ಬಿಜೆಪಿಯಲ್ಲಿ ಸಾಮೂಹಿಕ ನಾಯಕತ್ವ ಮಾಯ : ರಘುಪತಿ ಭಟ್ ಅವರಿಗೆ ಬೆಂಬಲ ಸೂಚಿಸಿದ ಕೆ.ಎಸ್ ಈಶ್ವರಪ್ಪ

Picture of RB NEWS

RB NEWS

Bureau Report

ಬಿಜೆಪಿಯಲ್ಲಿ ಸಾಮೂಹಿಕ ನಾಯಕತ್ವ ಮಾಯ: ಕೆ.ಎಸ್ ಈಶ್ವರಪ್ಪ

ಶಿವಮೊಗ್ಗ : ವಿಧಾನ ಪರಿಷತ್ ಚುನಾವಣೆಯಲ್ಲಿ ನೈಋತ್ಯ ಪದವೀಧರ ಕ್ಷೇತ್ರದಿಂದ ಬಂಡಾಯ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ರಘುಪತಿ ಭಟ್ ಅವರಿಗೆ ಬೆಂಬಲ ಸೂಚಿಸಿ ಶಿವಮೊಗ್ಗ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕೆ.ಎಸ್ ಈಶ್ವರಪ್ಪ ಅವರು ಮತ ಯಾಚಿಸಿದ್ದಾರೆ.

ಈ ಬಗ್ಗೆ ಶಿವಮೊಗ್ಗದಲ್ಲಿ ಇಂದು ಮಾತನಾಡಿದ ಅವರು, ಪಕ್ಷದ ವ್ಯವಹಾರಗಳಲ್ಲಿ ಬಿಎಸ್ ಯಡಿಯೂರಪ್ಪ ಕುಟುಂಬ ಏಕಸ್ವಾಮ್ಯ ಮೆರೆಯುತ್ತಿದೆ. ಪಕ್ಷದಲ್ಲಿ ಮೊದಲಿದ್ದ ಸಾಮೂಹಿಕ ನಾಯಕತ್ವ ಕಾಣೆಯಾಗಿದೆ. ಇದನ್ನೇ ಬದಲಾಯಿಸಬೇಕು ಎಂದು ತಾನು ಮತ್ತು ರಘುಪತಿ ಭಟ್ ಪಣತೊಟ್ಟಿದ್ದೇವೆ ಎಂದರು.

ಬ್ರಹ್ಮ ಅಡ್ಡ ಬಂದರೂ ರಘುಪತಿ ಭಟ್ ಅವರು ನೈಋತ್ಯ ಪಧವೀಧರ ಕ್ಷೇತ್ರದಿಂದ ಗೆಲುವು ಸಾಧಿಸುತ್ತಾರೆ. ಹಿಂದೂತ್ವದಲ್ಲಿ ಶಿವಮೊಗ್ಗ ಜಿಲ್ಲೆಯು ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳಿಗಿಂತ ಹಿಂದಿಲ್ಲ, ಹಿಂದೂತ್ವದಲ್ಲಿ ನಂಬಿಕೆಯಿರುವ ಮತ್ತು ಅದನ್ನು ಪ್ರತಿಪಾದಿಸುವ ಜನರ ಮನೆಮನೆಗೆ ಹೋಗಿ ಭಟ್ ಅವರಿಗೆ ಮತ ಯಾಚಿಸೋಣ ಎಂದು ಹೇಳಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top