ಕಡಲ ಕಿನಾರೆಯಲ್ಲಿ ಸ್ವಚ್ಚತಾ ಕಾರ್ಯ

Picture of RB NEWS

RB NEWS

Bureau Report

ಉಡುಪಿ : ಮಾನವನ ನಿರ್ಲಕ್ಷ್ಯದಿಂದಾಗಿ ಪ್ರತಿನಿತ್ಯವೂ ಭಾರೀ ಪ್ರಮಾಣದಲ್ಲಿ ಪ್ಲಾಸ್ಟಿಕ್ ಸಹಿತ ಇತರ ತ್ಯಾಜ್ಯಗಳು ಕಡಲ ಪಾಲುಗುತ್ತಾ ಜಲಚರ ಜೀವರಾಶಿಯ ಮೇಲೆ ದುಷ್ಪರಿಣಾಮ ಬೀರುತ್ತಿರುತ್ತದೆ.

ಕಡಲು ತನ್ನ ಮಡಿಲಿನಲ್ಲಿ ಸೇರಿಕೊಂಡಿರುವ ಪ್ಲಾಸ್ಟಿಕ್ ಸಹಿತ ಇತರ ತ್ಯಾಜ್ಯಗಳನ್ನು ತನ್ನ ಗಡಿಯಿಂದ ಹೊರ ಹಾಕುವ ಪ್ರಕ್ರಿಯೆ ನಿರಂತರವಾಗಿ ಮಾಡುತ್ತಾ ಬರುತ್ತದೆ. ಇದು ಪ್ರಕೃತಿಯ ನಿಯಮವೂ ಆಗಿರುತ್ತದೆ.


ಹಾಗಾಗಿ ಕಡಲ ಕಿನಾರೆಯಲ್ಲಿ ತ್ಯಾಜ್ಯ ವಸ್ತುಗಳು ಅಲ್ಲಲ್ಲಿ ಬಿದ್ದುಕೊಂಡು ಪರಿಸರ ಸೌಂದರ್ಯಕ್ಕೆ ಮಾರಕವಾಗಿರುತ್ತದೆ.
ಕಡಲ ಕಿನಾರೆಯನ್ನು ಸ್ವಚ್ಚಂದವಾಗಿ ಇಟ್ಟುಕೊಂಡು ಮೂಲ ಸೌಕರ್ಯ ಯೋಜನೆ ಕಲ್ಪಿಸಿದಾಗ ಪ್ರವಾಸಿಗರ ಸಂಖ್ಯೆ ವೃದ್ದಿಸಿಕೊಳ್ಳುತ್ತದೆ ಅಲ್ಲದೆ ಪ್ರವಾಸೋದ್ಯಮವು ಅಭಿವೃದ್ಧಿ ಹೊಂದುತ್ತದೆ.


ಇದರೊಂದಿಗೆ ಹಲವು ಕಲ್ಪನೆಗಳನ್ನು ಮುಂದಿಟ್ಟು‌ ಸಾಮಾಜಿಕ ಸತ್ಕಾರ್ಯಕ್ಕೆ ತಂಡವೊಂದು ಮುಂದಾಗಿ ಜನಮೆಚ್ಚುಗೆಗೆ ಕಾರಣರಾಗಿದ್ದಾರೆ.ಎಂಎಹೆಚ್ಇ, ಎಂಐಟಿ, ಎನ್ ಎಸ್ ಎಸ್ ಘಟಕದ 50 ಸ್ವಯಂಸೇವಕರು ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿ ಡಾ.ಲಕ್ಷ್ಮಣ್ ರಾವ್ ಅವರೊಂದಿಗೆ ಮಲ್ಪೆ ಡೆಲ್ಟಾ ಪಾಯಿಂಟ್ ಬೀಚ್ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದರು.ಬೀಚ್ ನಲ್ಲಿದ್ದ 70ಕ್ಕೂ ಹೆಚ್ಚು ಚೀಲ ಪ್ಲಾಸ್ಟಿಕ್ ಹಾಗೂ ಇತರೆ ತ್ಯಾಜ್ಯವನ್ನು ತೆರವುಗೊಳಿಸಲಾಯಿತು. ಇದು ಸಮುದ್ರ ಮಾಲಿನ್ಯ ಮತ್ತು ಪ್ಲಾಸ್ಟಿಕ್ ಪ್ರಭಾವದ ಬಗ್ಗೆ ಸಾರ್ವಜನಿಕರಿಗೆ ಮತ್ತು ಪ್ರವಾಸಿಗರಿಗೆ ತಿಳಿಸಲು ಆಯೋಜಿಸಲಾದ ಜಾಗೃತಿ ಕಾರ್ಯಕ್ರಮವಾಗಿದೆ.

ಎನ್ ಎಸ್ ಎಸ್ ಸ್ವಯಂಸೇವಕರು ಬೀಚ್ ಕ್ಲೀನಿಂಗ್ ಡ್ರೈವ್‌ನಲ್ಲಿ ಸಕ್ರಿಯವಾಗಿ ಭಾಗವಹಿಸಲು ಪ್ರತಿಜ್ಞೆ ಮಾಡಿದರು ಮತ್ತು ಏಕ ಬಳಕೆಯ ಪ್ಲಾಸ್ಟಿಕ್‌ಗಳು ಮತ್ತು ಮೈಕ್ರೋಪ್ಲಾಸ್ಟಿಕ್‌ಗಳ ಪ್ರಭಾವದ ಬಗ್ಗೆ ಜಾಗೃತಿಯನ್ನು ತರಲು ಪ್ರತಿಜ್ಞೆ ಮಾಡಿದರು.

ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಡಾ ಬಾಲಕೃಷ್ಣ ಮದ್ದೋಡಿ ಡಾ ಆಶಾ ಸಿ ಎಸ್ ಮತ್ತು ಡಾ ಪೂರ್ಣಿಮಾ ಭಾಗವತ್ ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top