ಕಲ್ಲಡ್ಕ: ವೈಜ್ಞಾನಿಕ ಜಗತ್ತು ಮಕ್ಕಳ ಮಾನಸಿಕ, ಭಾವನಾತ್ಮಕವು ಶೈಕ್ಷಣಿಕ ಮೇಲೆ ಬಹಳಷ್ಟು ಪ್ರಭಾವವನ್ನು ಬೀರುತ್ತಿದೆ. ಜೊತೆಗೆ ಪೋಷಕರ ನಡುವಿನ ಸಂಬಂಧ ನೇರವಾಗಿ ಮಕ್ಕಳಲ್ಲಿ ಬದಲಾವಣೆಯನ್ನು ಉಂಟುಮಾಡುತ್ತವೆ ಎಂದು ಬಂಟ್ವಾಳ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ವಿದ್ಯಾ ಹೇಳಿದರು.
ಅವರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ ಇಲ್ಲಿ ಪೂರ್ವ ಪ್ರಾಥಮಿಕ ತರಗತಿ ಮಕ್ಕಳ ಕಿಂಡರ್ ಗಾರ್ಟನ್ ವಿಭಾಗದ ಪದವಿ ಪ್ರದಾನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತಾಡಿದರು.
ಮಗುವು ಕೇಳಿ ಕಲಿಯುವುದಕ್ಕಿಂತ ವೇಗವಾಗಿ ನೋಡಿ ಕಲಿಯುವ ಮಟ್ಟಕ್ಕೆ ಬದಲಾವಣೆಯನ್ನು ಹೊಂದಿದೆ. ಆದ್ದರಿಂದ ಮಗುವಿಗೆ ಬೇಕಾದ ಉತ್ತಮ ಶಿಕ್ಷಣವನ್ನು ಪೋಷಕರು ನೀಡಬೇಕು ಎಂದರು.
ಯಾವುದೇ ಕಲಿಕೆಯು ನಿರಂತರವಾಗಿ ಅಭಿವೃದ್ಧಿಯನ್ನು ಕಾಣಬೇಕಾದರೆ ಅದಕ್ಕೆ ತಕ್ಕ ಪೂರಕ ಅವಕಾಶಗಳನ್ನು ಒದಗಿಸಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದಿ ಸಮಿತಿಯ ಅಧ್ಯಕ್ಷ ಮಧುಸೂಧನ್ ಐತಾಳ್ ವಹಿಸಿದ್ದರು.
ವೇದಿಕೆಯಲ್ಲಿ ಶಾಲಾಭಿವೃದಿ ಸಮಿತಿಯ ಉಪಾಧ್ಯಕ್ಷೆ,ಆಪ್ಸ ,ಸದಸ್ಯರುಗಳಾದ ಸುರೇಶ್,ಸುನಿತಾ ಉಪಸ್ಥಿತರಿದ್ದರು.
ಶಾಲಾ ಪದವೀಧರ ಮುಖ್ಯ ಶಿಕ್ಷಕ ಅಬ್ಬುಬ್ಬಕ್ಕರ್ ಅಶ್ರಫ್ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು. ಶಿಕ್ಷಕಿ ಅಶ್ವಿತಾ ವಂದಿಸಿದರು. ಶಿಕ್ಷಕಿ ಮಲ್ಲಿಕಾ ನಿರೂಪಿಸಿದರು.
ಪೂರ್ವಪ್ರಾಥಮಿಕ ಮಕ್ಕಳ ಪೋಷಕರು ಶಾಲಾ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.







































