ಬೈಲೂರು ಉಮಿಕಲ್ಲು ಬೆಟ್ಟದಲ್ಲಿ ಕಾಣಿಸಿಕೊಂಡ ಅಗ್ನಿ: ದುಷ್ಕರ್ಮಿಗಳು ನಡೆಸಿದರೆನ್ನಲಾದ ಕೃತ್ಯವೇ?

Picture of RB NEWS

RB NEWS

Bureau Report

ಬೈಲೂರು ಉಮಿಕಲ್ಲು ಬೆಟ್ಟದಲ್ಲಿ ಕಾಣಿಸಿಕೊಂಡ ಅಗ್ನಿ

ಕಾರ್ಕಳ : ಬೈಲೂರು- ಎರ್ಲಪ್ಪಾಡಿಯ ಉಮ್ಮಿಕಲ್ಲು ಬೆಟ್ಟದ ಗೋಮಾಳ ಜಾಗದಲ್ಲಿ ನಿರ್ಮಾಣಗೊಂಡ ಪರಶುರಾಮ ಥೀಂ ಪಾರ್ಕ್ ವಿವಾದವು ಹೊಸ ಹೊಸ ರೂಪ ತಾಳುತ್ತಿದ್ದಂತೆ‌ ರವಿವಾರದಂದು ದುಷ್ಕರ್ಮಿಗಳು ನಡೆಸಿದರೆನ್ನಲಾದ ಕೃತ್ಯಕ್ಕೆ ಭಾರಿ ಬೆಂಕಿ ಅನಾಹುತ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ದಳದವರು ಬೆಂಕಿ ನಂದಿಸಲು ಹರಸಹಾಸ ಪಟ್ಟಿದ್ದಾರೆ.‌

ಪರಶುರಾಮ ಥೀಮ್ ಪಾಕ್ ೯ ನಿರ್ಮಾಣವಾದ ಉಮ್ಮಿಬೆಟ್ಟ ಪುರಾತನ ಕಾರಣೀಕಯುಳ್ಳ ತಾಣವಾಗಿದೆ ಎಂಬ ನಂಬಿಕೆ ಒಂಡೆದೆಯಾದರೆ ಅದೇ ತಾಣದಲ್ಲಿ ಪರಶುರಾಮನ “ಕಂಚಿನ” ಪ್ರತಿಮೆಯ ಅರ್ಧ ಭಾಗ ನಕಲಿಯದೆಂಬ ದೂರು ವ್ಯಾಪಕವಾಗಿ ಕೇಳಿಬಂದಿತ್ತು.


ಪರ-ವಿರೋಧಗಳ ನಡುವೆ ಹಲವು ಮಂದಿಗಳ ವಿರುದ್ಧ ಪ್ರಕರಣವೂ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.

ರಾಜಕೀಯ ತಿರುವು….
ಪರಶುರಾಮನ ಮೂರ್ತಿ ನಕಲಿ ಎಂಬ ಆರೋಪ ಬಲವಾಗಿ ಕೇಳಿಬರುತ್ತಿದ್ದಂತೆ ಉಡುಪಿ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಖುದ್ದಾಗಿ ಉಮ್ಮಿಕಲ್ಲು ಬೆಟ್ಟಕ್ಕೆ ಅಗಮಿಸಿ ವಿವಿಧ ಇಲಾಖಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಸಂದರ್ಭದಲ್ಲಿ ಕೆಲವೊಂದು ಬೆಳವಣಿಗೆಗಳು ಕಂಡು ಬಂದಿತ್ತು.


ಪರಶುರಾಮ ಥೀಂ ಪಾಕ್ ೯ನ ನಿರ್ಮಾಣ ಕಾಮಗಾರಿಯನ್ನು ನಿರ್ಮಿತಿ ಕೇಂದ್ರ ವಹಿಸಿಕೊಂಡಿತ್ತು.
ನಿರ್ಮಿತಿಕೇಂದ್ರದ ಅಧ್ಯಕ್ಷರರಾಗಿರುವ ಜಿಲ್ಲಾಧಿಕಾರಿಗಳು ಹಾಗೂ ನಿರ್ಮಿತಿ ಕೇಂದ್ರದ ಮೇಲುಸ್ತುವಾರಿ ಅಂದಿನ ಸಮಾಲೋಚನಾ ಸಭೆಯಲ್ಲಿ ಗೈರುಹಾಜರಿಯಾಗಿದ್ದರು.
ಸಮಾಲೋಚನಾ ಸಭೆಯ ಬಳಿಕ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಾಧ್ಯಮ ಮಿತ್ರರೊಂದಿಗೆ ಮಾತನಾಡಿ ನಾನು ಇಲ್ಲಿಗೆ ಬಂದಿರುವುದು ಭಾವನೆಯನ್ನು ಕೆರಳಿಸಲು ಅಲ್ಲ ಎಂಬ ಉತ್ತರ ಮಾತ್ರ ನೀಡಿದರೆ ಹೊರತು‌ ಪರಶುರಾಮನ ಮೂರ್ತಿ ಅಸಲಿಯೋ ಅಥವಾ ನಕಲಿಯೋ ಎಂಬುದರ ಕುರಿತು ಸ್ವಷ್ಟ ಪಡಿಸಿಲ್ಲ. ಬದಲಾಗಿ ಪರಶುರಾಮನ ಅರ್ಥ ಭಾಗ ಬದಲಾಯಿಸುವ ಅಗತ್ಯ ಇದೆ ಎಂದಷ್ಟೇ ತಿಳಿಸಿದ್ದರು.

ಈ ಬೆಳವಣಿಗೆಯ ನಂತರ ರಾತ್ರೋರಾತ್ರಿ ಸ್ಥಾಪಿತ ಹಿತಾಸಕ್ತಿ ಗಳು ಪರಶುರಾಮ ಮೂರ್ತಿಯ ಸೊಂಟದ ಮೇಲ್ಬಾಗವನ್ನು ಹೊತ್ತು ಸಾಗಿಸಿದ್ದಾರೆ. ಅದು ಎಲ್ಲಿಗೆ ಎಂಬ ಉತ್ತರವು ಜಿಲ್ಲಾಡಳಿತದಿಂದ ಇನ್ನೂ ಸಿಕ್ಕಿಲ್ಲ.

ಮತ್ತೊಂದೆಡೆ ಆಡಳಿತ ಪಕ್ಷದ ಯುವಘಟಕವು ಪ್ರಬಲ ಹೋರಾಟ ನಡೆಸಿ ರಾಜ್ಯ ಸರಕಾರಕ್ಕೆ ಬಿಸಿ ಮುಟ್ಟಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪರಶುರಾಮ ಮೂರ್ತಿ ವಿವಾದವು ಸಿಓಡಿ ತನಿಖೆಗೆ ಅದೇಶಿಸಿದ್ದರು.

ಸಾಕ್ಷಿ ನಾಶಪಡಿಸಲು ಅಗ್ನಿ‌ಅನಾಹುತ ತಂತ್ರವೇ?

ಸಿಐಡಿ ತನಿಖೆ ತೀವ್ರಗೊಳ್ಳುತ್ತಿದ್ದಂತೆ ಉಮ್ಮಿಕಲ್ಲು‌ಬೆಟ್ಟದಲ್ಲಿ ಭಾರೀ ಪ್ರಮಾಣದಲ್ಲಿ ಅಗ್ನಿ ಅನಾಹುತ ನಡೆದಿದೆ.

ಘಟನೆಯನ್ನು ಅವಲೋಕಿಸಿದಾಗ ಇದೊಂದು ಪೂರ್ವ ನಿಯೋಜಿತ ಎಂಬುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಈ ಎಲ್ಲಾ ವಿವಾದವು ಇಷ್ಟೊಂದು ಜಟಿಲಗೊಳ್ಳಲು ಉಡುಪಿ ಜಿಲ್ಲಾಡಳಿತವೂ ಕಾರಣವೆಂಬ ಆರೋಪ ಕೇಳಿಬರುತ್ತಿವೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top