[t4b-ticker]

ಬಾವಿಯಲ್ಲಿ ಸಿಲುಕಿದ ವ್ಯಕ್ತಿಯ ರಕ್ಷಣೆ

Picture of RB NEWS

RB NEWS

Bureau Report

ಬಾವಿಯಲ್ಲಿ ಸಿಲುಕಿದ ವ್ಯಕ್ತಿಯ ರಕ್ಷಣೆ

ಕಾರ್ಕಳ: ಬೆಕ್ಕನ್ನು ರಕ್ಷಿಸಲು ಮುಂದಾಗಿ ಬಾವಿಗೆ ಬಿದ್ದ ಅರ್ಚಕರೊಬ್ಬರನ್ನು ಕಾರ್ಕಳ ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಿಸಿದ ಘಟನೆ ಕಾರ್ಕಳದ ಪುಲ್ಕೇರಿ ಬೈಪಾಸಿನಲ್ಲಿ ನಡೆದಿದೆ.

ಸೋಮವಾರ ಬೆಳಿಗ್ಗೆ ೭.೧೫ರ ವೇಳೆಗೆ ಈ ಘಟನೆ ನಡೆದಿದೆ. ಅಗ್ನಿಶಾಮಕ ದಳಕ್ಕೆ ಬಂದ ಕರೆ ಅನ್ವಯ ಅಗ್ನಿಶಾಮಕ ದಳದ ಸಿಬ್ಬಂದಿಯರು ಘಟನಾ ಸ್ಥಳಕ್ಕೆ ತೆರಳಿದಾಗ ಬಾವಿಯಲ್ಲಿ ನಾರಾಯಣ ಭಟ್ಟ (೪೮) ಎಂಬವರು ಸ್ಥಳೀಯ ಬಾವಿಯೊಳಗೆ ಸಿಲುಕಿಕೊಂಡಿದ್ದರು.

ಅಗ್ನಿಶಾಮಕ ದಳದ ಸಿಬ್ಬಂದಿಯರು ಕಾರ್ಯಪ್ರವೃತ್ತಗೊಂಡು ಕೂಡಲೇ ನಾರಾಯಣ ಭಟ್ಟ ಅವರನ್ನು ಬಾವಿಯಿಂದ ಮೇಲಕ್ಕೇತಿ ಪ್ರಾಣ ಉಳಿಸಿದ್ದಾರೆ.

ಅಗ್ನಿಶಾಮಕದಳದ ಠಾಣಾಧಿಕಾರಿ ಚಂದ್ರಶೇಖರ್ ನೇತೃತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಪ್ರಮುಖ ಅಗ್ನಿಶಾಮಕ ದಳದ ರೂಪೇಶ್ ಅವರು ಬಾವಿಗೆ ಇಳಿದು ನಾರಾಯಣ ಭಟ್ಟ ಅವರ ಪ್ರಾಣ ಉಳಿಸಿದ್ದಾರೆ.

ಅಗ್ನಿಶಾಮಕ ದಳದ ಸಿಬ್ಬಂದಿಯರಾದ ದಿನೇಶ್, ಭೀಮಪ್ಪ, ಗಣೇಶ್, ಸುರೇಶ್ ಹಾಗೂ ಚಾಲಕ ಮುಜಾಮೀರ್ ಸಹಕರಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top