ಹೊಸ್ಮಾರಿಗೆ ಅಗಮಿಸಲಿರುವ ಪರಮಪೂಜ್ಯ ಆರ್ಯಿಕ ಶ್ರೀ 105 ಮುಕ್ತಿ ಶ್ರೀ ಮಾತಾಜೀ

Picture of RB NEWS

RB NEWS

Bureau Report

ಕಾರ್ಕಳ : ಪರಮಪೂಜ್ಯ ಆರ್ಯಿಕ ಶ್ರೀ 105 ಮುಕ್ತಿ ಶ್ರೀ ಮಾತಾಜಿ ಯವರ37 ನೇ ಚಾತುರ್ಮಾಸ ವರ್ಷಾಯೋಗ ವನ್ನು ಹೊಸ್ಮಾರು ಶ್ರೀ ಕ್ಷೇತ್ರ ಸಿದ್ಧರವನ ಭಗವಾನ್ ಶ್ರೀ 1008ಮಹಾವೀರ ಸ್ವಾಮಿ ಬಸದಿಯಲ್ಲಿ ಆಚರಿಸುವ ನಿರ್ಧರಿಸಲಾಗಿದೆ.

ಆ ಪ್ರಯುಕ್ತ ಪೂಜ್ಯ ಮಾತಾಜಿಯವರು ಜುಲಾಯಿ 17ರ ಬೆಳಿಗ್ಗೆ 7:30 ಕ್ಕೆ ಉದ್ಯಮಿ ಪ್ರೇಮ್ ಕುಮಾರ್ ರವರ ಮನೆಯಿಂದ ಮಂಗಲ ವಿಹಾರ ಹೊರಟು ಬೆಳಿಗ್ಗೆ 8:30ಕ್ಕೆ ಬಸದಿಗೆ ಪುರಪ್ರವೇಶ ಮಾಡಲಿದ್ದಾರೆ.

ಧರ್ಮ ಪ್ರೇಮಿ ಬಂಧುಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸಮಯಕ್ಕೆ ಸರಿಯಾಗಿ ಆಗಮಿಸಿ ಈ ಶುಭಕಾರ್ಯದಲ್ಲಿ
ಭಾಗವಹಿಸಿ, ಮೆರವಣಿಗೆಯ ಮೆರಗನ್ನು ಹೆಚ್ಚಿಸುವ ಮೂಲಕ ಧರ್ಮಪ್ರಭಾವನೆಯ ಜೊತೆಗೆ ಪುಣ್ಯಲಾಭವನ್ನು ಪಡೆದುಕೊಳ್ಳಬೇಕಾಗಿ ಪ್ರಕಟಣೆ ತಿಳಿಸಿದೆ‌.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top