ಮಂಗಳೂರು: ದೇಶ ವ್ಯಾಪ್ತಿಯಲ್ಲಿ ನಡೆಯಲಿರುವ ಲೋಕಸಭೆ ಚುನಾವಣಾ ಪ್ರಯುಕ್ತವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ ರಾಜ್ಯದಲ್ಲೂ ಚುನಾವಣೆ ಪ್ರಚಾರ ನಡೆಸಿದರು.
ಕರಾವಳಿ ತೀರವಾದ ಮಂಗಳೂರಿನಲ್ಲಿ ರೋಡ್ ಶೋ ನಡೆಸುವ ಮೂಲಕ ಬಿಜೆಪಿ ಕಾರ್ಯಕರ್ತರಿಗೆ ಹುರುಪು ತುಂಬಿಸಿದ್ದಾರೆ. ಆ ಮೂಲಕ ಕರ್ನಾಟಕ ರಾಜ್ಯದಲ್ಲಿ ಬಿಜೆಪಿಯ ವಿಜಯ ಪಾತಾಕೆ ಹಾರಿಸುವಂತೆ ಹುರಿದುಂಬಿಸಿದ್ದಾರೆ.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಬಿಜೆಪಿ ವಿಜಯಸಂಕಲ್ಪ ಬೃಹತ್ ಸಮಾವೇಶ ಮುಗಿಸಿದ ಬಳಿಕ ರಾತ್ರಿ ಪ್ರಧಾನಿ ಮೋದಿ ಅವರು ವಿಶೇಷ ವಿಮಾನದಲ್ಲಿ ಮಂಗಳೂರು ಅಗಮಿಸಿದರು.

ಬಜಪೆಯ ಕೆಂಜಾರಿನಿಂದ ಲೇಡಿಹಿಲ್ ನಾರಾಯಣ ಗುರು ವೃತ್ತಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಬ್ರಹ್ಮ ಶ್ರೀ ನಾರಾಯಣ ಗುರುವಿನ ಪ್ರತಿಮೆಗೆ ಮಾಲಾರ್ಪಣೆಗೈದರು.
ಲಾಲ್ ಭಾಗ್, ಬಲ್ಲಾಳ್ ಭಾಗ್, ಪಿವಿಎಸ್ ಮೂಲಕ ರೋಡ್ ಶೋ ಹಾದುಹೋಗಿ ನವಭಾರತ ವೃತ್ತದಲ್ಲಿ ಸಂಪನ್ನಗೊಂಡಿತು.








































