ಕ್ರೀಡಾಂಗಣದ ಬಲೆಗೆ ಸಿಕ್ಕ ಪರಿವಾಳ !

Picture of RB NEWS

RB NEWS

Bureau Report

ಕ್ರೀಡಾಂಗಣದ ಬಲೆಗೆ ಸಿಕ್ಕ ಪರಿವಾಳ!

ಕಾರ್ಕಳ: ಕಾರ್ಕಳ ತಾಲೂಕಿನ ಸಾಣೂರು ಮಠದಕೆರೆ ಮೈದಾನದಲ್ಲಿ ತಡೆಬೇಲಿಗೆ ಪಾರಿವಾಳವೊಂದು ಸಿಕ್ಕಿಹಾಕಿಕೊಂಡ ಘಟನೆ ಮಾನವೀಯತೆ ಮೆರೆದ ಉದಾಹರಣೆಯಾಗಿ ಹೊರಹೊಮ್ಮಿದೆ.
ಮೈದಾನದ ತಡೆಬೇಲಿಗೆ ಸಿಕ್ಕಿ ಅಸಹಾಯಕ ಸ್ಥಿತಿಯಲ್ಲಿ ಅಲೆಯುತ್ತಿದ್ದ ಪಾರಿವಾಳವನ್ನು ಗಮನಿಸಿದ ಸ್ಥಳೀಯರಾದ ಗಣೇಶ್ ಸಾಣೂರು ಹಾಗೂ ಸಂತೋಷ ಅವರು ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣೆ ಕಾರ್ಯ ಕೈಗೊಂಡರು. ಬಲೆಗೆ ಬಿಗಿಯಾಗಿ ಸಿಕ್ಕಿಕೊಂಡಿದ್ದ ಪಾರಿವಾಳವನ್ನು ಎಚ್ಚರಿಕೆಯಿಂದ ಬಿಡಿಸಿ ಸುರಕ್ಷಿತವಾಗಿ ಹೊರತೆಗೆದರು.
ಈ ರಕ್ಷಣಾ ಕಾರ್ಯದ ವಿಡಿಯೋವನ್ನು ಸ್ಥಳದಲ್ಲಿದ್ದವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅದು ಇದೀಗ ವ್ಯಾಪಕವಾಗಿ ವೈರಲ್ ಆಗಿದೆ. ಪಕ್ಷಿಯ ಜೀವ ಉಳಿಸಿದ ಇವರ ಕಾರ್ಯಕ್ಕೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. “ಮಾನವೀಯತೆ ಇನ್ನೂ ಜೀವಂತವಾಗಿದೆ” ಎಂಬಂತಹ ಪ್ರತಿಕ್ರಿಯೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದುಬರುತ್ತಿವೆ.
ಸ್ಥಳೀಯರ ಈ ಸಣ್ಣ ಆದರೆ ಮಹತ್ವದ ಕಾರ್ಯವು ಪ್ರಾಣಿ–ಪಕ್ಷಿಗಳ ಮೇಲಿನ ಕಾಳಜಿಯನ್ನು ಮತ್ತೊಮ್ಮೆ ನೆನಪಿಸಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top