ಕಾರ್ಕಳ ಕ್ರಿಯೇಟಿವ್ ಕಾಲೇಜು ಕೆ.ಸಿ.ಇ.ಟಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ
RB NEWS
Bureau Report
ಕಾರ್ಕಳ ಕ್ರಿಯೇಟಿವ್ ಕಾಲೇಜು ಕೆ.ಸಿ.ಇ.ಟಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ
ಕಾರ್ಕಳ: ಎಪ್ರಿಲ್ ೨೩ ಮತ್ತು ೨೪ ರಂದು ನಡೆದ ಕೆ.ಸಿ.ಇ.ಟಿ ಪರೀಕ್ಷೆಯಲ್ಲಿ ಪ್ರಸ್ತುತ ಇಂಜಿನಿಯರಿoಗ್, ಕೃಷಿ ವಿಜ್ಞಾನ, ಪಶು ವೈದ್ಯಕೀಯ ಸೇರಿದಂತೆ ಹಲವು ಪ್ರಮುಖ ಕೋರ್ಸ್ ಗಳಿಗೆ ಸೇರಲು ನಡೆಯುವ ರಾಜ್ಯಮಟ್ಟದ ಪ್ರವೇಶ ಪರೀಕ್ಷೆಯಲ್ಲಿ ಇಂಜಿನಿಯರಿAಗ್ ವಿಭಾಗದಲ್ಲಿ ನಾಗದೇವ್ ಎಂ.ಜಿ ೨೮ನೇ ರ್ಯಾಂಕ್ ಪಡೆದುಕೊಂಡು ಅದ್ಭುತ ಸಾಧನೆಗೈದಿದ್ದಾರೆ. ಮಾತ್ರವಲ್ಲದೇ ವಿದ್ಯಾರ್ಥಿಗಳಾದ ಸಂವಿತ್ ಅಮಿತ್ ೫೫, ಧ್ರುವ ವಿ ಬಿ ೭೧, ತೇಜಸ್ ಆರ್.ಬಿ ೮೨, ನಮಿತ್ ಕೆ ಹೆಗಡೆ ೧೯೯ ತೇಜಸ್ ಹೆಗಡೆ ಹೆಚ್ ಡಿ ೨೩೬, ಸುಕ್ಷೀತ್ ಗಿರೀಶ್ ಗೌಡ ೨೩೮, ನಿನಾದ್ ರಾಜೇಶ್ ನಾಯ್ಕ್ ೩೯೫, ಪ್ರಣಮ್ಯಾ ಭಟ್, ೪೯೦, ಲೇಖನ್ ಕಾರಿಯಪ್ಪ ೪೯೩, ಧನುಷ್ ಹೆಚ್ ಎ, ೪೯೬ ರ್ಯಾಂಕ್ ಗಳಿಸಿದ್ದಾರೆ. ಇಂಜಿನಿಯರಿAಗ್ ವಿಭಾಗದಲ್ಲಿ ೨೨ ವಿದ್ಯಾರ್ಥಿಗಳು ೧೦೦೦ ರ್ಯಾಂಕ್ ಗಳೊಳಗೆ, ೪೩ ವಿದ್ಯಾರ್ಥಿಗಳು ೨೦೦೦ ರ್ಯಾಂಕ್ಗಳೊಳಗೆ ಇದ್ದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ಕೃಷಿ ವಿಭಾಗದಲ್ಲಿ ಧ್ರುವ ವಿ.ಬಿ ೧೧, ತೇಜಸ್ ಆರ್.ಬಿ.೧೭ ತೇಜಸ್ ಹೆಗ್ಡೆ ಹೆಚ್.ಡಿ ೫೩, ಲೇಖನ್ ಕಾರಿಯಪ್ಪ ೬೯, ಪ್ರಣಮ್ಯಾ ಭಟ್ ೯೦ ಮೋಕ್ಷ ವಿ.ಎಮ್ ೧೦೮, ಶ್ರಾವ್ಯಾ ಬಾಲಕೃಷ್ಣ ೧೪೮ , ಬಗನಾಲ್ ಆಶ್ರಿತ್ ನಂದನ್ ೨೦೫, ನಟರಾಜ್ ೨೬೧, ಆರ್ಯ ವಿ.೨೬೯, ಕೆ ಎನ್ ರಾಘವೇಂದ್ರ ೩೦೩, ಸೃಜನಾ ಎಸ್ ೩೪೫, ತರುಣ್ ಸಾಗರ್ ೩೬೯, ಅನುಷ್ಕಾ ಜನಾರ್ ೪೩೬, ಹಿತರ್ತ್ ೪೪೩ ರ್ಯಾಂಕ್ ಪಡೆದಿದ್ದಾರೆ.
ಪಶು ವೈದ್ಯಕೀಯದಲ್ಲಿ ತೇಜಸ್ ಆರ್.ಬಿ. ೧೦೨, ಧ್ರುವ ವಿ.ಬಿ ೧೨೦., ಮೋಕ್ಷ ವಿ.ಎಮ್ ೧೯೭., ವಿ.ಆರ್ ಗಣೇಶ್ ೨೩೦., ಲೇಖನ್ ಕಾರಿಯಪ್ಪ ೨೪೮, ರಿಶಿತ್ ಎಂ.ಶೆಟ್ಟಿ ೪೪೧ ರ್ಯಾಂಕ್ ಪಡೆದಿದ್ದಾರೆ. ನರ್ಸಿಂಗ್ ವಿಭಾಗದಲ್ಲಿ ತೇಜಸ್ ಆರ್.ಬಿ ೧೦೨, ಧ್ರುವಿ ವಿ.ಬಿ ೧೨೧., ಮೋಕ್ಷ ವಿ.ಎಂ ೧೯೮., ವಿ.ಆರ್ ಗಣೇಶ್ ೨೩೧., ಲೇಖನ್ ಕಾರಿಯಪ್ಪ ೨೪೯ ,ರಿಶಿತ್ ಎಂ ಶೆಟ್ಟಿ ೪೪೨ ರ್ಯಾಂಕ್ ಪಡೆಡದಿದ್ದಾರೆ. ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಕ್ರಿಯೇಟಿವ್ ಕಾಲೇಜಿನ ೩೦ ವಿದ್ಯಾರ್ಥಿಗಳು ೧೦೦ ರ ರ್ಯಾಂಕ್ ಒಳಗೆ, ೨೯೦ ವಿದ್ಯಾರ್ಥಿ ೧೦೦೦ ರ್ಯಾಂಕ್ನೊಳಗೆ, ೫೨೧ ವಿದ್ಯಾರ್ಥಿಗಳು ೨೦೦೦ ರ್ಯಾಂಕ್ನೊಳಗೆ ಸ್ಥಾನ ಗಳಿಸಿಕೊಂಡಿದ್ದಾರೆ. ಕಾಲೇಜು ನಿರಂತರ ಐದು ವರ್ಷಗಳಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲೂ ಶೇ. ೧೦೦ ಫಲಿತಾಂಶ ದಾಖಲಿಸಿರುವುದನ್ನು ಇಲ್ಲಿ ಗಮನಿಸಬಹುದಾಗಿದೆ. ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಪರೀಕ್ಷಾ ಸಂಯೋಜಕ ಕಾಂತರಾಜ್ ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಅಭಿನಂದನೆ ಸಲ್ಲಿಸಿ ಸಂತಸ ವ್ಯಕ್ತಪಡಿಸಿದ್ದಾರೆ.