ಭಾರತ U15 ವಾಲಿಬಾಲ್ ಬಾಲಕಿಯರ ತಂಡದ ನಾಯಕಿಗೆ ಹುಟ್ಟೂರಿನಲ್ಲಿ ಭವ್ಯ ಸ್ವಾಗತ

Picture of RB NEWS

RB NEWS

Bureau Report

ಕಾರ್ಕಳ : ಡಿಸೆಂಬರ್ 4 ರಿಂದ 13 ವರಗೆ ಚೀನಾದಲ್ಲಿ ನಡೆದ ವಿಶ್ವ ಶಾಲಾ‌ ಮಕ್ಕಳ U15 ವಾಲಿಬಾಲ್ ಚಾಂಪಿಯನ್ ಶಿಪ್ ಕ್ರೀಡಾಕೂಟದಲ್ಲಿ ಭಾರತದ ಬಾಲಕಿಯರ ವಾಲಿಬಾಲ್ ತಂಡದ ಕಪ್ತಾನಳಾಗಿ ತಂಡವನ್ನು ಮುನ್ನಡೆಸಿ ಉತ್ತಮ ಪ್ರದರ್ಶನ ನೀಡಿದ ಕರ್ನಾಟಕದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಖಾಸಗಿ ಶಿಕ್ಷಣ ಸಂಸ್ಥೆಯ 9ನೇ ತರಗತಿ ವಿದ್ಯಾರ್ಥಿನಿ ಶಗುನ್ ಎಸ್‌ ವರ್ಮ ಹೆಗ್ಡೆ ತಾಯ್ನಾಡಿಗೆ ಮರಳುತ್ತಿರುವ ಸಂದರ್ಭದಲ್ಲಿ ಅವರನ್ನು ಗೌರವಪೂರ್ಣವಾಗಿ ಸ್ವಾಗತಿಸುವ ಸಲುವಾಗಿ ದಿನಾಂಕ 15 ಸೋಮವಾರ ಬೆಳಿಗ್ಗೆ 9:00ಕ್ಕೆ ಅನಂತಶಯನ ವೃತ್ತದಲ್ಲಿ ಸ್ವಾಗತ ಮೆರವಣಿಯನ್ನು ಕ್ರೀಡಾಭಿಮಾನಿಗಳ ವತಿಯಿಂದ ಆಯೋಜಿಸಲಾಗಿದೆ.

ಕ್ರೀಡಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ‌ ಸಂಖ್ಯೆಯಲ್ಲಿ ಭಾಗವಹಿಸಿ ನಮ್ಮೂರಿನ ಕೀರ್ತಿಯನ್ನು‌ ಹೆಚ್ಚಿಸಿದ ಕ್ರೀಡಾಪಟುವನ್ನು ಸ್ವಾಗತಿಸುವ ‌ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಂಘಟಕರ ಪರವಾಗಿ ವಿನಂತಿಸಲಾಗಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top