ಕಾರ್ಮಿಕ ಕಲ್ಯಾಣಕ್ಕೆ ಕಾಂಗ್ರೆಸ್ ಕಾರಣ:ಕಿರಣ್ ಹೆಗ್ಡೆ
ಉಡುಪಿ : ನಮ್ಮ ದೇಶದಲ್ಲಿ ಕಾರ್ಮಿಕರ, ಶ್ರಮಿಕರ ಹಿತವನ್ನು ಕಾಪಾಡಿದ್ದು ಕಾಂಗ್ರೆಸ್ ಪಕ್ಷ ಹೊರತು ಬೇರೆ ಇನ್ಯಾವುದೇ ಕಾಂಗ್ರೆಸ್ಸೇತರ ಸರಕಾರಗಳು ಆ ಕೆಲಸ ಆಗಿಲ್ಲ ಎಂದು ಉಡುಪಿ ಜಿಲ್ಲಾ ಇಂಟಕ್ ಅಧ್ಯಕ್ಷ ಕಿರಣ್ ಹೆಗ್ಡೆ ಕಾಬೆಟ್ಟು ಅವರು ಪ್ರಕಟಣೆಯಲ್ಲಿ ತಿಳಿದಿದ್ದಾರೆ.
ಭಾರತದ ಇತಿಹಾಸದಲ್ಲಿ ಪ್ರಾರಂಭದಿಂದಲೂ ಕಾಂಗ್ರೆಸ್ ಪಕ್ಷವೇ ಆಡಳಿತ ನಡೆಸಿದ್ದು ಮಂದಿನ ಎಪ್ಪತ್ತು ವರ್ಷಗಳ ನಡೆಸಿದ ಆಡಳಿತದಲ್ಲಿಯೂ ಕಾರ್ಮಿಕ ಸಂಘಟನೆಗಳನ್ನು ನಿರ್ಲಕ್ಷಿಸಲಿಲ್ಲ. ಕಾರ್ಮಿಕರ ಬೇಡಿಕೆಗಳನ್ನು ಯಥಾನುಪ್ರಕಾರ ಈಡೇರಿಸಿದ್ದು ಕಾಂಗ್ರೆಸ್ ಪಕ್ಷ.
ಇಂಟಕ್ ರಚನೆ ಮಾಡಿರುವ ಕಾಂಗ್ರೆಸ್ ಪಕ್ಷವು ದೇಶದ ಎಲ್ಲಾ ವಿಧದ ಕಾರ್ಮಿಕ ಸಂಘಟನೆಗಳನ್ನು,ವ್ಯಾಪಾರ ಸಂಘಟನೆಗಳನ್ನು,ಕೃಷಿಕೂಲಿ ಕಾರ್ಮಿಕರನ್ನು ಮುಖ್ಯವಾಹಿನಿಗೆ ತಂದಿರುತ್ತದೆ.
ಕಾಂಗ್ರೆಸ್ಸೇತರ ಸರಕಾರದಲ್ಲಿ ಅದರಲ್ಲೂ ಮೋದಿ ಆಡಳಿತದಿಂದ ಕಾರ್ಮಿಕ ವರ್ಗವೇ ಮಾಯವಾಗಿದೆ. ಕಾರ್ಖಾನೆಗಳು,ಕೈಗಾರಿಕೆಗಳು ಬಾಗಿಲು ಮುಚ್ಚಿ ಹತ್ತು ವರ್ಷಗಳಾಗಿದೆ.ಬಂಡವಾಳ ಶಾಹಿತ್ವವನ್ನು ಬೆಂಬಲಿಸುವ ಬಿಜೆಪಿಯವರಿಂದ ಯಾವನೇ ಕಾರ್ಮಿಕ ಕೂಡಾ ತನ್ನ ಬದುಕನ್ನು ರೂಪಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ.
ಮೋದಿ ಸರಕಾರ ಬಂದ ಕೂಡಲೇ ಆಗಿರುವ ನೋಟ್ ಬ್ಯಾನ್ ನಂತಹ ಅನಾಹುತದಿಂದಾಗಿ ಉತ್ತರ ಪ್ರದೇಶದಲ್ಲಿದ್ದ ಎಲ್ಲ ಬಳೆ ತಯಾರಿ ಕಾರ್ಖಾನೆಗಳು ಬಾಗಿಲು ಮುಚ್ಚಬೇಕಾಯಿತು.ಅದೇ ರೀತಿ ದೇಶದಾದ್ಯಂತ ಕೈಗಾರಿಕೆಗಳ ಮುಚ್ಚುವಿಕೆಯಿಂದಾಗಿ ಶ್ರಮಿಕ ವರ್ಗವೇ ಬದುಕನ್ನು ಕಳೆದುಕೊಂಡಿತು ಎಂದು ಹೆಗ್ಡೆ ಆರೋಪಿದಿದ್ದಾರೆ.
ದೇಶದಲ್ಲಿ ಕಾಂಗ್ರೆಸ್ ಅಥವಾ ಯು ಪಿ ಎ ಸರಕಾರ ಅಧಿಕಾರಕ್ಕೆ ಬರುವುದು ಶತಸಿದ್ಧ, ದೇಶದ ಮತದಾರರು ಈ ಬಾರಿ ನರೇಂದ್ರ ಮೋದಿ ಮತ್ತು ತಂಡವನ್ನು ಮನೆಗೆ ಕಳುಹಿಸುವುದರಲ್ಲಿ ಸಂಶಯವೇ ಇಲ್ಲ.ದೇಶದ ಸರ್ವತೋಮುಖ ಅಭಿವೃದ್ಧಿಯನ್ನೆ ಕೆಡಿಸಿ,ಜನರ ಜೀವನ ಮಟ್ಟಕ್ಕೇ ಕೊಡಲಿ ಏಟು ಹಾಕಿದ ಮೋದಿಯನ್ನು ಪ್ರಧಾನಿಯನ್ನಾಗಿ ಈ ದೇಶ ಕಂಡದ್ದೇ ಮಹಾದುರಂತ ಎಂದು ವ್ಯಾಖ್ಯಾನಿಸಿದ ಕಿರಣ ಹೆಗ್ಡೆಯವರು ಜೂನ್ ತಿಂಗಳಿನಿಂದ ನಾವು ಮತ್ತೊಮ್ಮೆ ಸ್ವಾತಂತ್ರ್ಯ ಪಡೆಯಲಿದ್ದೇವೆ. ಆ ಸಂತೋಷದ ಸಂಭ್ರಮಕ್ಕೆ ಕಾದಿರೋಣ ಎಂದು ಉಡುಪಿಯ ಇಂಟಕ್ ಅಧ್ಯಕ್ಷ ಕಿರಣ್ ಹೆಗ್ಡೆ ತಿಳಿಸಿದ್ದಾರೆ.
ಜೂನ್ ತಿಂಗಳಿನಿಂದ ದೇಶದಲ್ಲಿ ಕಾಂಗ್ರೆಸ್ ಗತವೈಭವ






































