ವಿದ್ಯುತ್ ಕಂಬದಿಂದ ಬಿದ್ದು ಯುವಕ ಮೃತ್ಯು

Picture of RB NEWS

RB NEWS

Bureau Report


ಕಾರ್ಕಳ : ಬೃಹತ್ ಗಾತ್ರದ ವಿದ್ಯುತ್ ಕಂಬ ಅಳವಡಿಸುವ ಸಂದರ್ಭದಲ್ಲಿ ಕಾರ್ಮಿಕನೊಬ್ಬ ಅಕಸ್ಮಿಕವಾಗಿ ನೆಲಕ್ಕೆ ಬಿದ್ದು ದಾರುಣ ರೀತಿಯಲ್ಲಿ ಮೃತಪಟ್ಟ ಘಟನೆ ಬಜಗೋಳಿಯ ಮುಡ್ರಾಲು ಕ್ರಾಸ್ ನಲ್ಲಿ ನಡೆದಿದೆ.

ಬುಧವಾರ ಸಂಜೆ ವೇಳೆಗೆ ಈ ಘಟನೆ ಸಂಭವಿಸಿದೆ. ಸುರಿದ ಮಳೆ, ಬಡಿದ ಸಿಡಿಲಿನ ಅಘಾತದ ನಡುವೆ ಯುವಕ 11 ಮೀಟರ್ ಎತ್ತರದ ಬೃಹತ್ ವಿದ್ಯುತ್ ಕಂಬದಿಂದ ಕ್ಷಣ ಮಾತ್ರದಲ್ಲಿ ಕೆಳಕ್ಕೆ ಬಿದ್ದ ಯುವಕ ಪ್ರಾಣಕಳೆದುಕೊಂಡಿದ್ದಾನೆ.

ಕಂಟ್ರಾಕ್ಟರ್ ದಾರರೊಂದಿಗೆ ಆ ಯುವಕ ದುಡಿಯುತ್ತಿದ್ದನು. ಅಸ್ಸಾಂ ಮೂಲದವನೆಂದು ತಿಳಿದುಬಂದಿದೆ. ಕಾರ್ಕಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.‌

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top