
ವಾರಭವಿಷ್ಯ
(08.02.2026 ರಿಂದ 14.02.2026)
ಮೇಷ :
ಶುಭ ಫಲಗಳು ಹಂತ ಹಂತವಾಗಿ ಅನುಭವಕ್ಕೆ ಬರಲಿವೆ. ಸಾಡೇ ಸಾತ್ ಶನಿಯ ಪ್ರಭಾವ ಹಾಗೂ ಗುರುವಿನ ಅನುಗ್ರಹದ ಕೊರತೆಯಿಂದಾಗಿ ಮಾನಸಿಕ ಒತ್ತಡ ಮತ್ತು ವರಮಾನದಲ್ಲಿ ಅಸ್ಥಿರತೆ ಕಂಡುಬರಲಿದೆ. ಆದರೂ ಸಾಂಸಾರಿಕವಾಗಿ ಉತ್ತಮ ಬದಲಾವಣೆ, ಶುಭ ಕಾರ್ಯಗಳಲ್ಲಿ ಪ್ರಗತಿ ಮತ್ತು ಅನಿರೀಕ್ಷಿತ ರೀತಿಯಲ್ಲಿ ಕಾರ್ಯಸಾಧನೆ ಆಗಲಿದೆ. ವಿಷ್ಣು ಸಹಸ್ರನಾಮ ಪಾರಾಯಣ ಶ್ರೇಯಸ್ಕರ.
ವೃಷಭ :
ಶನಿ ಮತ್ತು ಗುರುವಿನ ಅನುಗ್ರಹದಿಂದ ಜೀವನದಲ್ಲಿ ನೆಮ್ಮದಿ ದೊರೆಯಲಿದೆ. ಅನೇಕ ರೀತಿಯಲ್ಲಿ ಧನಲಾಭವಾಗಲಿದೆ. ನಿಮ್ಮ ಹಠ ಮತ್ತು ಛಲದಿಂದ ಹೋರಾಡುವ ಮನೋಭಾವವೇ ಯಶಸ್ಸಿಗೆ ಕಾರಣವಾಗುತ್ತದೆ. ಆರೋಗ್ಯದ ದೃಷ್ಟಿಯಿಂದ ಬಿಪಿ, ಶುಗರ್ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡಿರಿ. ಕುಂಭ ರಾಶಿಗೆ ರವಿಯ ಪ್ರವೇಶವು ನಿಮ್ಮ ಜೀವನದಲ್ಲಿ ಹಲವು ಬದಲಾವಣೆಗಳನ್ನು ತರಲಿದೆ.
ಮಿಥುನ :
ಅಷ್ಟಮದಲ್ಲಿ ಸಂಚರಿಸುತ್ತಿರುವ ಚಂದ್ರ ಮತ್ತು ಕುಜರಿಂದ ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಯಾವುದೇ ರೀತಿಯ ಅಂಜಿಕೆ ಬೇಡ. ನಿಮ್ಮ ಕಠಿಣ ಪರಿಶ್ರಮ ಹಾಗೂ ಗುರು–ಹಿರಿಯರ ಅನುಗ್ರಹದಿಂದ ನೆಮ್ಮದಿ ದೊರೆಯಲಿದೆ. ಹಿತಶತ್ರುಗಳಿಂದ ಎಚ್ಚರ ಅಗತ್ಯ. ಸಹೋದರ ವರ್ಗದವರ ಸಹಕಾರ ಸಿಗಲಿದೆ. ಕೆಲವೊಮ್ಮೆ ಮನಸ್ಸಿಗೆ ಬೇಸರ ಹಾಗೂ ಅವಮಾನಕಾರಿ ಮಾತುಗಳನ್ನು ಕೇಳುವ ಸಂದರ್ಭ ಉಂಟಾಗಬಹುದು.
ಕರ್ಕಾಟಕ :
ನವಗ್ರಹಗಳು ಪ್ರತಿಕೂಲ ಸ್ಥಿತಿಯಲ್ಲಿ ಇರುವುದರಿಂದ ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಹೊರೆ ಹಾಗೂ ಖರ್ಚು ವೆಚ್ಚಗಳು ಹೆಚ್ಚಾಗಲಿವೆ. ಹಣಕಾಸು ಮತ್ತು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ. ಯಾವುದೇ ಹೊಸ ಹೂಡಿಕೆಗಳನ್ನು ತಪ್ಪಿಸಿ, ಇದ್ದದ್ದನ್ನು ಸ್ಥಿರವಾಗಿ ನಡೆಸುವುದು ಒಳಿತು. ಮಿತ್ರವರ್ಗದವರ ಸಹಕಾರ ದೊರೆಯಲಿದೆ. ನವಗ್ರಹ ಸ್ತೋತ್ರ ಪಾರಾಯಣ ಮಾಡಿರಿ.
ಸಿಂಹ :
ಗುರುವಿನ ದೈವಾನುಗ್ರಹದಿಂದ ದೃಢ ಮನಸ್ಸಿನಿಂದ ಮುಂದುವರಿಯಬೇಕಾಗಿದೆ. ಸಪ್ತಮ ಮತ್ತು ಅಷ್ಟಮ ಭಾವದ ಗ್ರಹಗಳ ಪ್ರತಿಕೂಲತೆಯಿಂದ ಸಂಸಾರದಲ್ಲಿ ಅಶಾಂತಿ ಮುಂದುವರಿಯಬಹುದು. ಕೆಲಸಗಳಲ್ಲಿ ವಿಳಂಬ, ಹಿನ್ನೆಡೆ ಹಾಗೂ ಮಾನಸಿಕ ಅಸ್ಥಿರತೆ ಕಂಡುಬರಲಿದೆ. ಸ್ವಯಂಕೃತ ಅಪರಾಧಭಾವ ಮನಸ್ಸನ್ನು ಕಾಡಬಹುದು. ಆದಿತ್ಯ ಹೃದಯ ಪಾರಾಯಣ ಹಿತಕರ.
ಕನ್ಯಾ :
ರಾಹು ಇತರ ಗ್ರಹಗಳೊಂದಿಗೆ ಅನುಕೂಲ ಸ್ಥಾನದಲ್ಲಿ ಸಂಚರಿಸುವುದರಿಂದ ಕೆಲಸಕಾರ್ಯಗಳಲ್ಲಿ ಅನಿರೀಕ್ಷಿತ ಮುನ್ನಡೆ ಕಾಣಿಸಿಕೊಳ್ಳಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದೆ. ವ್ಯಾಪಾರ–ವಹಿವಾಟುಗಳಲ್ಲಿ ಲಾಭ, ಋಣಬಾಧೆ ನಿವಾರಣೆ ಸಾಧ್ಯ. ವಿವಾಹ ಯೋಗ್ಯರಿಗೆ ಕಂಕಣ ಬಲ ದೊರೆಯಲಿದೆ. ಉದ್ಯೋಗ ನಿರೀಕ್ಷೆಯಲ್ಲಿರುವವರಿಗೆ ಉದ್ಯೋಗ ಪ್ರಾಪ್ತಿ ಯೋಗವಿದೆ.
ತುಲಾ :
ಗುರುಗ್ರಹ ಅನುಕೂಲ ಸ್ಥಿತಿಯಲ್ಲಿ ಇರುವುದರಿಂದ ಆರ್ಥಿಕ ಹಾಗೂ ವ್ಯವಹಾರಿಕ ಪ್ರಗತಿ ಸಾಧ್ಯ. ಕೃಷಿ–ಬೇಸಾಯ ಕ್ಷೇತ್ರದಲ್ಲಿ ಚೇತರಿಕೆ ಕಂಡುಬರಲಿದೆ. ವಿವಾಹ ಯೋಗ ಕೂಡಿ ಬರುತ್ತಿದೆ. ಜನ್ಮ ರಾಶಿಯಲ್ಲಿ ರವಿ, ಬುಧ, ಶುಕ್ರ, ರಾಹು ಇರುವುದರಿಂದ ಶಿವ ಕ್ಷೇತ್ರದಲ್ಲಿ ಯಥಾಶಕ್ತಿ ಸೇವೆ ಸಲ್ಲಿಸಿರಿ. ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸದ ಅವಕಾಶಗಳು ದೊರೆಯಲಿವೆ.
ವೃಶ್ಚಿಕ :
ಸುಖ ಸ್ಥಾನದಲ್ಲಿ ಶತ್ರುಗ್ರಹಗಳ ಒಗ್ಗೂಡಿಕೆ ಆರೋಗ್ಯ ಹಾಗೂ ತಾಯಿಯ ಆರೋಗ್ಯದ ದೃಷ್ಟಿಯಿಂದ ಶುಭವಲ್ಲ. ಆರ್ಥಿಕ ನಷ್ಟ ಸಂಭವಿಸಬಹುದು. ಪಂಚಮದ ಶನಿಯಿಂದ ಮಕ್ಕಳೊಂದಿಗೆ ಮನಸ್ತಾಪ ಉಂಟಾಗುವ ಸಾಧ್ಯತೆ ಇದೆ. ರುದ್ರ ಪಾರಾಯಣ ಪ್ರತಿನಿತ್ಯ ಮಾಡುವುದು ಶ್ರೇಯಸ್ಕರ. ಜೂನ್ 2ರವರೆಗೆ ತಾಳ್ಮೆ ಮತ್ತು ಸಂಯಮ ಅಗತ್ಯ. ಕುಜ–ಚಂದ್ರ ಅನುಕೂಲಕರವಾಗಿದ್ದಾರೆ.
ಧನು :
ಉದ್ಯೋಗ ಮತ್ತು ವ್ಯವಹಾರದಲ್ಲಿ ಸ್ಥಿರತೆ ದೊರೆಯಲಿದೆ. ಶನಿ ಸುಖ ಸ್ಥಾನದಲ್ಲಿರುವುದರಿಂದ ಎಚ್ಚರಿಕೆಯಿಂದ ನಡೆಯುವಂತೆ ಸೂಚಿಸುತ್ತಾನೆ. ತೃತೀಯದಲ್ಲಿರುವ ಗ್ರಹಗಳು ಸಂಪೂರ್ಣ ಅನುಕೂಲ ನೀಡಲಿದ್ದು ಆದಾಯದಲ್ಲಿ ಹೆಚ್ಚಳವಾಗಲಿದೆ. ಮಾತಿನಲ್ಲಿ ಉದ್ವೇಗ ತಪ್ಪಿಸಿಕೊಳ್ಳಿರಿ. ಉದ್ಯೋಗ ಪ್ರಾಪ್ತಿ ಯೋಗವಿದೆ. ದೈವಾನುಗ್ರಹ ಉತ್ತಮ.
ಮಕರ :
ಗ್ರಹಗಳು ಪ್ರತಿಕೂಲ ಸ್ಥಿತಿಯಲ್ಲಿ ಇರುವುದರಿಂದ ಕಾರ್ಯಭಂಗ ಹಾಗೂ ಅನಿರೀಕ್ಷಿತ ಖರ್ಚುಗಳು ಸಂಭವಿಸಬಹುದು. ಕುಟುಂಬದಲ್ಲಿ ಸಣ್ಣ ವಿಚಾರಗಳಿಗೂ ಮನಸ್ತಾಪ ಉಂಟಾಗಲಿದೆ. ಜೂನ್ 2ರವರೆಗೆ ಶಿವ ಸಹಸ್ರನಾಮ ಜಪ ಮಾಡುವುದು ಒಳಿತು. ವಿದ್ಯಾಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಪರಿಶ್ರಮ ವಹಿಸಬೇಕು. ಆರೋಗ್ಯದ ಬಗ್ಗೆ, ವಿಶೇಷವಾಗಿ ಉಷ್ಣ ಸಂಬಂಧಿ ಸಮಸ್ಯೆಗಳ ಬಗ್ಗೆ ಎಚ್ಚರ ಅಗತ್ಯ.
ಕುಂಭ :
ದೈವಾನುಗ್ರಹ ಇದ್ದರೂ ಜನ್ಮ ರಾಶಿಯಲ್ಲಿ ಪಾಪಗ್ರಹಗಳ ಒಗ್ಗೂಡಿಕೆ ಇರುವುದರಿಂದ ಹೆಚ್ಚಿನ ಎಚ್ಚರಿಕೆ ಅಗತ್ಯ. ರಾಜಕೀಯ ಚಟುವಟಿಕೆಗಳಿಂದ ಒಂದು ತಿಂಗಳು ದೂರವಿರುವುದು ಉತ್ತಮ. ತಂದೆಯವರ ಆರೋಗ್ಯದ ಜವಾಬ್ದಾರಿ ನಿಮ್ಮ ಮೇಲಿದೆ. ಅಲರ್ಜಿ ಸಮಸ್ಯೆಗಳು ಆರಂಭವಾಗಬಹುದು. ನಾಗದೇವರ ಯಥಾಶಕ್ತಿ ಸೇವೆ ಮಾಡಿರಿ. ಸಾಡೇ ಸಾತ್ ಶನಿಯ ಪ್ರಭಾವ 2028ರವರೆಗೆ ಮುಂದುವರಿಯಲಿದೆ.
ಮೀನ :
ಜನ್ಮ ರಾಶಿಯಲ್ಲಿ ಶನಿ, ವ್ಯಯ ಸ್ಥಾನದಲ್ಲಿ ಪಾಪಗ್ರಹಗಳು ಹಾಗೂ ಸುಖ ಸ್ಥಾನದಲ್ಲಿ ಗುರು ಇರುವುದರಿಂದ ಅನುಕೂಲ ಪರಿಸ್ಥಿತಿ ಕಡಿಮೆ. ಕುಟುಂಬದಲ್ಲಿ ಮೌನ ವಹಿಸುವುದು ಒಳಿತು. ಆರೋಗ್ಯದ ದೃಷ್ಟಿಯಿಂದ ಸದಾ ಎಚ್ಚರ ಅಗತ್ಯ. ನಿಮ್ಮವರೇ ದೂರವಾಗುವ ಸಾಧ್ಯತೆ ಇದೆ. ರಾಜಕೀಯ ವ್ಯಕ್ತಿಗಳು ತಟಸ್ಥರಾಗಿರುವುದು ಉತ್ತಮ. ಶಿವ ಸಹಸ್ರನಾಮ ಪಾರಾಯಣ ಮಾಡಿರಿ.

ಸೂಚನೆ :
ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕ ತಯಾರಿಸಲಾಗುವುದು.
ಜಾತಕವಿಲ್ಲದವರಿಗೆ ಕವಡೆ ಮೂಲಕ ಪ್ರಸ್ತುತ ವಿಚಾರಗಳ ಮಾಹಿತಿ ನೀಡಲಾಗುವುದು.
ಶುಭ ಕಾರ್ಯಗಳಿಗೆ ಮುಹೂರ್ತ ನಿಶ್ಚಯ, ವಾಸ್ತು ಸಲಹೆ ಹಾಗೂ ವಿವಾಹ ಹೊಂದಾಣಿಕೆ ಮಾಡಿಕೊಡಲಾಗುವುದು










































