ಜನಸ್ಪಂದನ ಸಭೆಯಲ್ಲಿ ಪರಶುರಾಮ ಪ್ರತಿಮೆ ವಿವಾದ: ಚಿತ್ರೀಕರಣ ಮಾಡದಂತೆ ತಾಕೀತು ಮಾಡಿದ ಶಾಸಕ ಹಾಗೂ ಪುರಸಭಾ ಸದಸ್ಯ ನಡುವೆ ವಾಗ್ವಾದ
ಕಾರ್ಕಳ: ನಗರದ ಪೆರ್ವಾಜೆಯ ನಾರಾಯಣಗುರು ಸಭಾಭವನದಲ್ಲಿ ಆಯೋಜಿಸಿದ ಜನಸ್ಪಂದನ ಕಾರ್ಯಕ್ರಮದಲ್ಲಿ ಪರಶುರಾಮ ಪ್ರತಿಮೆಯ ನೈಜ ವಿಚಾರದ ಕುರಿತು ನಾಗರಿಕರೊಬ್ಬರು ಜಿಲ್ಲಾಧಿಕಾರಿಯವರಲ್ಲಿ ಕೆಲವೊಂದು ಪ್ರಶ್ನೆಗಳನ್ನು ಮುಂದಿಟ್ಟಿದ್ದು, ಇದರ ಕುರಿತು ಪುರಸಭಾ ಸದಸ್ಯ ಶುಭದರಾವ್ ಅವರು ಚಿತ್ರೀಕರಣ ಮಾಡುತ್ತಿದ್ದ ವಿಚಾರದಲ್ಲಿ ಶಾಸಕ ಅಕ್ಷೇಪ ವ್ಯಕ್ತಪಡಿಸಿ ಮೊಬೈಲ್ಗಳನ್ನು ಸೀಜ್ ಮಾಡುವಂತೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಸೂಚನೆ ನೀಡಿದ್ದರು. ಇದರಿಂದ ಆಕ್ರೋಶ ಭರಿತಗೊಂಡ ಪುರಸಭಾ ಸದಸ್ಯ ಶುಭದ ರಾವ್ ಇದು ಸಾರ್ವಜನಿಕ ಸಭೆ. ಯಾಕೆ ಮೊಬೈಲ್ ಸೀಸ ಮಾಡಬೇಕೆಂದು ಸಭೆಯಲ್ಲಿ ಪ್ರಶ್ನೆ ಮುಂದಿಟ್ಟರು. ಅಗ ಶಾಸಕ ಸುನೀಲ್ ಕುಮಾರ್ ಹಾಗೂ ಪುರಸಭಾ ಸದಸ್ಯ ಶುಭದರಾವ್ ನಡುವೆ ವಾಗ್ವಾದವೂ ನಡೆದಿತ್ತು. ಈ ಎಲ್ಲಾ ಬೆಳವಣಿಗೆಯ ನಡುವೆ ವೇದಿಕೆಯಿಂದ ಕೆಳಗಿಳಿದ ಡಿವೈಎಸ್ಪಿ ಅರವಿಂದ ಕಲ್ಲಗುಚ್ಚಿ ಅವರು, ವಿಡಿಯೋ ಚಿತ್ರೀಕರಣ ನಡೆಸದಂತೆ ಪುರಸಭಾ ಸದಸ್ಯ ಶುಭದ ರಾವ್ ಅವರಿಗೆ ತಾಕೀತು ಮಾಡಿದ್ದರು. ಇಬ್ಬರ ನಡುವೆ ಮಾತಿನ ಚಕಮಕಿ ಮುಂದುವರೆದಿತ್ತು. ಬಳಿಕ ಡಿವೈಎಸ್ಪಿ ಚಪ್ಪಾಳೆ ತಟ್ಟುತ್ತಾ, ನೀವು ಮಾಡುವುದನ್ನು ಮಾಡಿ ಎಂದು ವ್ಯಂಗ್ಯವಾಡುತ್ತಾ, ಶುಭದ ರಾವ್ ವಿರುದ್ದ ಸವಾಲೆಸೆದ ಬೆಳವಣಿಗೆ ರಾಜಕೀಯ ತಿರುವು ಪಡೆದುಕೊಂಡಿದೆ.



ಕಾಟಾಚಾರಕ್ಕೆ ನಡೆದ ಜನಸ್ಪಂದನೆ
ಸರಕಾರದ ಈ ಕಾರ್ಯಕ್ರಮಕ್ಕೆ ಬಾರೀ ನಿರೀಕ್ಷೆಯನ್ನುಟ್ಟುಕೊಂಡು ಜನತೆ ಆಗಮಿಸಿದ್ದರು. ಆದರೆ ಇಲ್ಲಿ ಮಾತ್ರ ಎಲ್ಲಾ ವಿಚಾರವನ್ನು ಗೌಪ್ಯ ಇಡಲಾಗಿತ್ತು. ಅರ್ಜಿ ಸ್ವೀಕೃತಿಯಾಗಲಿ, ವಿಲೇ ಮಾಡಿದ ವಿಚಾರವಾಗಲಿ ಯಾವುದು ಕೂಡಾ ಬಹಿರಂಗವಾಗಿಲ್ಲ. ಜನತೆಗೆ ನಿರೀಕ್ಷಿತ ಸ್ಪಂದನೆ ಸಿಗದೆ, ಕೇವಲ ಅರ್ಜಿ ಸ್ವೀಕೃತಿ ಕಾರ್ಯಕ್ರಮವಾಗಿ ಗಮನ ಸೆಳೆಯಿತು. ಧ್ವನಿವರ್ಧಕವನ್ನು ಕೂಡಾ ಬಳಕೆ ಮಾಡದಂತೆ ಕಟ್ಟಪ್ಪಣೆ ನೀಡಿದ ಜಿಲ್ಲಾಧಿಕಾರಿಗಳು, ಕಾರ್ಯಕ್ರಮದ ಕೊನೆಯಲ್ಲಿ ೯೨ ಅರ್ಜಿಗಳು ಸ್ವೀಕೃತಿಯಾದ ವಿಚಾರ ಮಾತ್ರ ಸಭೆಗೆ ತಿಳಿಸಿದ್ದರು. ಇದರಿಂದ ರಾಜ್ಯ ಸರಕಾರಕ್ಕೆ ಜನತೆಯ ಪರ ಕಾಳಜಿ ಇಲ್ಲ ಎನ್ನುವ ರೀತಿಯಲ್ಲಿ ಈ ಜನಸ್ಪಂದನ ಸಭೆ ನಡೆದಿತ್ತು. ವಿವಿಧ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಕೆಲವೊಂದು ಅರ್ಜಿಗಳಿಗೆ ಸ್ಥಳದಲ್ಲಿಯೇ ನ್ಯಾಯ ಒದಗಿಸಲಾಗಿದೆ. ಬಾಕಿ ಉಳಿದ ಸ್ವೀಕೃತ ಅರ್ಜಿಗಳ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಹೇಳಿದ್ದಾರೆ.

ಶಾಸಕ ವಿ.ಸುನಿಲ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಜಿ.ಪಂ.ಸಿಇಒ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಡಾ.ಅರುಣ್ ಕುಮಾರ್, ಹೆಚ್ಚುವರಿ ಪೊಲೀಸ್ ವರೀಷ್ಠಾಧಿಕಾರಿ ಸಿದ್ದಲಿಂಗಪ್ಪ, ಕುಂದಾಪುರ ಸಹಾಯಕ ಕಮಿಷನ್ನರ್ ರಶ್ಮಿ, ಕಾರ್ಕಳ ಡಿವೈಎಸ್ಪಿ ಅರವಿಂದ ಕಲ್ಲಗುಚ್ಚಿ, ಪುರಸಭೆ ಮುಖ್ಯಾಧಿಕಾರಿ ರೂಪಾ.ಜಿ.ಶೆಟ್ಟಿ ಉಪಸ್ಥಿತರಿದ್ದರು. ಪರಶುರಾಮ ಥೀಂ-ಪಾರ್ಕ್ ವಿವಾದ ಮತ್ತು ಅತ್ತೂರು ಚರ್ಚ್ನ ದ್ವಾರದ ಮರು ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ ವಿಚಾರಗಳು ಸಭೆಯ ಗಮನ ಸೆಳೆದವು.
ತಹಸೀಲ್ದಾರ್ ನರಸಪ್ಪ ಸ್ವಾಗತಿಸಿದರು, ದೇವದಾಸ್ ಕೆರೆಮನೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಡಿವೈಎಸ್ಪಿ ವಿರುದ್ಧ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನೆ
ಉಮ್ಮಿಕಲ್ಲು ಬೆಟ್ಟದಲ್ಲಿ ಸ್ಥಾಪಿಸಲಾಗಿರುವ ನಕಲಿ ಪರಶುರಾಮ ಮೂರ್ತಿಯ ಕುರಿತು ಆರಂಭದಿAದಲೇ ಕಾಂಗ್ರೆಸ್ ಪಕ್ಷ ವಿವಿಧ ತರದಲ್ಲಿ ಹೋರಾಟ ನಡೆಸುತ್ತಾ ಬಂದಿದೆ. ಉಸ್ತುವಾರಿ ಸಚಿವೆ ಲಕ್ಷಿö್ಮÃ ಹೆಬ್ಬಾಳ್ಕರ್ ಅವರು ಈ ಕುರಿತು ಪರಿಶೀಲನೆಗೆಂದು ಕಾರ್ಕಳಕ್ಕೆ ಬಂದಾಗ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿಯಾಗಲಿ, ನಿರ್ಮಿತ ಕೇಂದ್ರದ ಪ್ರಮುಖರು ಗೈರು ಹಾಜರಿಯಾಗಿದ್ದರು. ಹೋರಾಟಕ್ಕೆ ಜಿಲ್ಲಾಡಳಿತದಿಂದ ಸಕರಾತ್ಮಕವಾದ ಸ್ವಂದನೆಯೂ ಸಿಕ್ಕಿರಲಿಲ್ಲ.
ಈ ಹಿನ್ನಲೆಯಲ್ಲಿ ನಾಗರಿಕರೊಬ್ಬರು ಜನಸ್ಪಂದನ ಕಾರ್ಯಕ್ರಮದಲ್ಲಿ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. ಹಾಗೂ ಅದರ ಕುರಿತು ಜನಪ್ರತಿನಿಧಿ ತನ್ನ ಮೊಬೈಲ್ನಲ್ಲಿ ಚಿತ್ರೀಕರಣ ಮಾಡಿದ್ದಾರೆ. ಇದು ಸಂವಿಧಾನ ಬದ್ಧವೇ ಆಗಿದೆ. ಈ ನಡುವೆ ಡಿವೈಎಸ್ಪಿ ಅರವಿಂದ ಕಲ್ಲಗುಚ್ಚಿ ಅವರು ನೇರವಾಗಿ ಸಭೆಯಿಂದ ಕೆಳಗಿಳಿದು ಜನಪ್ರತಿನಿಧಿಯೊಬ್ಬರಿಗೆ ಬೆದರಿಸಿ ಕಾನೂನು ದುರ್ಬಳಕೆ ಮಾಡಿದ್ದಾರೆ. ಡಿವೈಎಸ್ಪಿ ನಡತೆ ಅಸಂವಿಧಾನ ಕ್ರಮವಾಗಿದೆ ಅವರನ್ನು ಸೇವೆಯಿಂದ ಅಮಾನತ್ ಳಿಸಬೇಕು ಎಂದು ಕಾಂಗ್ರೆಸ್ ಪಕ್ಷ ರಾಜ್ಯ ಸರಕಾರವನ್ನು ಒತ್ತಾಯಿಸಿ ಶನಿವಾರದಂದು ಡಿವೈಎಸ್ಪಿ ಕಚೇರಿಯ ಮುಂಭಾಗದಲ್ಲಿ ಬೃಹತ್ ಪ್ರತಿಭಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಮುನಿಯಾಲು ಉದಯಕುಮಾರ್ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.






































