
ವಾರಭವಿಷ್ಯ 30.08.2026 ರಿಂದ 05.09.2026ರ ತನಕ
ವಿಶೇಷ ದಿನಗಳು :30.08.2026.. ಶ್ರೀ ರಾಘವೇಂದ್ರ ಪುಣ್ಯ ತಿಥಿ 02.09.2026…. ತುಲಾ ರಾಶಿಗೆ ಶುಕ್ರನ ಪ್ರವೇಶ 04.09.2026.. ಶ್ರೀ ಕೃಷ್ಣ ಜನ್ಮಾಷ್ಟಮೀ
ಮೇಷ : ಕಿರು ಪ್ರವಾಸ ನಿರೀಕ್ಷಿತ. ಅಧಿಕಾರ ವರ್ಗಡವರ ಬಗ್ಗೆ ಜಾಗ್ರತೆ ವಹಿಸಿರಿ. ವಿದ್ಯಾರ್ಥಿ ವರ್ಗದವರಿಗೆ ಅಡಚಣೆಗಳಿದ್ದರೂ ಶುಭ ಸಂತಸವಿದೆ. ಅತಿಯಾದ ಸಿಟ್ಟನ್ನು ಹಿಡಿತದಲ್ಲಿ ಇಟ್ಟುಕೊಳ್ಳಿರಿ, ರಾಜಕೀಯ ಕ್ಷೇತ್ರದಲ್ಲಿ ಹಣಾಹಣಿ ಸ್ಪರ್ಧೆ ಇರಲಿದೆ. ಸಾಂಸಾರಿಕವಾಗಿ ತೃಪ್ತಿದಾಯಕ ದಿನಗಳಾಗಿವೆ, ಅವಿವಾಹಿತರಿಗೆ ವೈವಾಹಿಕ ಭಾಗ್ಯಕ್ಕೆ ಹೊಸ ಸಂಬಂಧ ಕೂಡಿ ಬರಲಿದೆ. ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರವಿರಲಿ.
ವೃಷಭ :ನಿಮ್ಮ ಕಾರ್ಯ ಶೈಲಿಯಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳುವ ಅವಶ್ಯಕತೆ ಇರುತ್ತದೆ. ಅಗ್ನಿ ಶಸ್ತ್ರ ಮುಂತಾದ ವಸ್ತುಗಳಿಂದ ದೂರವಿದ್ದಷ್ಟೂ ಒಳ್ಳೆಯದು, ದಾಂಪತ್ಯದಲ್ಲಿ ಮೂರನೆಯ ವ್ಯಕ್ತಿಯ ಪ್ರವೇಶ ಒಳ್ಳೆಯದಲ್ಲ. ಹೊಸ ವಾಹನ ಖರೀಧಿ ಮಾಡಲಿದ್ದೀರಿ. ಉದ್ಯೋಗ ಬದಲಾವಣೆ ಮಾಡುವ ಸೂಚನೆ ಇರುತ್ತದೆ. ಮನೆಯಲ್ಲಿ ವಾದ ವಿವಾದ ಬರುವ ಸೂಚನೆ ಇರುತ್ತದೆ. ಆಲರ್ಜಿ ತುರಿಕೆ ಬರಲಿದೆ.
ಮಿಥುನ :ರಕ್ತದ ಒತ್ತಡ ಷುಗರ್ ಇರುವವರು ಎಚ್ಚರ ವಹಿಸಿರಿ, ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಮಾಡಿದಾಗ ಹೆಚ್ಚು ಅಂಕ ಗಳಿಸಲಿದ್ದಾರೆ. ದೈವಾನುಗ್ರಹ ಉತ್ತಮವಾಗಿರುವುದರಿಂದ ನಿಮ್ಮ ವ್ಯವಹಾರವೆಲ್ಲವೂ ಯಶಸ್ವಿಯಾಗಲಿದೆ. ಕೃಷಿಕರು ಹೆಚ್ಚಿನ ಲಾಭ ಗಳಿಸಲಿದ್ದಾರೆ. ನಿಮ್ಮವರೇ ನಿಮಗೆ ಶತ್ರುಗಳ ರೀತಿ ವರ್ತಿಸಲಿದ್ದಾರೆ. ನಕಾರಾತ್ಮಕ ಚಿಂತನೆಗಳಿಂದ ದೂರವಿರುವುದು ಒಳ್ಳೆಯದು ಆರ್ಥಿಕ ಸ್ಥಿತಿ ಸುಧಾರಣೆ ಆಗಲಿದೆ.
ಕರ್ಕಾಟಕ :ಸೌಕರ್ಯಗಳು ಹೆಚ್ಚಾದಷ್ಟೂ ಆಲಸ್ಯವೂ ಹೆಚ್ಚಾಗಲಿದೆ. ಪ್ರಯಾಣ ಮತ್ತು ಆರೋಗ್ಯದ ವಿಷಯದಲ್ಲಿ ಖರ್ಚು ಬರಲಿದೆ. ದಾಂಪತ್ಯದಲ್ಲಿ ಕಲಹ ಬರಲಿದೆ. ನಾಗ ದೇವರ ಸೇವೆ ಮಾಡುವುದು ಉತ್ತಮ ಪರಿಹಾರವೆನಿಸಲಿದೆ. ನೆರೆ ಮನೆಯವರ ಜೊತೆಗೆ ಕಲಹ ಬರಲಿದೆ ವಿದ್ಯಾರ್ಥಿಗಳು ತಮ್ಮ ಓದಿನ ಕಡೆಗೆ ಗಮನ ಹರಿಸುವುದು ಅಗತ್ಯವಾಗಿದೆ. ಸಹೋದರಿಯ ಜೊತೆಗೆ ಕಲಹ ಬಾರದಂತೆ ಎಚ್ಚರವಹಿಸಿರಿ.
ಸಿಂಹ :ಪಿತ್ರಾರ್ಜಿತ ಆಸ್ತಿಯ ವಿವಾದ ಇತ್ಯರ್ಥವಾಗುವ ಸಮಯ ಬಂದಿದೆ. ರಾಜಕೀಯದಲ್ಲಿ ಇರುವ ಗಣ್ಯರಿಗೆ ಎಚ್ಚರವಾಗಿರುವುದು ಒಳ್ಳೆಯದು. ಇಡಿ ಇಲಾಖೆ ನಿಮ್ಮ ಮೇಲೆ ಕಣ್ಣು ಹಾಕುವ ಸಾಧ್ಯತೆ ಇದೆ. ನಿಮ್ಮ ಆರೋಗ್ಯದ ಕಡೆಗೆ ಗಮನವಿರಲಿ, ಹಿರಿಯರಿಗೆ ಕೊಡುವ ಗೌರವ ಕೊಡಲೇಬೇಕು. ಆರ್ಥಿಕ ಬಲ ಹೆಚ್ಚಾಗುವ ಸಮಯ ಬಂದಿದೆ. ಕಫದ ಸಮಸ್ಯೆ ಕಾಡಲಿದೆ, ಬೆನ್ನುನೋವು ಬರುವ ಸಾಧ್ಯತೆಯನ್ನು ಶನಿ ತಿಳಿಸುತ್ತಿದ್ದಾನೆ.
ಕನ್ಯಾ :ಗುರುವಿನ ಅನುಗ್ರಹ ನಿಮಗಿದ್ದರೂ,ಬುಧ ತಿಳಿಸುವಂತೆ ಉದ್ಯೋಗದಲ್ಲಿ ಬದಲಾವಣೆ ಆಗುವ ಸಾಧ್ಯತೆ ಇರುತ್ತದೆ. ವ್ಯಾಪಾರದಲ್ಲಿ ಪ್ರಾಮಾಣಿಕತೆ ಇರಲಿ. ಮಾತು ಕೊಡುವ ಮೊದಲು ಯೋಚಿಸಿ ಸಾಲವನ್ನು ಹಿಂತಿರುಗಿಸಲು ಸಾಹಸ ಪಡಬೇಕಾಗುತ್ತದೆ. ಚಿನ್ನ ಗಿರವಿ ಇಡುವಿರಿ, ಮಕ್ಕಳ ಉನ್ನತ ಶಿಕ್ಷಣ ಹೊರೆಯಾಗಿ ಪರಿಣಮಿಸಲಿದೆ. ಕೆಲಸದ ಒತ್ತಡದಿಂದ ಮಾನಸಿಕ ಒತ್ತಡ ಹೆಚ್ಚಾಗಲಿದೆ ಅನ್ಯ ಮಹಿಳೆಯರ ಬಗ್ಗೆ ಎಚ್ಚರವಿರಲಿ.
ತುಲಾ :ಮಾತಿನಲ್ಲಿ ಇತಿಮಿತಿ ತಾಳ್ಮೆ ಇರಲಿ. ಪಿತ್ತ ಉಷ್ಣ ಪೀಡೆ ಕಾದಲಿದೆ ಷುಗರ್ ಸಮಸ್ಯೆ ಇರುವವರು ಎಚ್ಚರವಹಿಸಿರಿ, ಕಾರ್ಯಕ್ಷೇತ್ರದ ಸಾಧನೆಗಾಗಿ ಮೇಲಧಿಕಾರಿಗಳ ಮೆಚ್ಚುಗೆ ಸಿಗಲಿದೆ ಅನಾರೋಗ್ಯದ ನಿವಾರಣೆಗಾಗಿ ನಿಮ್ಮ ಕುಲದೇವರ ಪ್ರಾರ್ಥನೆಯನ್ನು ಮಾಡಿರಿ, ದಾನ ಧರ್ಮ ಮಾಡುವುದರಲ್ಲಿ ಆಸಕ್ತಿಯನ್ನು ಹೊಂದುವಿರಿ, ಅಹಂನಿಂದ ಹೊರಗೆ ಬಂದರೆ ಒಳ್ಳೆಯದು, ಮಹಿಳೆಯರು ಅವರ ವಯಕ್ತಿಕ ಸಮಸ್ಯೆಗಳಿಗೆ ಒಳಗಾಗಲಿದ್ದಾರೆ.
ವೃಶ್ಚಿಕ :ಭಾಗ್ಯದ ಗುರುವಿನ ಅನುಗ್ರಹ ನಿಮಗಿರುವುದರಿಂದ ಸಮಾಜದಲ್ಲಿ ಎಲ್ಲರೂ ನಿಮ್ಮನ್ನು ಗುರುಟಿಸುವಂತೆ ಆಗಲಿದ್ದೀರಿ. ಹಿತ ಶತ್ರುಗಳ ಬಗ್ಗೆ ಎಚ್ಚರವಿರಲಿ. ಶನಿ ಮತ್ತು ರಾಹುವಿನ ಸೂಚನೆ ಇದಾಗಿದೆ. ರಕ್ತದ ಒತ್ತಡ ಇರುವವರು ಎಚ್ಚರವಹಿಸಿರಿ ಧಾರ್ಮಿಕ ಕೆಲಸ ಕಾರ್ಯಗಳಿಂದ ಆದಾಯ ಹೆಚ್ಚಾಗಲಿದೆ. ನಿಮ್ಮ ಹಠ ಸಾಧನೆ ಎಲ್ಲರ ಮೆಚ್ಚುಗೆಗೆ ಗುರಿಯಾಗಲಿದೆ, ತಾಯಿಯವರ ಅನಾರೋಗ್ಯ ಬಾಧೆ ನಿಮ್ಮ ಮನಸ್ಸಿಗೆ ಬೇಸರವನ್ನು ತರಲಿದೆ.
ಧನು :ಕುಜ ಗುರು ನಿಮ್ಮ ಮಾನಸಿಕ ನೆಮ್ಮದಿಯನ್ನು ಹಾಳು ಮಾಡಲಿದ್ದಾರೆ. ದಾಂಪತ್ಯದಲ್ಲಿ ಕಲಹ ಬರಲಿದೆ. ಪಾಲುಗಾರಿಕೆ ವ್ಯವಹಾರ ಸಧ್ಯಕ್ಕೆ ಬೇಡ. ಮೌನವಾಗಿ ಇದ್ದಷ್ಟು ಒಳ್ಳೆಯದು. ಉದ್ಯೋಗ ಬದಲಾವಣೆ ಮಾಡುವುದು ಒಳ್ಳೆಯದಲ್ಲ, ಡಿಸೆಂಬರ್ ತಿಂಗಳ ವರೆಗೆ ಹೀಗೆಯೇ ಮುಂದುವರಿಯಲಿ, ಮಕ್ಕಳ ಜೊತೆಗೆ ಮಿತ್ರರಂತೆ ವರ್ತಿಸಿರಿ. ಗುತ್ತಿಗೆ ದಾರರಿಗೆ ಸರಕಾರದ ಕಡೆಯಿಂದ ಬರಬೇಕಾದ ಹಣ ಬರುವುದಿಲ್ಲ. ವ್ಯವಹಾರಗಳಲ್ಲಿ ಕೆಲವೊಂದು ಅಡಚಣೆಗಳು ಬರಲಿವೆ.
ಮಕರ :ಸಾಡೇ ಸಾತ್ ಶನಿಯ ಪ್ರಭಾವ ನಿತ್ಯವೂ ನಿಮ್ಮ ಅನುಭವಕ್ಕೆ ಬರಲಿದೆ. ಸಪ್ತಮದ ಉಚ್ಚ ಗುರು ನಿಮ್ಮ ಸಹಾಯಕ್ಕೆ ಬರಲಿದ್ದಾನೆ. ಸಹೋದ್ಯೋಗಿಗಳ ಜೊತೆಗೆ ಕಲಹ ಬರುವ ಸಾಧ್ಯತೆ, ಆರ್ಥಿಕ ಹೊಂದಾಣಿಕೆ ಸಮಸ್ಯೆಯನ್ನು ತರಲಿದೆ. ಅವಿವಾಹಿತರಿಗೆ ವಿವಾಹ ಭಾಗ್ಯ ಕೂಡಿ ಬರಲಿದೆ ಹೊಸ ಉದ್ಯಮ ಆರಂಭಕ್ಕೆ ಉತ್ತಮ ಸಮಯವಲ್ಲ. ಚಾಡಿ ಮಾತುಗಳಿಗೆ ಗಮನ ಕೊಡಬೇಡಿರಿ, ಆತ್ಮೀಯರ ನೆರವು ದೊರಕಲಿದೆ.
ಕುಂಭ :ನೀರಿನಿಂದ ಹೊರಗೆ ತೆಗೆದ ಮೀನಿನಂತೆ ಚಡಪಡುವ ನಿರಾಶೆಯನ್ನು ಅನುಭವಿಸುವ ಸಮಯವಾಗಿದೆ. ವಿಷ್ಣು ಸಹಸ್ರನಾಮ ಪಾರಾಯಣ ಅತೀ ಅಗತ್ಯವಾಗಿದೆ. ಮಕ್ಕಳ ಕಡೆಗೆ ಇಮ್ಮ ಗಮನ ಅತೀ ಅಗತ್ಯವಾಗಿದೆ, ಹಣ ಕಾಸಿನ ವಿಷಯದಲ್ಲಿ ಎಚ್ಚರವಹಿಸುವುದು ಅತೀ ಅಗತ್ಯವಾಗಿದೆ ಇದು ರಾಹು ಶನಿಯರ ಸೂಚನೆಯಾಗಿದೆ, ಸಾಲ ಮಾಡುವ ಸಾಧ್ಯತೆ ಇರುತ್ತದೆ. ಭೂಮಿ ಖರೀಧಿ ಮಾಡುವಾಗ ಎಚ್ಚರವಿರಲಿ.
ಮೀನಾ :ಮಹಿಳೆಯರ ವಿಷಯದಲ್ಲಿ ಅಪವಾದ ಬರುವ ಸೂಚನೆ ಇದೆ, ವಿದ್ಯಾರ್ಥಿಗಳು ಪ್ರೀತಿ ಪ್ರೇಮದಲ್ಲಿ ಬೀಳುವ ಸಾಧ್ಯತೆ ಇರುತ್ತದೆ. ಓದುವ ಕಡೆಗೆ ಗಮನವೀರಲಿ. ನಿಮ್ಮ ಹಿತ ಶತ್ರುಗಳ ಕಾಟ ಮುಂದುವರಿಯತ್ತದೆ, ಕುತಂತ್ರಗಳಿಂದ ಕುಟುಂಬದಲ್ಲಿ ನೆಮ್ಮದಿಯ ಕೊರತೆ ಕಂಡು ಬರಲಿದೆ. ರಾಜಕೀಯ ಗಣ್ಯರು ಧನಾತ್ಮಕ ಬದಲಾವಣೆಯನ್ನು ಹೊಂದಲಿದ್ದಾರೆ. ಹಿರಿಯ ರೊಂದಿಗೆ ತಾಳ್ಮೆಯಿಂದ ಇರುವುದು ಅಗತ್ಯವಾಗಿದೆ. ಮೂಲವ್ಯಾಧಿ ಸಮಸ್ಯೆ ಇರುವವರು ವೈದ್ಯರ ಸಲಹೆ ಪಡೆಯಿರಿ.






































