ಕಲ್ಲಡ್ಕ ಜಂಕ್ಷನ್: ಅಪಾಯಕಾರಿ ಒಣಮರ ತೆರವು
ಕಲ್ಲಡ್ಕ : ಕಲ್ಲಡ್ಕದ ವಿಟ್ಲಕ್ಕೆ ತೆರಳುವ ಬಸ್ ನಿಲ್ದಾಣದ ಬಳಿ ಅಪಾಯಕಾರಿ ಸ್ಥಿತಿಯಲ್ಲಿ ಇದ್ದ ಒಣಮರವೊಂದರ ತೆರೆವು ಕಾರ್ಯ ನಡೆಯಿತು.
ಒಂದೆಡೆಯಲ್ಲಿ ಬಸ್ಸಿಗಾಗಿ ಕಾಯುವ ಪ್ರಯಾಣಿಕರು ಇದೇ ಒಣಮರ ಅಕ್ಕಪಕ್ಕದಲ್ಲಿ ನಿಲ್ಲುತ್ತಿದ್ದರು.
ಟ್ಯಾಂಪೋ ವಾಹನ, ಆಟೊ ರಿಕ್ಷಾಗಳೂ ಇಲ್ಲೇ ನಿಲುಗಡೆಗೊಳ್ಳುತ್ತಿದ್ದವು.
ಬಲಕುಂದಿದ ಮರದ ಕೊಂಬೆ ಗಾಳಿ, ಮಳೆಗೆ ಬುಡ ಸಮೇತವಾಗಿ ಧರೆಗುರುಳುವ ಎಲ್ಲಾ ಸಾಧ್ಯತೆಗಳು ಇದ್ದವು. ಈ ಕುರಿತು ಸಾರ್ವಜನಿಕರು ಸ್ಥಳೀಯಾಡಳಿತಕ್ಕೆ ದೂರು ಸಲ್ಲಿಸಿದ್ದರು.

ಅಪಾಯದ ಮುನ್ಸೂಚನೆ ಅರಿತುಕೊಂಡ ಸ್ಥಳೀಯಾಡಳಿತ ಮಳೆಗಾಲ ಆರಂಭಕ್ಕೂ ಮುನ್ನವೇ ಅಪಾಯಕಾರಿ ಮರ ತೆರವು ಕಾರ್ಯವನ್ನು ಪೂರ್ಣಗೊಳಿಸಲಾಗಿದೆ.






































