ಹಚ್ಚ ಬೇಕು ಜ್ಞಾನದ ದೀಪ

Picture of RB NEWS

RB NEWS

Bureau Report

ಕಾರ್ಗಿಲ್ ಯೋಧ ಕರುನಾಡು ಕನ್ನಡದಕವಿಯ ಲಕ್ಷಣ
ನಿಮ್ಮೆಲ್ಲರ ಕಣ್ಣಿಗೆ ಕಾಣುತ್ತಿದೆ ಪ್ರತಿ ಕ್ಷಣ
ಶಾಂತವಾಗಿದೆ ನನ್ನ ಮೌನ ಈ ಕ್ಷಣ
ನನ್ನ ಮನ ಸಾಧನೆ ಮಾಡಲು ತಕ್ಷಣ//{೦೧}//

ಸಮಾಜದಲ್ಲಿ ಟೀಕಿಸುವವರು ಜನರು ಇಂದು/
ಕೇಳಿ ಮನಸು ಕವಿದಂತಾಗಿದೆ ಇಂದು/
“ನಾನು ಗಟ್ಟಿಯಾಗಿ ನಿಲ್ಲಬೇಕು ಇಂದು/
ಬೆಳೆಯ ಬೇಕು ಎಲ್ಲರಿಗಿಂತ ಮುಂದು//{೦೨}//

ಕವಿದ ಮೋಡದಲಿ ಕರಗಿದ ಮೌನ/
ತೊಳೆಯಬೇಕಿದೆ ಸಮಾಜದ ಕೆಸರು ತುಂಬಿದಮನ/
ನರ್ತಿಸುತಿದೆ ಮೋಸ ವಂಚನೆ ಪ್ರತಿದಿನ/
ಮರೆ ಮಾಚುತ್ತಿದೆ ನನ್ನಯ ಒಳ್ಳೆಯತನ//{೦೩}//

“ಹಚ್ಚ ಬೇಕಾಗಿದೆ ಜ್ಞಾನದ ದೀಪ”/
ಅಜ್ಞಾನ ದೂರ ಹೋಗಲಿ ಶಾಪ/
ಕಳಚಿ ಹೋಗಲಿ ಆಂತರಿಕ ರೂಪ/
ನಶಿಸಿ ಹೋಗಲಿ ಎಲ್ಲರ ಪಾಪ//{೦೪}//

✍️ ಚನ್ನಬಸಪ್ಪ ಬಳಗಾರ (ಮಾಜಿ ಸೈನಿಕ)
ಪೊಲೀಸ ಇಲಾಖೆ ಉಡುಪಿ ಜಿಲ್ಲೆ ಸಶಸ್ತ್ರ ಮೀಸಲು ಪಡೆ ಹವ್ಯಾಸಿ ಬರಹಗಾರ, ಕಾರ್ಗಿಲ್ ಯೋಧ, ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿ ಪುರಸ್ಕೃತರು

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top