ಐತಿಹಾಸಿಕ ಅತ್ತೂರು ಸಂತಲಾರೆನ್ಸ್ ಬಸಿಲಿಕ ಮಹೋತ್ಸವ: ಜ. 18ರಂದು ಮಳಿಗೆಗಳ ಸೈಟ್ ಏಲಂ ಪ್ರಕ್ರಿಯೆ

Picture of RB NEWS

RB NEWS

Bureau Report

ಕಾರ್ಕಳ : ಐತಿಹಾಸಿಕ ಹಿನ್ನಲೆಯುಳ್ಳ ಅತ್ತೂರು ಸಂತಲಾರೆನ್ಸ್ ಬಸಿಲಿಕ ಮಹೋತ್ಸವದ ಪ್ರಯುಕ್ತ ಜ.18ರಂದು ನಿಟ್ಟೆ ಗ್ರಾಮ ಪಂಚಾಯತ್ ಮಳಿಗೆಗಳ ಸೈಟ್ ಏಲಂ ಪ್ರಕ್ರಿಯೆ ನಡೆಸಲಿದೆ.

ನಿಟ್ಟೆ ಗ್ರಾಮದ ಅತ್ತೂರು ಸೈಂಟ್ ಲಾರೆನ್ಸಿ ಇಗರ್ಜಿಯಲ್ಲಿ ದಿನಾಂಕ 25-01-2026 ರಿಂದ 29-01-2026 ರ ತನಕ ಜಾತ್ರಮಹೋತ್ಸವ ಜರಗಲಿರುವುದು.
ಆ ಪ್ರಯುಕ್ತವಾಗಿ ಅತ್ತೂರು ಚರ್ಚ್ ಎದುರುಗಡೆ ದ್ವಿಪಥ ರಸ್ತೆಯ ಅಂಚಿನಲ್ಲಿ ಪಂಚಾಯತ್ ನಿಗದಿ ಪಡಿಸಿದ 10 ಪೀಟ್ ಅಗಲದ ಸೈಟ್ ಗಳಲ್ಲಿ ತಾತ್ಕಾಲಿಕವಾಗಿ ಐದು ದಿನಗಳ ಕಾಲ ಪಂಚಾಯತ್ ನಿಗದಿಪಡಿಸಿದ ದರದಲ್ಲಿ ವ್ಯಾಪಾರ ಮಾಡುವ ಹಕ್ಕನ್ನು ಸೀಲ್ಡ್ ಟೆಂಡರು ಮುಖಾಂತರ ನೀಡಲಾಗುವುದು.
ನಿಟ್ಟೆ ಪಂಚಾಯತಿಯಿಂದ ಒದಗಿಸಿದ ಫಾರ್ಮನ್ನು ಕ್ರಮ ಪ್ರಕಾರ ತುಂಬಿಸಿ ರೂ.100.00 ರ ಠೇವಣಿ ರಶೀದಿಯೊಂದಿಗೆ, ಆಧಾರ್ ಕಾರ್ಡ್ ಜೆರಾಕ್ಸ್ ಕವರಿನಲ್ಲಿ ಹಾಕಿ ಬಂದ್ ಮಾಡಿ ಕವರಿನ ಮೇಲೆ ಸೈಟ್ ನಂಬ್ರ ಮತ್ತು ವಿಳಾಸ ನಮೂದಿಸಬೇಕು.
ಕವರನ್ನು ದಿನಾಂಕ 18-01-2026 ರಂದು ಅತ್ತೂರು ಸೈಂಟ್ ಲಾರೆನ್ಸ ಶಾಲಾ ಸಭಾಭವನದಲ್ಲಿ ಬೆಳಿಗ್ಗೆ ಗಂಟೆ: 9-00 ರಿಂದ 12-00 ರ ತನಕ ಟೆಂಡರು ಕವರುಗಳನ್ನು ಸ್ವೀಕರಿಸಲಾಗುವುದು. ದಿನಾಂಕ:18-01-2026 ರಂದು 12-00 ಗಂಟೆ ನಂತರ ಹಾಜರಿದ್ದ ಬಿಡ್ಡುದಾರರ ಸಮಕ್ಷಮ ಕವರನ್ನು ತೆರೆಯಲಾಗುವುದು. ಟೆಂಡರು ಪಾಸಾದವರು ಟೆಂಡರಿನಲ್ಲಿ ಕಾಣಿಸಿದ ಮೊತ್ತ ಮತ್ತು ರೂ.100-00 ಲೈಸನ್ನು ಫೀಸು ಆ ಕೂಡಲೇ ಪಾವತಿಸುವುದು ಸದ್ರಿಯವರ ಕಟ್ಟಿದ ಠೇವಣಿ ರೂ.100.00 ನ್ನು ಹಿಂತಿರುಗಿಸುವುದಿಲ್ಲ. ಏಲಂ ಖಾಯಂಯದವರು ಎಕ ಗಂಟಿನಲ್ಲಿ ಟೆಂಡರ್ ಮೊತ್ತವನ್ನು ಸ್ಥಳದಲ್ಲಿ ಉಪಸ್ಥಿತಿಯಲ್ಲಿರುವ ಬ್ಯಾಂಕ್ ಆಫ್ ಬರೋಡ ಬ್ಯಾಂಕ್ ನಲ್ಲಿರುವ QR CODE ಮೂಲಕ ಪಂಚಾಯತ್ ಖಾತೆಗೆ ಜಮೆ ಮಾಡುವುದು.

ಗ್ರಾಮ ಪಂಚಾಯತಿಯಿಂದ ನಿಗದಿ ಪಡಿಸಿದ ಮೊತ್ತಕ್ಕಿಂತ ಕಡಿಮೆ ಮೊತ್ತಕ್ಕೆ ಟೆಂಡರು ಬಂದಲ್ಲಿ ಟೆಂಡರನ್ನು ಖಾಯಂ ಮಾಡಲಾಗುವುದಿಲ್ಲ. ಟೆಂಡರನ್ನು ಖಾಯಂ ಮಾಡುವ ಯಾ ಯಾವೊಂದೂ ಕಾರಣ ಕೊಡದೇ ತಿರಸ್ಕರಿಸುವ ಹಕ್ಕು ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಕಾಯ್ದಿರಿಸಿಕೊಂಡಿರುತ್ತಾರೆ.

ವಹಿಸಿಕೊಂಡ ಸೈಟುಗಳಲ್ಲಿ ಮಿಠಾಯಿ, ಬಚ್ಚಂಗಾ ಹಾಗೂ ಇತರ ವಸ್ತುಗಳನ್ನು ತೆರೆದಿಟ್ಟು ವ್ಯಾಪಾರ ಮಾಡುವರೇ ಅವಕಾಶ ಇರುವುದಿಲ್ಲ. ಅದೇ ರೀತಿ ಶರಾಬು ವ್ಯಾಪಾರ ಹಾಗೂ ಜೂಜಾಟದ ವ್ಯಾಪಾರ ಮಾಡುವ ಅವಕಾಶ ಇರುವುದಿಲ್ಲ. ಅಂಗಡಿಯಲ್ಲಿ ಮೈಕ್‌ ಶೆಟ್ಟು ಇಟ್ಟು ಪ್ರಚಾರ ಮಾಡುವರೇ ಅವಕಾಶ ಇಲ್ಲ.

ಸೈಟುಗಳಲ್ಲಿ ಗುರುತು ನಂಬ್ರಗಳನ್ನು ಹಾಕಿದ್ದು ಅದಕ್ಕಿಂತ ಹೊರಗೆ ಚಪ್ಪರ ಹಾಕುವುದಾಗಲೀ ಯಾ ಡಬ್ಬಿ ಪೆಟ್ಟಿಗೆ ಇತ್ಯಾದಿಗಳನ್ನು ಇಡುವರೇ ಅವಕಾಶ ಇಲ್ಲ. ಇದಕ್ಕೆ ವಿರೋಧವಾಗಿ ಇಟ್ಟಲ್ಲಿ ಪೋಲೀಸರು ಯಾವುದೇ ಕಾರಾಚರಣೆ ಮಾಡಿದ್ದಲ್ಲಿ ಗ್ರಾಮ ಪಂಚಾಯತ್ ಜವಾಬುದಾರವಾಗುವುದಿಲ್ಲ. ಆರೋಗ್ಯ ದೃಷ್ಟಿಯಿಂದ ಆರೋಗ್ಯ ಇಲಾಖೆಯವರು ನೀಡುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು. ಹೆಚ್ಚಿನ ಮೊತ್ತ ನಮೂದಿಸಿದವರು ಆ ಕೂಡಲೇ ಹಣ ಪಾವತಿ ಮಾಡದಿದ್ದಲ್ಲಿ 2 ನೇ ಯವರಿಗೆ ಸೈಟನ್ನು ನೀಡಲಾಗುವುದು. ಏಲಂನಲ್ಲಿ ಸೈಟ ಖಾಯಂ ಆದವರು ಸ್ಥಳದಲ್ಲಿ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡುವುದು 100.00ರೂ. ಹಾಗೂ ಮೇಲ್ಪಟ್ಟ ನೋಟುಗಳನ್ನು ಸಂದಾಯ ಮಡುವುದು 10.20.50 ರ ನೋಟುಗಳನ್ನು ಎಣಿಕೆ ಮಾಡಲು ತುಂಬಾ ಸಮಯ ವ್ಯರ್ಥವಾಗುವುದರಿಂದ ಹಾಗೂ ಮುಂದಿನ ಏಲಂ ಮಾಡಲು ತೊಂದರೆಯಾಗುವುದರಿಂದ 100.00ರೂ ಮೇಲ್ಪಟ್ಟ ನೋಟುಗಳನ್ನು ಮಾತ್ರ ಸ್ವೀಕರಿಸಲಾಗುವುದು.

ಟೆಂಡ‌ರ್ ಮುಖಾಂತರ ಸೈಟ್‌ನ್ನು ಪಡೆಯದೇ ಅಂಗಡಿ ಮಳಿಗೆಗಳನ್ನು ಹಾಕಿದಲ್ಲಿ ಅವರಿಗೆ ರೂ.10000.00 ದಂಡನೆಯನ್ನು ವಿಧಿಸಲಾಗುವುದು ಹಾಗೂ ಖಾಸಗಿ ಜಮೀನಿನಲ್ಲಿ ಅಂಗಡಿ ಮಳಿಗೆಗಳನ್ನು ಹಾಕಿದಲ್ಲಿ ಜಮೀನಿನ ಮಾಲಕರು ಕಡ್ಡಾಯವಾಗಿ ಗ್ರಾಮ ಪಂಚಾಯತ್‌ ನಿಂದ ಪರವಾನಿಗೆಯನ್ನು ಪಡೆದು ವ್ಯಾಪಾರ ಮಾಡತಕ್ಕದ್ದು. ಹಸಿ ಕಸ ಮತ್ತು ಒಣಕಸವನ್ನು ಪ್ರತೇಕ ಮಾಡಿ ಹಿಡಬೇಕೆಂಬ ನಿಯಮಾನುಸರವು ಏಲಂ ಪ್ರಕ್ರಿಯೆಯಲ್ಲಿ ಇದೆ ಎಂದು ನಿಟ್ಟೆ ಗ್ರಾಮ ಪಂಚಾಯತ್ ಅಧ್ಯಕ್ಷರು/ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top