ನಾಯಕನ ನಾಮದಲ್ಲಿ ಗೆದ್ದವರಿಂದ ಅಭಿವೃದ್ಧಿ ನಿರೀಕ್ಷೆಸಲು ಸಾಧ್ಯವಿಲ್ಲ

Picture of RB NEWS

RB NEWS

Bureau Report

ಕಾರ್ಕಳ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ನೂತನವಾಗಿ ಉಡುಪಿ ಜಿಲ್ಲೆ ನಿರ್ಮಾಣಗೊಳ್ಳುವಲ್ಲಿ ಪ್ರಮಾಣಿಕ ಪ್ರಯತ್ನ ನಡೆಸಿದ್ದೇನೆ. ಆಮೂಲಕ ಜನತೆಗೆ ಸರಕಾರದ ಕೆಲಸಗಳನ್ನು ತ್ವರಿತಗತಿಯಲ್ಲಿ ಮಾಡಲು ಸಾಧ್ಯವಾಗಿದೆ. ಉಡುಪಿ ಜಿಲ್ಲೆಯೂ ಅತೀವೇಗವಾಗಿ ಅಭಿವೃದ್ಧಿ ಹೊಂದಲು ಕಾರಣವಾಯಿತು. ಅಂದಿನ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರ ಸಂಪುಟದಲ್ಲಿ ಸಚಿವನಾಗಿ ಆ ಕಾರ್ಯವನ್ನು ಮಾಡಿರುವುದರಿಂದಲೇ ಇಂದು ಅದೆಷ್ಟೋ ಪ್ರಗತಿಗಳು ಉಡುಪಿಯಲ್ಲಿ ನಡೆಯಲು ಕಾರಣವಾಗಿದೆ ಎಂದು ಉಡುಪಿ ಜಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಹೇಳಿದರು.


ಪೆರ್ವಾಜೆ ಬಿಲ್ಲವ ಸಮಾಜದಲ್ಲಿ ಏರ್ಪಡಿಸಲಾಗಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ೨೦ ತಿಂಗಳ ಅವಧಿಗೆ ಸಂಸದನಾಗಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದೇನೆ.

ಪ್ರತಿಯೊಂದು ಗ್ರಾಮ ಪಂಚಾಯತ್‌ಗಳು ಕಂಪ್ಯೂಟರಿಕರಣ ಗೊಳಿಸುವಲ್ಲಿ, ಸೋಲಾರ್ ಸ್ಥಾಪನೆ ಪ್ರಯತ್ನಗಳು ನಡೆಸಿದ್ದೇನೆ. ಸಂಸದರ ನಿಧಿಯನ್ನು ಬಿಡುಗಡೆ ಮಾಡಿದ್ದೇನೆ. ಕ್ಷೇತ್ರ ವ್ಯಾಪ್ತಿಯಲ್ಲಿ ಹೊಸ ರಸ್ತೆಗಳ ನಿರ್ಮಾಣವನ್ನು ಮಾಡಿದ್ದೇನೆ. ಕಾರ್ಕಳದ ಸಾಣೂರು- ಕುಂಟಲ್ಪಾಡಿ ಬೈಪಾಸ್ ರಸ್ತೆಯೂ ಇದರಲ್ಲಿ ಒಳಗೊಂಡಿದೆ. ಉಡುಪಿ -ಅಗುಂಬೆ ರಾಷ್ಟ್ರೀಯ ಹೆದ್ದಾರಿಗೆ ಅನುಮೋದನೆಯನ್ನು ಇದೇ ಸಂದರ್ಭದಲ್ಲಿ ನೀಡಲಾಗಿತ್ತು. ದೂರಾದೃಷ್ಠಿ ಇಟ್ಟುಕೊಂಡು ಉಡುಪಿ ಜಿಲ್ಲೆಯ ಹಾಗೂ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿದ್ದೇನೆ ಎಂದರು.

ನಾಯಕನ ನಾಮದಲ್ಲಿ ಗೆದ್ದವರಿಂದ ಅಭಿವೃದ್ಧಿ ನಿರೀಕ್ಷೆಸಲು ಸಾಧ್ಯವಿಲ್ಲ

ನಾಯಕನ ಹೆಸರಿನಲ್ಲಿ ಗೆದ್ದುಬಂದರೆ ಕ್ಷೇತ್ರದ ಅಭಿವೃದ್ಧಿ ಕೊಡುವುದಕ್ಕೆ ಸಾಧ್ಯವಾಗುವುದಿಲ್ಲ. ಅದನ್ನೇ ಪುನರುಚ್ಚರಿಸಿ ಮತದಾರರನ್ನು ವಂಚಿಸಬೇಕಾಗುತ್ತದೆ. ಆದುದರಿಂದ ನಾಯಕನ ಹೆಸರೇಳುವ ಮುನ್ನ ಕ್ಷೇತ್ರಕ್ಕೆ ನೀಡಿದ ಅಥವಾ ನೀಡಬೇಕಾದ ಕೊಡುಗೆಗಳನ್ನು ಮುಂದಿಟ್ಟು ಮತಯಾಚನೆ ನಡೆಯಲಿ”.ಎಂದರು.

ಅವರು ಕಾರ್ಕಳದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತಾಡಿದರು.ಹೇಳದ ಮಾತಿಗೆ ತನ್ನನ್ನು ತೇಜೋವಧೆ ಮಾಡುವುದು ತರವಲ್ಲ
ರಾಜಕೀಯವೆಂದರೆ ಇನ್ನೊಬ್ಬರ ಬಗ್ಗೆ ಹಗುರವಾಗಿ ಮಾತನಾಡುವುದಲ್ಲ.ಬದಲಾಗಿ ,ತನ್ನ ಕ್ಷೇತ್ರದಲ್ಲಿ ಆಗಿರುವ ಅಥವಾ ಮಾಡಲಿರುವ ಅಭಿವೃದ್ಧಿಯ ಕುರಿತು ಪ್ರಸ್ತಾವನೆಯನ್ನು ಮುಂದಿಡಬೇಕು. “

ತನ್ನ ರಾಜಕೀಯ ಜೀವನದಲ್ಲಿ ಯಾವುದೇ ವ್ಯಕ್ತಿಯ ತೇಜೋವಧೆ ಮಾಡಿಲ್ಲ. ಹೀಗಿದ್ದರೂ ನಾನು ಹೇಳಿರದ ಮಾತನ್ನು ಬಿಜೆಪಿಗರು ಹೇಳುತ್ತಾ ತನ್ನ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ. ಇದು ಅವರ ಜಾಯಮಾನವೂ ಆಗಿದೆ. ಚುನಾವಣೆ ಸಂದರ್ಭದಲ್ಲಿ ಎದುರಾಳಿಯನ್ನು ಎದುರಿಸಲಾಗದೇ ಅಡ್ಡದಾರಿಯಲ್ಲಿ ಹೋಗುವ ಪ್ರವೃತ್ತಿಯನ್ನು ಬಿಜೆಪಿಗರು ಮುಂದುವರಿಸುತ್ತಾ ಬಂದಿದ್ದಾರೆ. ಇದ್ಯಾವುದಕ್ಕೂ ಕ್ಯಾರೇ ಮಾಡಬಾರದು,ಉದ್ವೇಗಕ್ಕೆ ಒಳಗಾಗದೇ ಕಾಂಗ್ರೆಸ್‌ನ ಕೊಡುಗೆಗಳನ್ನು ಜನಸಾಮಾನ್ಯರ ಮುಂದಿಟ್ಟು ವಿಶ್ವಾಸ ಗಳಿಸುವ ಪ್ರಯತ್ನ ಮಾಡಬೇಕೆಂದು ಕಾರ್ಯಕರ್ತರಿಗೆ ಮನದಟ್ಟುಮಾಡಿದರು.

ಕ್ಷೇತ್ರದ ಸಮಸ್ಯೆ ಅರಿತುಕೊಳ್ಳಲು ವಿಫಲರಾದ ಬಿಜೆಪಿಗರು ಸಂಸದರ ಕ್ಷೇತ್ರ ಬದಲು ಮಾಡುವ ಮೂಲಕ ಹೊಸ ಇತಿಹಾಸ ಬರೆಯಲು ಹೊರಟ್ಟಿದ್ದಾರೆ. ನವಿಲು ಗರಿ ಮರಿ ಮಾಡುತ್ತದೆ ಎಂಬ ಭ್ರಮಾಲೋಕ ಸೃಷ್ಠಿಸಿ ಕಾಂಗ್ರೆಸ್ ಗ್ಯಾರೆಂಟಿಗಳ ಬಗ್ಗೆ ವ್ಯಂಗ್ಯ ಮಾಡಲು ಮುಂದಾಗಿ ಹತಾಶೆಗೊಂಡಿದ್ದಾರೆ. ಹತಾಶೆಯ ಮನೋಭಾವದ ವ್ಯಕ್ತಿಯನ್ನು ಬಿಜೆಪಿ ತನ್ನ ಅಭ್ಯರ್ಥಿ ಎಂದು ಘೋಷಿಸಿಕೊಂಡಿದೆ ಲಘುವಾಗಿ ಚುಚ್ಚಿದರು.
ಬಿಜೆಪಿಯ ಅರ್ಥಿಕತೆಯಿಂದ ದೇಶದ ಕೆಲವೇ ಕೆಲ ಮಂದಿಯ ಹಠಾತ್ ಶ್ರೀಮಂತರಾಗಿ ಹಣವನ್ನು ಕೂಡಿಡುವಂತಾಗಿದೆ.ಇದು ದೇಶದ ಆರ್ಥಿಕ ಅಸಮಾನತೆಗೆ ಕಾರಣವಾಗಿದೆ. ಯುವಸಮುದಾಯಕ್ಕೆ ಉದ್ಯೋಗ ಪ್ರಾಪ್ತಿಯಾದಾಗ ರಾಮರಾಜ್ಯದ ಕನಸ್ಸು ನನಸಾಗುತ್ತದೆ ಎಂದರು.

ಕಾಂಗ್ರೆಸ್ ಮುಖಂಡ ಮುನಿಯಾಲು ಉದಯಕುಮಾರ್ ಶೆಟ್ಟಿ ಮಾತನಾಡಿ, ಪ್ರತಿಯೊಂದು ಚುನಾವಣೆಗಳಲ್ಲಿ ಯುವಸಮುದಾಯ ಸಕ್ರಿಯಾವಾಗಿ ಪಾಲ್ಗೊಳ್ಳಬೇಕು. ಯಾವುದೇ ಕಾರಣಕ್ಕೂ ವಿಮುಕ್ತರಾಗಬಾರದು. ಕಾಂಗ್ರೆಸ್ ಪಕ್ಷ ಬಡವರಿಗೆ ಶ್ರೀ ರಕ್ಷೆ. ಗ್ಯಾರೆಂಟಿ ಯೋಜನೆಯನ್ನು ಸಂಪೂರ್ಣ ಅನುಷ್ಠಾನಗೊಳಿಸಿದ ಕೀರ್ತಿ ಕರ್ನಾಟಕದ ಕಾಂಗ್ರೆಸ್ ಸರಕಾರದಾಗಿದೆ. ಅಂಕಿ ಅಂಗಗಳ ಪ್ರಕಾರ ಕರ್ನಾಟಕದಲ್ಲಿ ಕಾಂಗ್ರೆಸ್ ಭರ್ಜರಿ ಜಯಭೇರಿ ಗಳಿಸುತ್ತದೆ. ಹಾಗೆ ಹೇಳಿ ಕಾಂಗ್ರೆಸ್‌ಗರು ಮನೆ ಮನೆ ಪ್ರಚಾರದಿಂದ ಹಿಂದೆ ಸರಿಯಬಾರದು. ಜೊತೆಗೆ ಕಾಂಗ್ರೆಸ್ ಸರಕಾರದ ಕಾರ್ಯಸಾಧನೆಯನ್ನು ಪ್ರತಿಯೊಬ್ಬ ನಾಗರಿಕನಲ್ಲಿ ತಿಳಿಸುವ ಪ್ರಯತ್ನ ನಡೆಸಬೇಕೆಂದರು.

ಪ್ರದೇಶ ಕಾಂಗ್ರೆಸ್ ನ ಹಿಂದುಳಿದ ವರ್ಗಗಳ ಮುಖಂಡ ಡಿ.ಆರ್.ರಾಜು ಮಾತನಾಡಿ, ಸಿದ್ದಾಂತ ಹಾಗೂ ಪಕ್ಷದ ಧ್ಯೇಯೋದ್ದೇಶಗಳನ್ನು ಅರಿತುಕೊಳ್ಳಬೇಕು. ಆತ್ಮಸಾಕ್ಷಿಯಾಗಿ ಕಾರ್ಯಕರ್ತರು ದುಡಿಯಬೇಕು. ಶೇ. 95ಕ್ಕೂ ಮಿಕ್ಕಿ ಕುಟುಂಬಗಳು ರಾಜ್ಯ ಸರಕಾರದ ಸವಲತ್ತುಗಳನ್ನು ಒಂದಲ್ಲ ಒಂದು ರೀತಿಯಲ್ಲಿ ಸ್ವೀಕರಿಸುತ್ತಿದ್ದಾರೆ‌. ಆ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಋಣ ತೀರಿಸಬೇಕು. ದೇಶದಲ್ಲಿ ಕಳೆದ 10 ವರ್ಷಗಳಿಗೆ ಬಿಜೆಪಿ ನೇತೃತ್ವ ಸರಕಾರವನ್ನು ಕಿತ್ತು ಹಾಕುವುದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಕಟ್ಟಿಬದ್ಧರಾಗಬೇಕೆಂದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top