ರಾಜಕೀಯ ಪ್ರತಿಕಾರ ಓರ್ವನಿಗೆ ಇರಿತ

Picture of RB NEWS

RB NEWS

Bureau Report

ಮಂಗಳೂರು: ರಾಜಕೀಯ ವಿಚಾರವಾಗಿ ನಡೆದ ಚರ್ಚೆ ವಿಕೋಪಕ್ಕೆ ತಿರುಗಿ ವ್ಯಕ್ತಿಯೋರ್ವ ಸೆಲೂನ್ ಮಾಲಕನಿಗೆ ಚೂರಿಯಿಂದ ಇರಿದ ಘಟನೆ ನಗರದ ಬೋಳಾರದ ಸರಕಾರಿ ಶಾಲೆಯ ಬಳಿ ಶನಿವಾರ ಸಂಜೆ 7 ಗಂಟೆ ಸುಮಾರಿಗೆ ನಡೆದಿರುವುದು ವರದಿಯಾಗಿದೆ.

ಬೋಳಾರದ ಕಾಂತಿ ಹೇರ್ ಡ್ರೆಸ್ಸಸ್ ನ ಮಾಲಕ ಎಲ್ವಿನ್ ವಿನಯ್ ಕುಮಾರ್ (65) ಚೂರಿ ಇರಿತಕ್ಕೆ ಒಳಗಾದವರು. ಸ್ಥಳೀಯ ನಿವಾಸಿ ಆನಂದ ಸಫಲ್ಯ(55) ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಕೇರಳ ಮೂಲದ ಅಶ್ವಿನ್ ವಿನಯ್ ಕುಮಾರ್ ಬೋಳಾರದಲ್ಲಿ ಸೆಲೂನ್ ನಡೆಸುತ್ತಿದ್ದಾರೆ. ಎಲ್ವಿನ್ ಮತ್ತು ಆನಂದ ಸಫಲ್ಯ ನಡುವೆ ರಾಜಕೀಯ ವಿಚಾರಕ್ಕೆ ಸಂಬಂಧಿಸಿ ತೀವ್ರ ಚರ್ಚೆ, ವಾಗ್ವಾದ ನಡೆದಿತ್ತೆನ್ನಲಾಗಿದೆ. ಈ ಮಾತುಕತೆ ವಿಕೋಪಕ್ಕೆ ತಿರುಗಿದ್ದು, ಮದ್ಯ ಸೇವಿಸಿದ ಅಮಲಿನಲ್ಲಿದ್ದ ಆರೋಪಿ ಆನಂದ ಸಫಲ್ಯ ಸಮೀಪದಲ್ಲೇ ಇರುವ ತನ್ನ ಮನೆಯಿಂದ ಚೂರಿ ತಂದು ಎಲ್ವಿನ್ ಅವರ ಎದೆಗೆ ಚೂರಿಯಿಂದ ಇರಿದು ಪರಾರಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top