ಕಾರ್ಕಳ ರಾಮಕ್ಷತ್ರಿಯ ಸಂಘ(ರಿ) ವಾರ್ಷಿಕೋತ್ಸವ-2024

Picture of RB NEWS

RB NEWS

Bureau Report

ಸಂಘದ ಅಧ್ಯಕ್ಷ ಗುರುಪ್ರಸಾದ್ ರಾವ್ ಅಜೆಕಾರ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರಗಲಿರುವುದು. ಸಿಂಡಿಕೇಟ್ ಬ್ಯಾಂಕ್ ನ ನಿವೃತ್ತ ಪ್ರಬಂಧಕ ಎ. ನಾರಾಯಣ ಸೇರ್ವೆಗಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.


ಮುಖ್ಯ ಅತಿಥಿಯವರಾಗಿ ಕೆ. ಶ್ರೀಕಾಂತ್, ಡಿ.ವೈ.ಎಸ್.ಪಿ ರಾಜ್ಯ ಗುಪ್ತ ವಾರ್ತೆ, ಮಂಗಳೂರು, ಸದಾಶಿವ ರಾವ್ .ಕೆ. ನಿವೃತ್ತ ಎ.ಎಸ್.ಐ ಕಾರ್ಕಳ, ಕೆ. ದಿನೇಶ್ ರಾವ್, ಉದ್ಯಮಿಗಳು, ಎಲ್ಕೋ ಮತ್ತು ಕ್ಯಾಡ್ ಸಂಸ್ಥೆ, ಮಂಗಳೂರು ಹಾಗೂ ಮಾಜಿ ಅಧ್ಯಕ್ಷರು, ರಾಮಕ್ಷತ್ರಿಯ ಸಂಘ(ರಿ)ಮಂಗಳೂರು,
ಶಕುಂತಳಾ ರಾವ್ ಮಾಜಿ ಉಪಾಧ್ಯಕ್ಷರು, ಗ್ರಾಮ ಪಂಚಾಯತ್ ನೀರೆ, ಆದರ್ಶ್.ವಿ.ರಾವ್, ಸಾಪ್ಟ್ ವೇರ್, ಇಂಜಿನಿಯರ್, ಬೆಂಗಳೂರು ಭಾಗವಹಿಸಲಿರುವರು.

ಪಾರ್ಥಸಾರಥಿ, ಅಧ್ಯಕ್ಷರು ಶ್ರೀರಾಮ ಚಾರಿಟೇಬಲ್ ಟ್ರಸ್ಟ್(ರಿ)ಕಾರ್ಕಳ ಹಾಗೂ ಗೌರವಾಧ್ಯಕ್ಷರು, ರಾಮಕ್ಷತ್ರಿಯ ಸಂಘ(ರಿ)ಕಾರ್ಕಳ, ಪ್ರಸನ್ನ ಕೆ.ಬಿ, ಗೌರವಾಧ್ಯಕ್ಷರು ರಾಮಕ್ಷತ್ರಿಯ ಸಂಘ(ರಿ)ಕಾರ್ಕಳ ಮತ್ತು
ಸುಕೇಶ್. ಎನ್.ರಾವ್ ಬೈಲೂರು, ಸಾಂಸ್ಕೃತಿಕ ಕಾರ್ಯದರ್ಶಿ, ರಾಮಕ್ಷತ್ರಿಯ ಸಂಘ(ರಿ)ಕಾರ್ಕಳ ಇವರು ಗೌರವ ಉಪಸ್ಥಿತರಿರುವರು.

ಯಕ್ಷಗಾನ ಸ್ತ್ರೀ ವೇಷಧಾರಿ, ಪೆರ್ಡೂರು ಮೇಳದ ಸುಧೀರ್ ಉಪ್ಪೂರು,. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಹಾಗೂ ಕಾಂತಾರ ಚಲನ ಚಿತ್ರಗಳ ನಟ ರಂಜನ್ ಕಾಸರಗೋಡು, ಕಂಬಳ ಕೋಣಗಳ ಯಜಮಾನ ಉಮೇಶ್ ರಾವ್ ಹಿತ್ತಲು ಮನೆ ಅಂಡಾರು, ಹಾಗೂ ಶಿರ್ಲಾಲು ಕುಕ್ಕುಜೆ ತ್ರಿಶಾ ಸಂಜೀವ ಸೇರ್ವೆಗಾರ್ ರವರನ್ನು ಸನ್ಮಾನಿಸಲಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಸಮಾಜದ ಹಿರಿಯ-ಕಿರಿಯರಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top