ಓ ನವಿಲೇ ನೀ! ಬಾ ನವಿಲೇ!
ನವಿಲೇ ನವಿಲೇ! ನೀ ಕುಣಿಯುವೆಯಾ!
ನಿನ್ನ ನಾಟ್ಯವ ಎನಗೆ! ಕಲಿಸುವೆಯಾ!
ಏನಿದು ಸುಂದರ ಈ ರೂಪ! ಬಿಚ್ಚಿದ ರೆಕ್ಕೆಯ ಆ ಪುಕ್ಕ!
ಮೆಚ್ಚಿದೆನು ನಿನ್ನ!ಈ ನಾಟ್ಯ ಕಲೆಯ!! ಪಲ್ಲವಿ!!
ಮೈ ಮರೆಯುತ! ಮನ ಸೋಲುತ! ನಿಂತಲ್ಲಿಯೇ ನಾ! ಕುಣಿದಾಡಿದೆ!
ನಲಿಯುತ ನನ್ನನೆ ! ನಾ ಮರೆತೆ! ನಿನ್ನಿಂದ ನಾಟ್ಯವ ! ನಾ ಕಲಿತೆ!
ಏತಕೆ ನಾಚುವೆ! ನೀ ನೋಡುತಾ! ನನ್ನ ನಾಟ್ಯವ!! ೧ !!
ಹಕ್ಕಿಗಳ ಮಹಾರಾಜನೇ! ಒಲವಿಂದಲೇ ನಾ! ನಿನ್ನ ಕೂಗುವೆ!
ಬೇಗನೆ ಇಲ್ಲಿಗೆ ! ಬಾ ನೀನು! ನಿನ್ನೊಡನೆ ! ಕುಣಿಯುವೆನು ನಾನು!
ನೀಡುವೆನು ನಿನ್ನಯ ! ಆ ಹೆಜ್ಜೆಗೆ! ಈ ನನ್ನ ಹೆಜ್ಜೆಯ!! ೨!!







































