ವಿರೋಧ ಪಕ್ಷದ ನಾಯಕನ ಮಾತಿನದಾಟಿಗೆ ಪ್ರಬಲ ವಿರೋಧ ವ್ಯಕ್ತಪಡಿಸಿದ ಬಜರಂಗದಳ

Picture of RB NEWS

RB NEWS

Bureau Report

ಮಂಗಳೂರು : ಗೃಹ ಸಚಿವನಾಗಿದ್ದಾಗ ಭಜರಂಗದಳದವರ ಮೇಲೆಯೇ ಗೂಂಡಾ ಕಾಯ್ದೆ ಹಾಕಿದ್ದೆ ಎಂದು ಅಧಿವೇಶನದಲ್ಲಿ ಹೇಳಿಕೊಂಡ ವಿರೋಧ ಪಕ್ಷದ ನಾಯಕ ಅಶೋಕ್ ವಿರುದ್ದ ಮಂಗಳೂರು ಭಜರಂಗದಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳೂರಿನ ಬಜರಂಗದಳದ ಕಾರ್ಯಕರ್ತರ ಪ್ರತಿರೋಧ ಎದುರಿಸಲು ಸಿದ್ಧರಾಗಿ ಎಂದು ಭಜರಂಗದಳ ಮಂಗಳೂರು ವಿಭಾಗ ಸಹಸಂಯೋಜಕ ಪುನೀತ್ ಅತ್ತಾವರ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬಹಿರಂಗ ಎಚ್ಚರಿಕೆ ನೀಡಿದ್ದಾರೆ.

ನಿನ್ನೆ ಅಧಿವೇಶನದಲ್ಲಿ ಮಂಗಳೂರು ಪಬ್ ದಾಳಿ ಬಗ್ಗೆ ಮಾತನಾಡಿದ್ದ ಆರ್‌ ಅಶೋಕ್ ರಾಜ್ಯದ ಗೃಹ ಸಚಿವರಾಗಿದ್ದಾಗ ಭಜರಂಗದಳದ ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ ಹಾಕಿದ್ದೆ ಎಂದು ಅಧಿವೇಶನದಲ್ಲಿ ಹೇಳಿಕೆ ನೀಡಿದ್ದಾರೆ.

ಅಶೋಕ್ಈಗಿನ ಗೃಹ ಸಚಿವ ಪರಮೇಶ್ವರ್ ಗೆ ಬುದ್ದಿ ಹೇಳೋ ಭರದಲ್ಲಿ ಈ ಹೇಳಿಕೆ ನೀಡಿದ್ದಾರೆ.ಸದ್ಯ ಅಶೋಕ್ ಹೇಳಿಕೆ ವಿರುದ್ದ ಕರಾವಳಿ ಭಜರಂಗದಳ ಕೆಂಡ ಮಂಡಲವಾಗಿದ್ದಾರೆ. ಆರ್ ಅಶೋಕ್ ಅಲ್ಲ. ಅಡ್ಜಸ್ಟ್ ಮೆಂಟ್ ಅಶೋಕ್ ಅವರೇ.’ನಿಮ್ಮ ನಾಲಗೆಯನ್ನು ನಾಲಗೆ ರೀತಿಯಲ್ಲಿ ಬಳಸಿ, ಎಕ್ಕಡದ ರೀತಿ ಬಳಸಿಕೊಳ್ಳಬೇಡಿ”ಅಡ್ಜಸ್ಟ್ ಮೆಂಟ್ ರಾಜಕಾರಣ ಎಂಬ ಕೊಚ್ಚೆಯಲ್ಲಿ ಹೊರಳಾಡುತ್ತಿರುವ ನಿಮಗೆ ಭಜರಂಗದಳದ ಕಾರ್ಯಕರ್ತರ ಹೆಸರು ಎತ್ತಲೂ ಯೋಗ್ಯತೆಯಿಲ್ಲ ಎಂದು ಕಿಡಿಕಾರಿದ್ದಾರೆ.

ಪ್ರತಿಪಕ್ಷನಾಯಕನಾಗಿರುವ ನೀವು ಒಂದಲ್ಲ ಒಂದು ದಿನ ಮಂಗಳೂರಿಗೆ ಬಂದೇ ಬರುತ್ತೀರಿ.ಹಿಂದೂ ವಿರೋಧಿ ಕೃತ್ಯಕ್ಕೆ ಪ್ರತಿರೋಧ ಒಡ್ಡಿ ಹೋರಾಡುವ ನಮಗೆ ನೀವೊಬ್ಬರು ಹೆಚ್ಚಾಗುವುದಿಲ್ಲ.ಒಂದಾ ಭಜರಂಗದಳದ ಕಾರ್ಯಕರ್ತರ ಬಗ್ಗೆ ಆಡಿದ ಮಾತುಗಳನ್ನು ಹಿಂದೆ ಪಡೆಯಿರಿ ಇಲ್ಲದಿದ್ದರೆ ಭಜರಂಗದಳದ ಕಾರ್ಯಕರ್ತರ ಪ್ರತಿರೋಧವನ್ನು ಎದುರಿಸಲು ಸಿದ್ಧರಾಗಿ  ಎಂದು ಆರ್.ಅಶೋಕ್ ಗೆ ಫೇಸ್ ಬುಕ್ ನಲ್ಲಿ ಭಜರಂಗದಳ ಮುಖಂಡನಿಂದ ಎಚ್ಚರಿಕೆ ಸಂದೇಹವನ್ನು ರವಾನಿಸಿದ್ದಾರೆ.

ವಾಟ್ಸಪ್ ನಲ್ಲಿ ಏನಿತ್ತು?


ನೀವು ಆರ್ ಅಶೋಕ್ ಅಲ್ಲ..ನಿಮ್ಮ ಹೆಸರನ್ನು ಎ ಅಶೋಕ್ ಅಂತ ಬದಲಾಯಿಸಿ ಬಿಡಿ ಅಡ್ಜಸ್ಟ್ ಮೆಂಟ್ ಅಶೋಕ್ ಅವರೇ..!!

ನಿಮ್ಮ ನಾಲಗೆಯನ್ನು ನಾಲಗೆ ರೀತಿಯನ್ನು ಬಳಸಿ ಎಕ್ಕಡದ ರೀತಿ ಬಳಸಿಕೊಳ್ಳಬೇಡಿ…ಅಡ್ಜಸ್ಟ್ ಮೆಂಟ್ ರಾಜಕಾರಣ ಎಂಬ ಗೊಚ್ಚೆಯಲ್ಲಿ ಹೊರಳಾಡುತ್ತಿರುವ ನಿಮಗೆ ಬಜರಂಗದಳದ ಕಾರ್ಯಕರ್ತರ ಹೆಸರು ಎತ್ತಲೂ ಯೋಗ್ಯತೆಯಿಲ್ಲ…ಸಿದ್ಧಾಂತಕ್ಕಾಗಿ ಹೋರಾಡುವ ಬಜರಂಗದಳ ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ ಹಾಕಿ ಅವರನ್ನು ಸುಮ್ಮನಿರಿಸುವಷ್ಟು ದೊಡ್ಡವರು ನೀವಾಗಿಲ್ಲ…ಬಜರಂಗದಳ ಕಾರ್ಯಕರ್ತರು ಹೋರಾಡುವುದು ನಿಮ್ಮ ಹಾಗೆ ವೈಯಕ್ತಿಕ ಲಾಭದ ಆಸೆಗಾಗಿ ಅಲ್ಲ..ನಿಮ್ಮ ರಾಜಕೀಯ ತೆವಲಿಗಾಗಿ ಬಜರಂಗದಳ ಕಾರ್ಯಕರ್ತರ ಬಗ್ಗೆ ಆಡಿದ ಮಾತನ್ನು ಹಿಂದೆಗೆದುಕೊಳ್ಳು…

ಪ್ರತಿಪಕ್ಷನಾಯಕನಾಗಿರುವ ನೀವು ಒಂದಲ್ಲ ಒಂದು ದಿನ ಮಂಗಳೂರಿಗೆ ಬಂದೇ ಬರುತ್ತೀರಿ ಎಂಬ ಮಾತು ನೆನಪಿರಲಿ…!! ಹಿಂದೂ ವಿರೋಧಿ ಕೃತ್ಯಕ್ಕೆ ಪ್ರತಿರೋಧ ಒಡ್ಡಿ ಹೋರಾಡುವ ನಮಗೆ ನೀವೊಬ್ಬರು ಹೆಚ್ಚಾಗುವುದಿಲ್ಲ…ಒಂದಾ ಬಜರಂಗದಳದ ಕಾರ್ಯಕರ್ತರ ಬಗ್ಗೆ ಆಡಿದ ಮಾತುಗಳನ್ನು ಹಿಂದೆ ಪಡೆಯಿರಿ ಇಲ್ಲದಿದ್ದರೆ ಬಜರಂಗದಳದ ಕಾರ್ಯಕರ್ತರ ಪ್ರತಿರೋಧವನ್ನು ಎದುರಿಸಲು ಸಿದ್ಧರಾಗಿ.

ಜೈ ಶ್ರೀ ರಾಮ್
ಜೈ ಭಜರಂಗಿ
ಜೈ ಬಜರಂಗದಳ…..

(WhatsAppನಲ್ಲಿ ಬರೆದಿರುವ ಬರಹವನ್ನು ಯಥಾವತ್ತಾಗಿ ಪ್ರಕಟಿಸಲಾಗಿದೆ)

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top