ಸಾಣೂರು ಶಾಂಭವಿ ನದಿ ಸೇತುವೆಯ ರಸ್ತೆ ಬದಿ ಭೂಕುಸಿತ

Picture of RB NEWS

RB NEWS

Bureau Report

ಕಾರ್ಕಳ ::ಕಳೆದ ಕೆಲದಿಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಕಾರ್ಕಳದ ಸಾಣೂರು ಶಾಂಭವಿ ಸೇತುವೆಯ ಎಡ ಭಾಗದಲ್ಲಿ ರಸ್ತೆಯ ಬದಿಯಲ್ಲಿಯೇ ಮಣ್ಣು ಕುಸಿತಗೊಳ್ಳುತ್ತಿದೆ. ಇದೇ ರೀತಿ ಮುಂದುವರಿದರೆ ರಸ್ತೆ ಸಂಪರ್ಕ ಕಡಿದುಕೊಳ್ಳುವ ಭೀತಿ ಎದುರಾಗಿದೆ.

ಘಟನೆ ನಡೆದಿರುವ ಬೆನ್ನಲ್ಲೇ ರಾಷ್ಟ್ರೀಯ ಹೆದ್ದಾರಿ ಇಲಾಖೆ ಮತ್ತು ಗುತ್ತಿಗೆದಾರ ಕಂಪನಿ ದಿಲೀಪ್ ಬಿಲ್ಡ್ ಕಾನ್ ಸಂಸ್ಥೆಯವರು ಅಗತ್ಯ ಕ್ರಮ ಕೈಗೊಂಡಿದ್ದಾರೆ.

ಘಟನಾ ಸ್ಥಳದಲ್ಲಿ ಎಚ್ಚರಿಕೆಯ ಫಲಕವನ್ನು ಅಳವಡಿಸಿ ವಾಹನವನ್ನು ನಿಧಾನ ರೀತಿಯಲ್ಲಿ ಚಲಾಯಿಸುವಂತೆ ಎಚ್ಚರಿಸಿದ್ದಾರೆ. ಎ

ನಿರ್ಲಕ್ಷಿಸಿದರೆ ಭಾರೀ ಅನಾಹುತ….

ರಸ್ತೆ ಕುಸಿತವಾಗುತ್ತಿರುವ ಭಾಗದಲ್ಲಿ ಈ ಹಿಂದೆ ಸೇತುವೆ ಬಳಿಯಿಂದ ಕೆಳಗಿರುವ ಭತ್ತದ ಗದ್ದೆಯಾಗಿ ಸಮೀಪದ ಮನೆಗಳಿಗೆ ಹೋಗಲು ಮೆಟ್ಟಿಲಿನ ವ್ಯವಸ್ಥೆ ಇತ್ತು. ಇದೀಗ ಅದೇ ಭಾಗದಲ್ಲಿ ಭೂ ಕುಸಿತವಾಗಿ ಮೆಟ್ಟಿಲುಗಳು ಧರಶಾಯಿಯಾಗಿದೆ. ಈ ಕಾರಣದಿಂದಾಗಿ ಸಂಪರ್ಕ ವ್ಯವಸ್ಥೆ ಸಂಪೂರ್ಣ ಕಳಚಿಕೊಂಡಿದೆ.

ಪ್ರಸ್ತುತ ಕುಸಿದು ಕೊಂಡಿರುವ ಭಾಗದಲ್ಲಿ ಕಲ್ಲುಗಳನ್ನು ಹಾಕಿ ಮತ್ತಷ್ಟು ಕುಸಿಯದಂತೆ ಕೂಡಲೇ ತಡೆಯೊಡ್ಡುವ ಕ್ರಮ ಕೈಗೊಳ್ಳಬೇಕೆಂದು ಸಾಣೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಾಣೂರು ನರಸಿಂಹ ಕಾಮತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top