ಗಂಡನ ಗುಣ ಪ್ರಶ್ನಿಸಿದ್ದು, ಪತ್ನಿಯ ಕೊಲೆಗೆ ಕಾರಣವಾಯಿತ್ತೇ?

Picture of RB NEWS

RB NEWS

Bureau Report

ಕಾರ್ಕಳ: ಅಕ್ರಮ ಸಂಬಂಧ ವಿಚಾರವೇ ಪತ್ನಿ ಹತ್ಯೆಗೆ ಕಾರಣವಾಗಿರುವ ಘಟನೆ ಕಾರ್ಕಳ ಸಮೀಪ ಬೆಳಕಿಗೆ ಬಂದಿದೆ. ಪತ್ನಿಯನ್ನು ಹತ್ಯೆಗೈದ ಆರೋಪದಡಿ ಸುನೀಲ್ ಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.
ಪೊಲೀಸ್ ಮೂಲಗಳ ಪ್ರಕಾರ, ಆರೋಪಿ ಸುನೀಲ್ ಕುಮಾರ್ ಕಾರ್ಕಳ ಮೂಲದ ವಿಧವೆಯೊಬ್ಬರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಸುದ್ದಿ ಹರಿದಾಡುತ್ತಿತ್ತು. ಈ ಸಂಬಂಧವನ್ನು ಪ್ರಶ್ನಿಸಿ ಪತ್ನಿ ಆಗಾಗ್ಗೆ ಜಗಳ ನಡೆಸುತ್ತಿದ್ದಳೆಂದು ತಿಳಿದುಬಂದಿದೆ.
ಇದೇ ವಿಚಾರದಲ್ಲಿ ದಂಪತಿಗಳ ನಡುವೆ ತೀವ್ರ ಕಲಹ ಉಂಟಾಗಿದ್ದು, ಪತ್ನಿ ತನ್ನ ಗುಣವನ್ನು ಪ್ರಶ್ನಿಸಿದ್ದಕ್ಕೆ ಕೋಪಗೊಂಡ ಆರೋಪಿ, ಆಕೆಯನ್ನು ಕೊಲೆ ಮಾಡುವುದಕ್ಕೆ ಪೂರ್ವಯೋಜನೆ ರೂಪಿಸಿಕೊಂಡಿದ್ದಾನೆ ಎನ್ನಲಾಗಿದೆ. ಆ ಯೋಜನೆಯನ್ನು ಕಾರ್ಯರೂಪಕ್ಕೆ ತಂದು ಪತ್ನಿಯನ್ನು ಹತ್ಯೆಗೈದಿರುವ ಆರೋಪ ಆತನ ಮೇಲೆ ಇದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ‘ಹೆಣ್ಣು–ಹೊನ್ನು–ಮಣ್ಣು’ ಎಂಬ ಸಾಮಾನ್ಯ ಹಿನ್ನಲೆಯಲ್ಲಿ ತನಿಖೆ ನಡೆಸುತ್ತಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top