ಕಾಸರಗೋಡು ಕೋಟೆ, ಪಳ್ಳದ ಕೊಟ್ಯ ಧೂಮಾವತಿ ಉತ್ಸವ ಸಮಿತಿ ಸಭೆ ಸಂಪನ್ನ

Picture of RB NEWS

RB NEWS

Bureau Report


ಕಾಸರಗೋಡು : ಐತಿಹಾಸಿಕ ಹಿನ್ನಲ್ಲೆಯುಳ್ಳ ಇಕ್ಕೇರಿ ನಾಯಕನ ಕಾಲಘಟ್ಟದಲ್ಲಿ ಸ್ಥಾಪಿಸಲಾಗಿದ್ದ ಕಾಸರಗೋಡು ಕೋಟೆ, ಪಳ್ಳದ ಕೊಟ್ಯ ದೂಮಾವತಿ ಉತ್ಸವ ಸಮಿತಿಯ ಉತ್ಸವ ಖರ್ಚು, ವೆಚ್ಚಗಳ ಹಾಗೂ ಸಮಿತಿ ವಾರ್ಷಿಕ ಸಭೆ ನಾಗರಕಟ್ಟೆಯ ಶ್ರೀ ಶಾರದಾ ಭಜನಾಶ್ರಮ ಪರಿಸರದಲ್ಲಿ ನಡೆಯಿತು.

ರಾಮಕ್ಷತ್ರಿಯ ಸಮಾಜದ ಸಾರಥ್ಯದಲ್ಲಿ ನಡೆಯುತ್ತಾ ಬಂದಿದೆ ಈ ಧಾರ್ಮಿಕ ವಿಧಿವಿಧಾನಗಳು.‌

ಸಮಿತಿ ಅಧ್ಯಕ್ಷ ನವೀನ್ ನಾಯಕ ಅದ್ಯಕ್ಷತೆಯಲ್ಲಿ ಖರ್ಚು, ವೆಚ್ಚಗಳ ಸಮೀಕ್ಷೆ ನಡೆಯಿಸಲಾಯಿತು. ಕೋಶಾಧಿಕಾರಿ ಕನ್ನಡ ಭವನದ ಡಾ ವಾಮನ್ ರಾವ್ ಬೇಕಲ್ ಆಯ -ವ್ಯಯ ಲೆಕ್ಕ ಪತ್ರ ಮಂಡಿಸಿ ಸರ್ವ ಸದಸ್ಯರ ಅಂಗೀಕಾರ ಪಡೆದರು. ಸಮಿತಿಯನ್ನು ಮುಂದಿನ ವರ್ಷಕ್ಕೆ ಮುಂದುವರೆಸಲು ಅಂಗೀಕರಿಸಲಾಯಿತು. ಕೋಶಾಧಿಕಾರಿ ಲೆಕ್ಕ ಪತ್ರ ಪುಸ್ತಕವನ್ನು ಅಧ್ಯಕ್ಷರಿಗೆ ಹಸ್ತಾಂತರಿಸಿದರು. ಕಾರ್ಯದರ್ಶಿ ಮೋಹನ್ ದಾಸ್ ಕೊರಕೋಡು ಕಾರ್ಯಕ್ರಮ ನಿರ್ವಹಿಸಿದರು. ಉದಯ ನಾಗರಕಟ್ಟೆ ಕೇಶವ, ಸ್ವಾಗತಿಸಿ ವಂದಿಸಿದರು.ಕೇಶವ ನಾಗರಕಟ್ಟೆ, ಧನುಶ್ ನಾಗರಕಟ್ಟೆ, ಪುನೀತ್ ನಾಗರಕಟ್ಟೆ ಮತ್ತಿತ್ತರರು ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top