[t4b-ticker]

ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆ: “ಕಥಾಗೋಷ್ಠಿ”

Picture of RB NEWS

RB NEWS

Bureau Report

ಕಾರ್ಕಳ : ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆ, ಕಾರ್ಕಳ ಇದರ ತಿಂಗಳ ಕಾರ್ಯಕ್ರಮದಡಿಯಲ್ಲಿ “ಕಥಾಗೋಷ್ಠಿ”   ಸರಕಾರಿ ಪದವಿ ಪೂರ್ವ ಕಾಲೇಜಿನ ಹೈಸ್ಕೂಲ್ ವಿಭಾಗದಲ್ಲಿ ಫೆ. 24 ರಂದು ನೆರವೇರಿತು.

ಕಥಾಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಗಂಗಾಧರ ಪಣಿಯೂರು ಇವರು ಕಥಾ ಸಂರಚನೆ ಮತ್ತು ಕಥಾ ಪ್ರಕಾರಗಳ ಕುರಿತಾಗಿ ವಿವರವಾದ ಮಾಹಿತಿಯನ್ನು ನೀಡಿದರು.

ಕಥಾ ಲೇಖಕಿಯರ ಕಥೆಗಳ ವಿಮರ್ಶೆಯನ್ನು ಅಚ್ಚುಕಟ್ಟಾಗಿ ನೆರವೇರಿಸಿ ಕಥಾ ಕೌಶಲದ ಬಗ್ಗೆ ಅರಿವು ಮೂಡಿಸಿದರು. ಜಾಗೃತಿ ಸಾಹಿತ್ಯ ಮಹಿಳಾ ಸಂಘಟನೆಯ ಸದಸ್ಯರಾದ ಶ್ಯಾಮಲಾ ಗೋಪಿನಾಥ್, ಸಾವಿತ್ರಿ ಮನೋಹರ್, ಅನುಪಮಾ ಚಿಪ್ಲುಂಕರ್, ಶೈಲಜಾ ಹೆಗ್ಡೆ, ಡಾ.ಸುಮತಿ ಪಿ, ವಸುಧಾ ಶೆಣೈ, ಮಾಲತಿ. ಜಿ. ಪೈ, ಶ್ರೀ ಮುದ್ರಾಡಿ, ಪ್ರಜ್ಞಾವಾಣಿ ಗೋರೆ, ರೇಖಾ ವಸಂತ್ ಇವರು ಕಥಾ ಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆಯ ಅಧ್ಯಕ್ಷೆ  ಮಿತ್ರಪ್ರಭಾ ಹೆಗ್ಡೆ ಸ್ವಾಗತಿಸಿದರು.

ಗೀತಾ.ಆರ್.ಮರಾಠೆ ಪ್ರಾರ್ಥಿಸಿದರು. ಬಿ. ವಿ. ಸುಲೋಚನಾ  ನಿರ್ವಹಿಸಿದರು. ಶಕುಂತಲಾ ಜಿ.ಅಡಿಗ ಧನ್ಯವಾದವನ್ನಿತ್ತರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top