ಕಾರ್ಕಳ: ಐತಿಹಾಸಿಕ ಹಿನ್ನೆಲೆಯ ಕೋಟೆ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ವರ್ಷಂಪ್ರತಿ ಯಂತೆ ಜರಗುತ್ತಾ ಬಂದಿರುವ ಮಾರಿಪೂಜೆ ಅಥವಾ ಮಾರಿಹಬ್ಬದಲ್ಲಿ ಜಾತಿ- ಧರ್ಮ- ವರ್ಗ- ಬಾಷೆ ಇವೆಲ್ಲವನ್ನು ಮೀರಿ ಸರ್ವರು ದೇವರ ದರ್ಶನ ಪಡೆದು ಪುನೀತರಾದರು.
ಮಾರಿಹಬ್ಬದ ಸಂಭ್ರಮ, ಸಡಗರ. ಭಕ್ತ ಸಮೂಹವೂ ಇಡೀ ನಗರದಲ್ಲಿ ಕಾಣುತ್ತಿತ್ತು.
ಮೂರು ಮಾರ್ಗದಲ್ಲಿ ಶ್ರೀ ಮಾರಿಯಮ್ಮ ದೇವಿಯ ವಿಗ್ರಹವನ್ನು ಇರಿಸಿ ಪೂಜಿಸಲಾಗಿತ್ತು. ಅಸಂಖ್ಯಾತ ಭಕ್ತರು ತಮ್ಮ ಇಷ್ಟಾರ್ಥವಾಗಿ ಶ್ರೀಮಾರಿಯಮ್ಮ ದೇವಿಗೆ ಮಲ್ಲಿಗೆ, ಹಣ್ಣುಕಾಯಿ, ಬಳೆ, ಲಿಂಬೆ ಸಮರ್ಪಿಸಿ ಕೃತಾರ್ಥರಾದರು.
ರಾಜ್ಯದ ವಿವಿದೆಡೆಗಳಿಂದ ವ್ಯಾಪಾರಸ್ಥರು ಕಾರ್ಕಳದ ನಗರದ ಕೋಟೆ ಶ್ರೀ ಮಾರಿಯಮ್ಮ ದೇವಸ್ಥಾನ ಪರಿಸರದಲ್ಲಿ ವ್ಯಾಪಾರ ಮಳಿಗೆಗಳು ತೆರೆದರು.
ತಂಪೆರಗಿದ ಮಳೆ….
ಮಧ್ಯಾಹ್ನ 2.30ರ ವೇಳೆಯಾಗುತ್ತಿದ್ದಂತೆ ಮೋಡ ಕವಿದ ವಾತಾವರಣದ ನಡುವೆ ಗಾಳಿ, ಗುಡುಗು, ಸಿಡಿಲು ನಡುವೆ ಒಮ್ಮಿದೊಮ್ಮೆಲೆ ಭಾರೀ ಮಳೆ ಮಳೆಯಿಂದ ತಂಪೆರಗಿತು.






































