
ವಾರಭವಿಷ್ಯ
23.08.2026 ರಿಂದ 29.08.2026ರ ತನಕ
ವಿಶೇಷ ದಿನಗಳು:
26.08.2026: ಋಗುಪಾಕರ್ಮ
28.08.2026: ಋಜುರುಪಾಕರ್ಮ, ಪೂರ್ಣಿಮಾ, ಚಂದ್ರಗ್ರಹಣ, ವರಮಹಾಲಕ್ಷ್ಮಿ ವ್ರತ,ರಕ್ಷಾಬಂಧನ
ಮೇಷ
ವ್ಯವಹಾರದಲ್ಲಿ ಹೊಸ ಯೋಜನೆಗಳನ್ನು ಅಳವಡಿಸಿಕೊಂಡರೆ ಅಭಿವೃದ್ಧಿ ಕಾಣುವಿರಿ. ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರ ವಹಿಸುವುದು ಅಗತ್ಯ. ಸಮಾಜದಲ್ಲಿ ಉನ್ನತ ಗೌರವ ದೊರೆಯಲಿದೆ. ಪೂರ್ವ ಪುಣ್ಯವು ಆಪತ್ಕಾಲದಲ್ಲಿ ನಿಮ್ಮನ್ನು ಕಾಪಾಡಲಿದೆ. ಆರೋಗ್ಯದ ಕಡೆಗೆ ಗಮನವಿರಲಿ. ಹೋಟೆಲ್ ಉದ್ಯಮ ಉತ್ತಮ ಲಾಭ ತರಲಿದೆ. ಸಹೋದರಿಯೊಂದಿಗೆ ಕಲಹ ಉಂಟಾಗುವ ಸಾಧ್ಯತೆ ಇದೆ.
ವೃಷಭ
ನಿಮ್ಮ ನಿರಂತರ ದುಡಿಮೆಯಿಂದ ಆದಾಯದ ಮೂಲಗಳು ಹೆಚ್ಚಾಗಲಿವೆ. ಮಾನಸಿಕ ಒತ್ತಡ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ವಿಶ್ರಾಂತಿಗೂ ಆದ್ಯತೆ ನೀಡಿ. ಮದ್ಯ ಸೇವನೆಯಿಂದ ದೂರವಿರುವುದು ಒಳಿತು. ಚಿನ್ನಾಭರಣಗಳ ಬಗ್ಗೆ ಹೆಚ್ಚಿನ ಎಚ್ಚರ ಅಗತ್ಯ. ಸಂತಾನದ ನಿರೀಕ್ಷೆಯಲ್ಲಿರುವವರಿಗೆ ಶುಭಫಲ ದೊರೆಯಲಿದೆ. ದಾಂಪತ್ಯ ಜೀವನದಲ್ಲಿ ಪರಸ್ಪರ ಹೊಂದಾಣಿಕೆ ಅಗತ್ಯ. ಖಾಸಗಿ ವಿಚಾರಗಳನ್ನು ಅನ್ಯರೊಂದಿಗೆ ಹಂಚಿಕೊಳ್ಳಬೇಡಿ.
ಮಿಥುನ
ಮನೆಯೊಡತಿಯ ಸಹಕಾರದಿಂದ ಜೀವನದಲ್ಲಿ ಸಂತೋಷ ಕಾಣುವಿರಿ. ಯಾರಿಗಾದರೂ ಭರವಸೆ ನೀಡುವಾಗ ಎಚ್ಚರಿಕೆ ಅಗತ್ಯ. ಮಕ್ಕಳು ಉನ್ನತ ವಿದ್ಯಾಭ್ಯಾಸದಲ್ಲಿ ಉತ್ತಮ ಸಾಧನೆ ಮಾಡಲಿದ್ದಾರೆ. ಅನ್ಯರ ಹಸ್ತಕ್ಷೇಪವು ದೈನಂದಿನ ವ್ಯವಹಾರದಲ್ಲಿ ನಷ್ಟ ಉಂಟುಮಾಡಬಹುದು. ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳಿಂದ ಕಿರಿಕಿರಿ ಎದುರಾಗುವ ಸಾಧ್ಯತೆ ಇದೆ. ತಾಳ್ಮೆ ಅತ್ಯಗತ್ಯ.
ಕರ್ಕಾಟಕ
ನವಗ್ರಹಗಳ ಸೂಚನೆಯಂತೆ ಈ ವಾರ ಬಹಳ ಎಚ್ಚರಿಕೆಯಿಂದ ಇರಬೇಕಾಗಿದೆ. ಹಣಕಾಸಿನ ವ್ಯವಹಾರಗಳು ಹಿಡಿತ ತಪ್ಪದಂತೆ ಜಾಗ್ರತೆ ವಹಿಸಿ. ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳುವುದು ಅಗತ್ಯ. ಕುಟುಂಬದವರೊಂದಿಗೆ ನಿಮ್ಮ ವರ್ತನೆ ಉತ್ತಮವಾಗಿರಲಿ. ಸಹೋದರ ಬಂಧುಗಳೊಂದಿಗೆ ಸೌಹಾರ್ದದಿಂದ ವರ್ತಿಸಿ. ಸಣ್ಣಪುಟ್ಟ ಕಲಹಗಳು ಉಂಟಾಗುವ ಸಾಧ್ಯತೆ ಇದೆ.
ಸಿಂಹ
ಅತಿಯಾದ ಆಡಂಬರದ ಜೀವನಶೈಲಿಯಿಂದ ನಷ್ಟ ಅನುಭವಿಸುವ ಸಾಧ್ಯತೆ ಇದೆ. ಪಾಲುದಾರಿಕೆ ವ್ಯವಹಾರವು ನಿಮಗೆ ಅಷ್ಟಾಗಿ ಹೊಂದಿಕೆಯಾಗುವುದಿಲ್ಲ. ಆರ್ಥಿಕ ವಿಚಾರಗಳಲ್ಲಿ ಹೆಚ್ಚಿನ ಎಚ್ಚರಿಕೆ ಅಗತ್ಯ. ಯೋಗ ಮತ್ತು ಪ್ರಾಣಾಯಾಮದಿಂದ ಪ್ರಯೋಜನ ಪಡೆಯಬಹುದು. ಅಲರ್ಜಿ ಹಾಗೂ ಬೆನ್ನುನೋವಿನಂತಹ ಸಮಸ್ಯೆಗಳು ಕಾಡುವ ಸಾಧ್ಯತೆ ಇದೆ. ಹೆಚ್ಚು ಭಾರ ಎತ್ತುವುದನ್ನು ತಪ್ಪಿಸಿ. ಸಂಗಾತಿಯೊಂದಿಗೆ ಹೊಂದಾಣಿಕೆಯಿಂದಿರಿ.
ಕನ್ಯಾ
ಕಠಿಣ ನಿರ್ಧಾರಗಳು ಕೆಲವೊಮ್ಮೆ ಜೀವನದಲ್ಲಿ ವಿರಸಕ್ಕೆ ಕಾರಣವಾಗಬಹುದು. ಮಹಿಳೆಯರ ಮೇಲಿನ ಅತಿಯಾದ ವ್ಯಾಮೋಹ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಹೊಸ ಉದ್ಯಮ ಆರಂಭಿಸಲು ಅವಸರ ಬೇಡ. ಹೊಸ ಉದ್ಯೋಗ ದೊರೆಯುವ ಯೋಗವಿದೆ. ಪ್ರಸ್ತುತ ಉದ್ಯೋಗದಲ್ಲಿ ಬದಲಾವಣೆ ಕಂಡುಬರುವ ಸಾಧ್ಯತೆ ಇದ್ದು, ಸಂಬಳದಲ್ಲಿ ಏರಿಕೆಯಾಗುವ ಅವಕಾಶವಿದೆ.
ತುಲಾ
ಶುಕ್ರನ ಸೂಚನೆಯಂತೆ ಮಧುಮೇಹ ಸಮಸ್ಯೆ ಇರುವವರು ಆರೋಗ್ಯದ ಬಗ್ಗೆ ಹೆಚ್ಚಿನ ಎಚ್ಚರ ವಹಿಸಬೇಕು. ಉತ್ತಮ ದೈವಾನುಗ್ರಹ ಇರುವುದರಿಂದ ಭೂ ವ್ಯವಹಾರದಲ್ಲಿ ಜಯ ದೊರೆಯಲಿದೆ. ವ್ಯವಹಾರ ಕ್ಷೇತ್ರದಲ್ಲಿ ಪ್ರತಿಯೊಂದು ಹೆಜ್ಜೆಯನ್ನೂ ಎಚ್ಚರಿಕೆಯಿಂದ ಇಡಿ. ಹೈನುಗಾರಿಕೆ ನೆಮ್ಮದಿಯೊಂದಿಗೆ ಲಾಭ ತರಲಿದೆ. ಬೀದಿಬದಿ ವ್ಯಾಪಾರಿಗಳಿಗೆ ಕೆಲವು ತೊಂದರೆಗಳು ಎದುರಾಗಬಹುದು. ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಿ.
ವೃಶ್ಚಿಕ
ಉತ್ತಮ ದೈವಾನುಗ್ರಹ ಇರುವುದರಿಂದ ಹಲವು ವಿಚಾರಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ಆತ್ಮೀಯ ಬಂಧುಗಳ ಸಹಾಯ ಸಕಾಲದಲ್ಲಿ ದೊರೆಯಲಿದೆ. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಮಿಂಚುವ ಸಮಯ. ಕಣ್ಣು ಮತ್ತು ಕಿವಿಯ ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ. ರಕ್ತ ಹಾಗೂ ಮೂತ್ರಾಶಯಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ ಬೇಡ. ಸಂಗಾತಿಯ ಕೋಪ ಮಿತಿಮೀರದಂತೆ ಪರಸ್ಪರ ಹೊಂದಾಣಿಕೆಯಿಂದಿರಿ.
ಧನು
ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಬರುವ ಡಿಸೆಂಬರ್ ತಿಂಗಳವರೆಗೆ ಕೆಲವು ಸವಾಲುಗಳು ಎದುರಾಗಬಹುದು. ಮಾತಿನ ಮೇಲೆ ಹಿಡಿತವಿರಲಿ. ಬರುವ ನಿಂದನೆಗಳ ಬಗ್ಗೆ ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ಆರೋಗ್ಯದ ವಿಚಾರದಲ್ಲಿ ವೈದ್ಯರನ್ನು ಸಂಪರ್ಕಿಸುವ ಅನಿವಾರ್ಯತೆ ಎದುರಾಗಬಹುದು. ಹಣ ಗಳಿಕೆಗಾಗಿ ಬೇರೆ ಬೇರೆ ಮಾರ್ಗಗಳನ್ನು ಕಂಡುಕೊಳ್ಳುವಿರಿ. ತಾಯಿಯ ಕಡೆಯಿಂದ ಸಹಾಯ ದೊರೆಯಲಿದೆ. ಗಂಟು ನೋವು ಹಾಗೂ ಬೆನ್ನುನೋವಿನ ಬಗ್ಗೆ ಎಚ್ಚರ ವಹಿಸಿ. ಯೋಗ, ಪ್ರಾಣಾಯಾಮ ಸಹಕಾರಿ.
ಮಕರ
ಸಾಡೇಸಾತಿ ಮತ್ತೊಮ್ಮೆ ಪ್ರಭಾವ ಬೀರುತ್ತಿರುವುದರಿಂದ ಧನಾತ್ಮಕ ಚಿಂತನೆಗಳನ್ನು ಬೆಳೆಸಿಕೊಳ್ಳಿ. ಇದರಿಂದ ಉತ್ಸಾಹ ಹೆಚ್ಚಾಗಲಿದೆ. ನೃತ್ಯ ಮತ್ತು ಸಂಗೀತ ಕ್ಷೇತ್ರದಲ್ಲಿರುವವರಿಗೆ ಸತತ ಅವಕಾಶಗಳು ದೊರೆಯಲಿವೆ. ಚಂಚಲ ಮನಸ್ಥಿತಿ ಕೆಲವು ತೊಂದರೆಗಳಿಗೆ ಕಾರಣವಾಗಬಹುದು. ಭೂಮಿ ಸಂಬಂಧಿತ ವ್ಯವಹಾರಗಳು ಉತ್ತಮ ಲಾಭ ತರಲಿವೆ. ಮನೆ ಕಟ್ಟುವ ಯೋಜನೆ ಕೈಗೂಡುವ ಸಾಧ್ಯತೆ ಇದೆ. ಹೊಸ ವಾಹನ ಖರೀದಿಸುವ ಯೋಗವೂ ಇದೆ.
ಕುಂಭ
ನೀವು ನಡೆಸುವ ಯಾವುದೇ ವ್ಯವಹಾರದಲ್ಲಿ ಪ್ರಾಮಾಣಿಕತೆಗೆ ಆದ್ಯತೆ ನೀಡಿ. ಮಕ್ಕಳನ್ನು ಉನ್ನತ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸಿ. ಸದ್ಯಕ್ಕೆ ಷೇರು ವಹಿವಾಟಿನಿಂದ ದೂರವಿರುವುದು ಉತ್ತಮ. ಹಿರಿಯರ ಅನಾರೋಗ್ಯದ ಸ್ಥಿತಿ ನಿಮಗೆ ಚಿಂತೆ ಉಂಟುಮಾಡಬಹುದು. ಸರ್ಕಾರಿ ಕೆಲಸಗಳು ಉತ್ತಮ ರೀತಿಯಲ್ಲಿ ನಡೆಯಲಿವೆ. ದೈವಾನುಗ್ರಹಕ್ಕಾಗಿ ಡಿಸೆಂಬರ್ ತಿಂಗಳವರೆಗೆ ಕಾಯಬೇಕಾಗಬಹುದು. ಖರ್ಚು-ವೆಚ್ಚಗಳ ಬಗ್ಗೆ ಎಚ್ಚರಿಕೆ ವಹಿಸಿ.
ಮೀನಾ
ಉತ್ತಮ ದೈವಾನುಗ್ರಹ ಇರುವುದರಿಂದ ವಿದ್ಯಾರ್ಥಿಗಳು ಯಶಸ್ಸು ಸಾಧಿಸಲಿದ್ದಾರೆ. ಹೋಟೆಲ್ ಅಥವಾ ಕಾರ್ಖಾನೆಯಂತಹ ಉದ್ಯಮಗಳು ಯಶಸ್ವಿಯಾಗಿ ನಡೆಯಲಿವೆ. ಹಾಸ್ಯವೂ ಅತಿಯಾದರೆ ವಿರಸಕ್ಕೆ ಕಾರಣವಾಗಬಹುದು. ದಾಂಪತ್ಯ ಜೀವನದಲ್ಲಿ ಕೆಲವು ಭಿನ್ನಾಭಿಪ್ರಾಯಗಳು ಉಂಟಾಗುವ ಸಾಧ್ಯತೆ ಇದೆ. ಅನ್ಯ ಮಹಿಳೆಯರ ವಿಚಾರದಲ್ಲಿ ಎಚ್ಚರಿಕೆ ವಹಿಸಿ. ಆತ್ಮೀಯರಿಂದಲೇ ಮೋಸ ಹೋಗುವ ಸಾಧ್ಯತೆ ಇರುವುದರಿಂದ ಹಣಕಾಸು ಹಾಗೂ ವೈಯಕ್ತಿಕ ವಿಚಾರಗಳಲ್ಲಿ ಜಾಗ್ರತೆ ಅಗತ್ಯ.







































