳಿಸುವುದು. ರೂ 100.00 ಲಕ್ಷ
- ಬೆಳುವಾಯಿ-ಕಾಂತಾವರ-ಮಂಜರಪಲ್ಕೆ ಜಿಲ್ಲಾ ಮುಖ್ಯ ರಸ್ತೆಯ ವಂಜಾರಕಟ್ಟೆಯಿಂದ ಬೋಪಾಡಿ ಸೇತುವೆ ವರೆಗೆ ರಸ್ತೆಯನ್ನು ಅಭಿವೃದ್ಧಿಗೊಳಿಸುವುದು. ರೂ 180.00 ಲಕ್ಷ
- ಅಜೆಕಾರು-ಹರ್ಮುಂಡೆ -ಜಾರ್ಕಳ-ಕೆರವಾಶೆ ಜಿಲ್ಲಾಮುಖ್ಯ ರಸ್ತೆಯನ್ನು ಅಭಿವೃದ್ಧಿಪಡಿಸುವುದು.ರೂ. 250.00 ಲಕ್ಷ.
- ದುರ್ಗಾ -ಮುಂಡ್ಲಿ- ಶಿರ್ಲಾಲು ಜಿಲ್ಲಾ ಮುಖ್ಯ ರಸ್ತೆಯನ್ನು ಅಭಿವೃದ್ಧಿಪಡಿಸುವುದು. ರೂ. 250.00 ಲಕ್ಷ
- ಮುಡಾರು ರಾಜ್ಯಹೆದ್ದಾರಿ ರಾಮೇರುಗುತ್ತು ಬಳಿ ಶಿಥಿಲಗೊಂಡಿರುವ ಕಿರಿದಾದ ಹಳೆಯ ಸೇತುವೆಯನ್ನು ಮರುನಿರ್ಮಾಣ ಮಾಡುವುದು ರೂ 100.00 ಲಕ್ಷ.
- ಬೆಳುವಾಯಿ-ಕಾಂತಾವರ-ಮಂಜರಪಲ್ಕೆ ಜಿಲ್ಲಾಮುಖ್ಯ ರಸ್ತೆಯಲ್ಲಿ ಅತಿಯಾದ ಮಳೆಯಿಂದ ಹಾನಿಗೊಂಡಿರುವ ಕಿರಿದಾದ ಸೇತುವೆಯನ್ನು (ಬರಬೈಲು) ಮರುನಿರ್ಮಾಣ. ರೂ. 150.00 ಲಕ್ಷ.





































