ಸಾಣೂರು ರಾ.ಹೆ.169
ವಾಹನ ಸವಾರರ ಜೀವಕ್ಕೆ ಕುತ್ತು ತರುತ್ತಿರುವ ಅಪಾಯಕಾರಿ ಜಲ್ಲಿಕಲ್ಲುಗಳು
ಕಾರ್ಕಳ : ಸಾಣೂರು ಶ್ರೀರಾಮ ಮಂದಿರದ ಪಕ್ಕದಲ್ಲಿ ಚಿಕ್ಕಬೆಟ್ಟು_ ಗುರುಬೆಟ್ಟುಗೆ ಹೋಗುವ ಅಡ್ಡರಸ್ತೆಯ ಆರಂಭದಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ದಾರಿಯುವುದಕ್ಕೂ ಸಣ್ಣ ಜಲ್ಲಿಕಲ್ಲುಗಳು ಚದುರಿ ಬಿದ್ದಿದೆ. ಇದು ದ್ವಿಚಕ್ರ ವಾಹನ ಚಾಲಕರು ಪ್ರಾಣಕ್ಕೂ ಕುತ್ತು ತರಲಿದೆ.
ಇದೇ ಅಡ್ಡರಸ್ತೆಯಲ್ಲಿ ಕೇವಲ 50 ಮೀಟರ್ ಸಾಗಿದಾಗ ಸಾಣೂರು ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ 50ಕ್ಕಿಂತಲೂ ಹೆಚ್ಚಿನ ಹೈನುಗಾರರು ತಮ್ಮ ದ್ವಿಚಕ್ರದಲ್ಲಿ ಹಾಲಿನ ಕ್ಯಾನ್ ಇಟ್ಟು ವಾಹನ ಚಲಾಯಿಸುತ್ತಿದ್ದು, ಜಲ್ಲಿ ಕಲ್ಲುಗಳ ಮೇಲೆ ದ್ವಿಚಕ್ರ ವಾಹನ ಚಲಾಯಿಸುವಾಗ ಆಧಾರಕ್ಕೆಂದು *ಕಾಲು ಕೆಳಗೆ ಇಟ್ಟ ಹಾಲಿನ ಕ್ಯಾನ್ ಬಿದ್ದು ಹೋಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಹಾಲಿನ ಕ್ಯಾನ್ ಹಿಡಿಯುವ ತವಕದಲ್ಲಿ ವಾಹನ ಸವಾರರಿಗೆ ಸಂಕಷ್ಟ ಎದುರಾಗಬಹುದು.
ಬರೋಬರಿ ಮುಂದಿನ ತಿಂಗಳು ಮಳೆಗಾಲ ಶುರುವಾಗಲಿದ್ದು, ದ್ವಿಚಕ್ರವಾಹನ ನಿಯಂತ್ರಣ ತಪ್ಪಿದರೆ ಅಪಾಯ ಕಟ್ಟಿಟ್ಟಬುತ್ತಿ ಎಂದರೂ ತಪ್ಪಾಗಲಾರದು.
ಕಳೆದ ಒಂದು ವಾರದಿಂದ ಹಲವಾರು ದ್ವಿಚಕ್ರ ವಾಹನಗಳು ಅಡ್ಡರಸ್ತೆಯ ತಿರುವಿನಲ್ಲಿ ಮುಖ್ಯರಸ್ತೆ ಸಂಪರ್ಕಿಸುವಾಗ ಟೈಯರ್ ನಡಿ ಜಲ್ಲಿ ಕಲ್ಲುಗಳು ಸಿಲುಕಿ ಆಯತಪ್ಪಿ ಬಿದ್ದು, ಸಣ್ಣಪುಟ್ಟ ಗಾಯಗಳು ಅಗಿತ್ತೆಂಬುವುದು ಗಮನಾರ್ಹವಾಗಿದೆ.

ಮಳೆ ಪ್ರಾರಂಭವಾದರೆ ರಾಷ್ಟ್ರೀಯ ಹೆದ್ದಾರಿ ಮುಖ್ಯರಸ್ತೆಯ ಬದಿಯಲ್ಲಿರುವ ಜಲ್ಲಿಕಲ್ಲುಗಳು ಅಡ್ಡರಸ್ತೆಯ ಉದ್ದಕ್ಕೂ ಚದುರಿ ಇನ್ನಷ್ಟು ಅಪಾಯಕಾರಿ ಸ್ಥಿತಿ ನಿರ್ಮಾಣವಾಗಬಹುದು.
ರಾಷ್ಟ್ರೀಯ ಹೆದ್ದಾರಿ ಗುತ್ತಿಗೆದಾರ ಕಂಪನಿ ದಿಲೀಪ್ ಬಿಲ್ಡ್ ಕಾನ್ ಕೂಡಲೇ ಎಚ್ಚೆತ್ತು ರಾಷ್ಟ್ರೀಯ ಹೆದ್ದಾರಿ ಮುಖ್ಯರಸ್ತೆಯಿಂದ ಅಡ್ಡರಸ್ತೆಗೆ ತಿರುವಿನಲ್ಲಿ ಕನಿಷ್ಠ ಒಂದು ಪದರ ಡಾಮರೀಕರಣ ಕಾಮಗಾರಿ ನಡೆಸಿ ಸುಸ್ಥಿತಿಗೊಳಿಸಿದರೆ ಇನ್ನಷ್ಟು ಸಂಭಾವ್ಯ ಅಪಾಯದಿಂದ ತಪ್ಪಿಸಬಹುದು.
ಸಾರ್ವಜನಿಕರು ರಸ್ತೆಗೆಳಿದು ಪ್ರತಿಭಟಿಸುವ ಮೊದಲೇ ಈ ಅಪಾಯಕಾರಿ ಸ್ಥಿತಿಯಿಂದ ತಕ್ಷಣ ಸುರಕ್ಷತಾ ಕಾಮಗಾರಿ ನಡೆಸಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ತನ್ನ ಕರ್ತವ್ಯ ಪ್ರಜ್ಞೆ ಹಾಗೂ ಜವಾಬ್ದಾರಿಯನ್ನು ನಿರ್ವಹಿಸಿದರೆ ಒಳಿತು. ಯಾವುದೇ ರೀತಿಯಲ್ಲಿ ಈ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಅಪಘಾತಗಳು ಸಂಭವಿದಿದ್ದಲ್ಲಿ ನೇರವಾಗಿ ಕಾಮಗಾರಿ ವಹಿಸಿಕೊಂಡ ಸಂಸ್ಥೆಯ ಹಾಗೂ ಅದರ ಮೇಲ್ವಿಚಾರಕರ ಮೇಲೆ ಪ್ರಕರಣ ದಾಖಲಿಸಬೇಕೆಂದು ಜಿಲ್ಲಾಡಳಿತವನ್ನು

ಸಾಣೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಸಾಣೂರು ನರಸಿಂಹ ಕಾಮತ್ ಆಗ್ರಹಿಸಿದ್ದಾರೆ.






































