ಅಮೃತವರ್ಷಿಣಿ 2024 ರಾಷ್ಟ್ರೀಯ ಪುರಸ್ಕಾರ ಪಡೆದ ಚಿತ್ರಗಳ ಹಬ್ಬ

Picture of RB NEWS

RB NEWS

Bureau Report

ಅಮೃತವರ್ಷಿಣಿ 2024 ರಾಷ್ಟ್ರೀಯ ಪುರಸ್ಕಾರ ಪಡೆದ ಚಿತ್ರಗಳ ಹಬ್ಬ

ಕಾರ್ಕಳ : ರಂಗ ಸಂಸ್ಕೃತಿ ಕಾರ್ಕಳ ಇವರ ನೇತೃತ್ವದಲ್ಲಿ ನಡೆಯುವ ಅಮೃತವರ್ಷಿಣಿ 2024 ರಾಷ್ಟ್ರೀಯ ಪುರಸ್ಕಾರ ಪಡೆದ ಚಿತ್ರಗಳ ಹಬ್ಬ ಕಾರ್ಯಕ್ರಮವು ಜುಲೈ 9 ರಿಂದ 11 ರವರೆಗೆ ಕಾರ್ಕಳದ ಪ್ರಕಾಶ್ ಹೋಟೆಲ್ ನಲ್ಲಿ ಸಂಜೆ 6.00 ಗಂಟೆಗೆ ಜರಗಲಿದೆ.

ಜುಲಾಯಿ 09 ಮಂಗಳವಾರ ರಂದು ಅನನ್ಯ ಕಾಸರವಳ್ಳಿ ನಿರ್ದೇಶನದ ಹರಿಕಥ ಪ್ರಸಂಗ ಚಲನಚಿತ್ರ ಪ್ರದರ್ಶನ ನಡೆಯಲಿದೆ.

ಜುಲಾಯಿ 10 ಬುಧವಾರ ದಂದು ಚಂಪಾ ಶೆಟ್ಟಿ ಅವರ ನಡತೇಶನದ ಕೋಳಿ ಎಸ್ರು ಚಲನಚಿತ್ರ ಪ್ರದರ್ಶನ ನಡೆಯಲಿದೆ.

ಜುಲಾಯಿ 11 ಗುರುವಾರ ದಂದು ಎಸ್ ನಿತ್ಯಾನಂದ ಪೈ ನಿರ್ಮಾಣ ಮಾಡಿದ,ಅಭಯ ಸಿಂಹ ಇವರ ನಿರ್ದೇಶನದ ಪಡ್ಡಾಯಿ ಚಲನಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ರಂಗಸಂಸ್ಕೃತಿ ಕಾರ್ಕಳ ಇದರ ಅಧ್ಯಕ್ಷ ಎಸ್.ನಿತ್ಯಾನಂದ ಪೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.‌

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top