ಆನೆ ಭಯದಿಂದ ಕಂಗೆಟ್ಟ ಮಕ್ಕಳಿಗೆ ಜೀಪ್ ವ್ಯವಸ್ಥೆ :ಸಾಮಾಜಿಕ ಕಳಕಳಿ ಮೆರೆದ ಅರಣ್ಯ ಇಲಾಖೆ.

Picture of RB NEWS

RB NEWS

Bureau Report

ಹೆಬ್ರಿ : ನಾಡಾಲು ಗ್ರಾಮದ ಸೋಮೇಶ್ವರ ಅಭಯಾರಣ್ಯ ವ್ಯಾಪ್ತಿಯಲ್ಲಿ ಅನೇಕ ದಿನಗಳಿಂದ ಒಂಟಿ ಸಲಗ ಬೀಡು ಬಿಟ್ಟು ಜನರಿಗೆ ಜೀವ ಭಯ ಉಂಟುಮಾಡಿದ್ದು, ಇಲ್ಲಿನ ಮಕ್ಕಳನ್ನು ಶಾಲೆಗೆ ಕರೆದೊಯ್ಯಲು ಹೆಬ್ರಿ ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಗೌರವ್ ಎಸ್‌. ಎಂ.ರವರು ಜೀಪ್ ವ್ಯವಸ್ಥೆ ಮಾಡಿ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.

ಪರಿಸರದ ಮಕ್ಕಳಿಗೆ ಶಾಲೆಗೆ ಹೋಗಲು ಭಯವಿರುವ ಬಗ್ಗೆ ಹೆಬ್ರಿ ವನ್ಯಜೀವಿ ವಲಯ ಅರಣ್ಯಾಧಿಕಾರಿ ಗೌರವ್ ಎಸ್.ಎಂ. ಪತ್ರ ಬರೆದಾಗ ಉನ್ನತ ಅಧಿಕಾರಿಗಳು ಪರಿಶೀಲನೆ ನಡೆಸಿ ಸಿಸಿಎಫ್ ಕರಿಕಾಳನ್, ಡಿಸಿಎಫ್ ಶಿವರಾಮ ಬಾಬು, ಎಸಿಎಫ್ ಪ್ರಕಾಶ್ ಪೂಜಾರಿ, ಆರ್‌ಎಫ್‌ಒ ಗೌರವ್ ಎಸ್‌.ಎಂ., ಡಿಆರ್‌ಎಫ್‌ಒ ಜುನೈದ್ ಅಬ್ದ‌ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಜೀಪ್ ವ್ಯವಸ್ಥೆ ಮಾಡಲಾಗಿದೆ.

ಗಜ ಓಡಿಸಲು ಪ್ರತಿಭಟನೆ: ಆನೆ ಓಡಿಸಬೇಕೆಂದು ಊರಿನ ಗ್ರಾಮಸ್ಥರೆಲ್ಲರೂ ಬೃಹತ್ ಮಟ್ಟದ ಪ್ರತಿಭಟನೆ ನಡೆಸಿದ್ದರು. ಇದು ಅರಣ್ಯ ಇಲಾಖೆ ಮೇಲೆ ಬಹಳಷ್ಟು ಒತ್ತಡ ಬೀರಿತು. ಅರಣ್ಯ ಇಲಾಖೆ ಸದಾ ಜನತೆಯೊಂದಿಗೆ ಇದೆ ಎಂದು ತೋರಿಸಿಕೊಡಲು ಇದೊಂದು ವಿನೂತನ ಕಾರ್ಯಕ್ರಮ.

………………………………………..

ಜ್ಯೋತಿ ಪಾಲಕರು.
………………………………………..

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top