ಕಾರ್ಕಳ : ಮಾಜಿ ಸಚಿವ ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರು ಅಪಘಾತ

Picture of RB NEWS

RB NEWS

Bureau Report

, 

ಕಾರ್ಕಳ: ಮಾಜಿ ಸಚಿವ ರಮಾನಾಥ ರೈ ಅವರಿದ್ದ ಕಾರು ಮತ್ತು ಬಸ್ ನಡುವೆ ಅಪಘಾತ ಸಂಭವಿಸಿ, ಇಬ್ಬರು ಗಾಯಗೊಂಡ ಘಟನೆ ಕಾರ್ಕಳದ ಸಾಣೂರು ಶ್ರೀರಾಮಮಂದಿರ ಬಳಿ ಡಿವೈಡರ್ ಕ್ರಾಸ್‌ನಲ್ಲಿ ರವಿವಾರ (ಸೆ.20) ನಡೆದಿದೆ.

ಘಟನೆಯಲ್ಲಿ ರಮಾನಾಥ ರೈ ಅವರು ಅಪಾಯದಿಂದ

ಪಾರಾಗಿದ್ದಾರೆ. ಆದರೆ ಅವರ ಕಾರು ಚಾಲಕ ಮತ್ತು ಆಪ್ತ

ಸಹಾಯಕ ಗಾಯಗೊಂಡಿದ್ದಾರೆ.

​ಘಟನೆಯ ವಿವರ:

ಮಾಜಿ ಸಚಿವ ರಮಾನಾಥ ರೈ ಅವರು ಕಾರ್ಯಕ್ರಮ ನಿಮಿತ್ತ ಕಾರ್ಕಳಕ್ಕೆ ಆಗಮಿಸುತ್ತಿದ್ದ ವೇಳೆ, ಕಾರ್ಕಳದಿಂದ ಮೂಡುಬಿದಿರೆ ಮಾರ್ಗವಾಗಿ ಮಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ನಡುವೆ ಸಾಣೂರು ಬಳಿ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಅಪಘಾತದಲ್ಲಿ ಗಾಯಗೊಂಡವರನ್ನು ಕಾರ್ಕಳ ಆಸ್ಪತ್ರೆಗೆ ಪ್ರಥಮ ಚಿಕಿತ್ಸೆ ನೀಡಿ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

​ಗಾಯಾಳುಗಳ ವಿವರ:

​ಕಾರು ಚಾಲಕ: ಕಾರು ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

​ರಮಾನಾಥ ರೈ ಹಾಗೂ ಇತರರು: ಕಾರಿನಲ್ಲಿದ್ದ ಮಾಜಿ ಸಚಿವ ರಮಾನಾಥ ರೈ ಸೇರಿದಂತೆ ನಾಲ್ವರು ಪ್ರಯಾಣಿಕರು ಹಾಗೂ ಬಸ್‌ನಲ್ಲಿದ್ದ 6 ಮಂದಿ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.  

ಕಾರ್ಕಳ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.  

​ಮುಖಂಡರ ಭೇಟಿ:

ವಿಷಯ ತಿಳಿಯುತ್ತಿದ್ದಂತೆಯೇ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ ಮುದ್ರಾಡಿ, ಕಾಂಗ್ರೆಸ್ ಮುಖಂಡರಾದ ಉದಯ ಕುಮಾರ್ ಶೆಟ್ಟಿ ಮುನಿಯಾಲು, ಸುಧಾಕರ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಹಾಗೂ ಮುಖಂಡರು ಆಸ್ಪತ್ರೆಗೆ ಧಾವಿಸಿ ರಮಾನಾಥ ರೈ ಅವರ ಆರೋಗ್ಯ ವಿಚಾರಿಸಿದ್ದಾರೆ.  

​

ಕಳೆದ ಒಂದು ವಾರಗಳಿಂದ ರಾಷ್ಟ್ರೀಯ ಹೆದ್ದಾರಿ ಇಲಾಖೆ ಗುತ್ತಿಗೆದಾರರು ಸಾಣೂರು ಹೊಸ ಸೇತುವೆಯ ಮೇಲೆ ಡಾಮರಿಕರಣವನ್ನು ಮಾಡುವ ಉದ್ದೇಶದಿಂದ ಹೆದ್ದಾರಿಯ ಒಂದೇ ಬದಿಯಲ್ಲಿ ಎರಡು ಕಡೆಯ ವಾಹನಗಳನ್ನು ಬಿಟ್ಟಿದ್ದರು.

ಸಾಣೂರು ರಾಮಮಂದಿರದ ಎದುರು ಮೀಡಿಯನ್ ಓಪನಿಂಗ್ ಇದ್ದು(ರಸ್ತೆ ವಿಭಾಜಕ) ಅಲ್ಲಿ ಎರಡು ಬದಿಯ ವಾಹನಗಳು ರಸ್ತೆ ಬದಲಿಸಬೇಕಾದರೆ ಅದೇ ವಿಭಾಜಕವನ್ನು ಬಳಸುವ ಅನಿವಾರ್ಯತೆ ಇದ್ದು, ಅಪಘಾತಕ್ಕೆ ಆಹ್ವಾನ ನೀಡುವ ಸ್ಥಿತಿ ಕಳೆದ ಒಂದು ವಾರಗಳಿಂದ ಇದೆ. 

ಹೆದ್ದಾರಿ ಗುತ್ತಿಗೆದಾರರು ಕೂಡಲೇ ಸಾಣೂರು ಸೇತುವೆ ಮೇಲಿನ ಡಾಮರೀಕರಣ ಕಾರ್ಯವನ್ನು ಪೂರ್ಣಗೊಳಿಸಿ, ರಾಷ್ಟ್ರೀಯ ಹೆದ್ದಾರಿಯ ಎರಡು ಬದಿಗಳಲ್ಲಿ ವಾಹನ ಹೋರಾಟಕ್ಕೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರೆ ಸಂಭಾವ್ಯ ಅಪಘಾತವನ್ನು ತಪ್ಪಿಸಬಹುದು. 

ಈಗ ಆಗಿರುವ ಮತ್ತು ಇನ್ನು ಆಗಲಿರುವ ಎಲ್ಲಾ ಜೀವ ಹಾನಿ ಮತ್ತು ಅಪಘಾತಗಳಿಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ವಿಳಂಬ ಧೋರಣೆ ಮತ್ತು ಅಸಡ್ಡೆ ಕಾರಣ ಎಂದು ಸಾಣೂರಿನ ಸಾರ್ವಜನಿಕರು ಆಕ್ರೋಶದಿಂದ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top