ಓವರ್ ಟೇಕ್ ಮಾಡುವ ಭರದಲ್ಲಿ ರಿಕ್ಷಾಕ್ಕೆ ಡಿಕ್ಕಿ: ಬೈಕ್ ಸವಾರ ಗಂಭೀರ ಗಾಯ
RB NEWS
Bureau Report
ಕಾರ್ಕಳ ನಗರದ ಆನೆಕೆರೆ ಎಂಬಲ್ಲಿ ನಡೆದ ಘಟನೆ
ಕಾರ್ಕಳ : ಆನೆಕೆರೆಯ ಮಂಗಳೂರು ರಸ್ತೆಯಲ್ಲಿ ಖಾಸಗಿ ಬಸ್ಸೊಂದನ್ನು ಓವರ್ ಟೇಕ್ ಮಾಡುವ ಭರದಲ್ಲಿ ಮುನ್ನುಗಿದ ಬೈಕ್ ಸವಾರ ಎದುರುಗಡೆಯಿಂದ ಬರುತ್ತಿದ್ದ ರಿಕ್ಷಾ ವೊಂದಕ್ಕೆ ಡಿಕ್ಕಿ ಹೊಡೆದಿದ್ದು, ಪರಿಣಾಮವಾಗಿ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿ ಅದರ ಸವಾರ ಸುಶಾಲ್ ಮಾಳ ಗಂಭೀರ ಸ್ವರೂಪದಲ್ಲಿ ಗಾಯಗೊಂಡಿರುವುದಾಗಿ ಮಾಹಿತಿ ಲಭಿಸಿದೆ. ಘಟನೆಯಲ್ಲಿ ರಿಕ್ಷಾ ಜಖಂ ಗೊಂಡಿದೆ. ಗಾಯಾಳುವನ್ನು ತಾಲುಕು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.