ಯು. ಟಿ ಖಾದರ್ ಗೆ ಉಪಮುಖ್ಯಮಂತ್ರಿ ಹುದ್ದೆ ನಿಜವೇ?

ಉಳ್ಳಾಲ ಕ್ಷೇತ್ರದ ಶಾಸಕ ಹಾಗೂ ವಿಧಾನಸಭಾಧ್ಯಕ್ಷ ಯು. ಟಿ ಖಾದರ್ ಅವರನ್ನು ಮುಂದಿನ ಸಚಿವ ಸಂಪುಟ ಬದಲಾವಣೆ ಸಂದರ್ಭದಲ್ಲಿ ರಾಜ್ಯದ ಉಪಮುಖ್ಯಮಂತ್ರಿಯನ್ನಾಗಿ ಸಂಪುಟಕ್ಕೆ ಸೇರಿಸಿಕೊಳ್ಳಲಾಗುವುದು ಎನ್ನುವ ಬಲವಾದ ಹಾಗೂ ನಂಬಲರ್ಹವಾದ ಸುದ್ದಿಯೊಂದು ರಾಜ್ಯದ ವಿವಿಧೆಡೆಗಳಲ್ಲಿ ಹರಡಿಕೊಂಡಿದೆ.
ಸಿದ್ಧರಾಮಯ್ಯನವರಿಗೆ ಸ್ವಲ್ಪ ಹತ್ತಿರವೇ ಇರುವ ಯು ಟಿ. ಖಾದರ್ ಅವರ ಮೇಲಿನ ಆರೋಪವೊಂದು ಭಾರೀ ಸುದ್ದಿ ಮಾಡಿದ ಬೆನ್ನಲ್ಲೇ ಈ ಸುದ್ದಿಯೂ ಹೊರಬಿದ್ದಿರುವುದು ಉಂಟಾಗಿದ್ದ ಅವಮಾನಕ್ಕೆ ಈ ಒಂದು ಸ್ವರ್ಣ ಲೇಪನದ ಸುದ್ದಿಯನ್ನು ಸೃಷ್ಠಿಸವಾಗಿದೆಯೋ ಎಂದೂ ಹೇಳುವುದಕ್ಕಾಗುವುದಿಲ್ಲ ಅಥವಾ ಅಲ್ಲಗಳೆಯುವುದಕ್ಕೂ ಆಗುವುದಿಲ್ಲ.
ಸಿದ್ಧರಾಮಯ್ಯನವರಿಗೆ ಅಂಥದ್ದಾದ ಆತ್ಮೀಯ ರಾಜಕಾರಣಿಯೇನಲ್ಲ.ಕಾರಣ, ಯು. ಟಿ. ಖಾದರ್ ಅವರಲ್ಲಿ ಆಪತ್ತಿಗೆ ಕಾಸು ಹಂಚುವ ಮನೋಧರ್ಮವಿಲ್ಲದ್ದು ಸಿದ್ಧರಾಮಯ್ಯನವರಿಗೂ ಗೊತ್ತುಂಟು. ಸಹೋದರ ಯು. ಟಿ. ಇಫ್ತಿಕಾರನನ್ನು ಮುಂದಿಟ್ಚಿರೊಂಡು ರಾಜ್ಯದ ಬಹುತೇಕ ವ್ಯವಹಾರಗಳನ್ನು ಮಾಡುತ್ತಿರುವ, ಅತ್ತಿಂದ ಬಿಜೆಪಿ ನಾಯಕರೊಡನೆಯೂ ದೆಹಲಿ ತನಕವೂ ವ್ಯಾವಹಾರಿಕ ಸಂಪರ್ಕ ಬೆಳೆಸಿಕೊಂಡಿರುವುದನ್ನು ಸಿದ್ಧರಾಮಯ್ಯ ಗಮನಿಸದೆ ಇರುವುದಕ್ಕಿಲ್ಲ.
ಖಾದರ್ ಸಹೋದರರು ಏನು ಎಂತದು ಎನ್ನುವುದು ಬಿಜೆಪಿಯ ಅಮಿತ್ ಶಾರಿಗೂ ಗೊತ್ತಿದೆ. ಹಾಗಿರುವಾಗ ರಾಜ್ಯದ ಉಪಮುಖ್ಯಮಂತ್ರಿ ಹುದ್ದೆ ಲಭಿಸುವುದು ಕಷ್ಟಸಾಧ್ಯ.
ಉಳ್ಳಾಲ ಕ್ಷೇತ್ರದಲ್ಲಿಯೇ ಬಹಳ ಪ್ರಯಾಸದಿಂದ ಗೆಲ್ಲುವುದು ಹೊರತುಪಡಿಸಿದರೆ ಖಾದರ್ ಅವರಿಗೆ ಜಿಲ್ಲೆಯಲ್ಲಿ ಮತ ಬೆಂಬಲ ಏನೂ ಇಲ್ಲ. ಮುಸ್ಲೀಮರ ಮತ ಹೊರತಾಗಿ ಅನ್ಯಧರ್ಮೀಯರ ಮತವನ್ನು ಕಾಂಗ್ರೆಸ್ಸಿಗೆ ಹಾಕಿಸುವ ಬಾಂಧವ್ಯ ಜಿಲ್ಲೆಯ ಜನತೆಯೊಡನೆ ಇಲ್ಲ.
ಕಳೆದ ಬಾರಿ ಸ್ಪೀಕರ್ ಹುದ್ದೆ ಕೊಟ್ಟಿರುವುದು ಕೂಡ ದ. ಕ. ಜಿಲ್ಲೆಗೆ ಹಿರಿಯ ಶಾಸಕನಿಗೆ ಅವಕಾಶ ಕೊಡಬೇಕು ಎಂದಷ್ಟೆ. ಖಾದರ್ ಗೆ ಮಂತ್ರಿ ಹುದ್ದೆ ಕೊಡಲಿಕ್ಕೆ ಇಷ್ಟವೂ ಇದ್ದಿರಲಿಲ್ಲ . ಇಬ್ಬರು ಮುಸ್ಲಿಮರಿಗೆ ಮಂತ್ರಿ ಹುದ್ದೆ ಕೊಡುವುದಕ್ಕೆ ಡಿ. ಕೆ. ಶಿ. ಕೂಡಾ ಒಪ್ಪಲಿಲ್ಲ. ಅದು ಜಮೀರ್ ಅವರನ್ನು ದೂರಮಾಡಬೇಕೆನ್ನುವುದೇ ಜಿ. ಕೆ. ಶಿವಕುಮಾರ್ ತಂತ್ರ. ಅದರಲ್ಲಿ ಜೆಡಿಎಸ್ ನಾಯಕರೂ ಒತ್ತಾಯಿಸಿದ್ದಿರಲೂಬಹುದು. ಆದರೆ ಸಿದ್ದರಾಮಯ್ಯನವರಿಗೆ ಜಮೀರ್ ಅವರನ್ನು ದೂರ ಮಾಡುವುದಕ್ಕೆ ಸುತರಾಂ ಇಷ್ಟವಿರಲಿಲ್ಲ. ಖಾದರ್ ಗೆ ಸ್ಪೀಕರ್ ಹುದ್ದೆಯಾದರೂ ಇರಲಿ ಎಂದು ಸಿದ್ಧು ದಯಪಾಲಿಸಿದ್ದು!
ರಾಜ್ಯದ ಉಪಮುಖ್ಯಮಂತ್ರಿ ಹುದ್ದೆಯನ್ನು ಸಚಿವ ಜಮೀರ್ ಅವರಿಗೆ ಕೊಡುವುದಕ್ಕೆ ಸಿದ್ಧರಾಮಯ್ಯ ನಿರ್ಧಾರ ಮಾಡಿಕೊಂಡಿದ್ದಂತೂ ವಾಸ್ತವ ಸತ್ಯ. ಉಳಿದ ವಿಚಾರ,ಒಪ್ಪಿಗೆ ಎಲ್ಲವೂ ಹೈಕಮಾಂಡಿನ ನಿರ್ಣಯಕ್ಕೆ.
ಸಂಕಷ್ಟದಲ್ಲಿರುವ ಯಾರಿಗೇ ಆದರೂ ಹಣ ಕೊಟ್ಟು ಸಹಕರಿಸುವ ಜಮೀರ್ ಅವರ ಔದಾರ್ಯವನ್ನು ಗಮನಿಸಿದ ಸಿದ್ಧರಾಮಯ್ಯ ಆ ಒಂದು ಗಮನಾರ್ಹ ನಿರ್ಧಾರಕ್ಕೆ ಬಂದಿರುತ್ತಾರೆ. ಯು. ಟಿ. ಖಾದರ್ ಡಿಸಿಎಮ್ ಆಗುವುದರ ಬಗ್ಗೆ ಯಾರೇನೇ ಪ್ರಚಾರ ಕೈಗೊಂಡರೂ ಸಿದ್ಧು ಮನಸಿನಲ್ಲಿ ಇರುವುದು ಜಮೀರ್ ಮಾತ್ರ.
ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಬಡವರ ಪರವಾಗಿ ಕಣ್ಣೀರು ಹಾಕಿ ಸಹಕಾರವನ್ನು ನೀಡುತ್ತಿರುವವರು ಜಮೀರ್ ಮಾತ್ರ ಎಂದು ಸಿದ್ಧರಾಮಯ್ಯ ಹೇಳುತ್ತಿರುತ್ತಾರೆ. ದ. ಕ. ಜಿಲ್ಲೆಯಲ್ಲಿ ಕೋಮು ಗಲಭೆಯಲ್ಲಿ ಮೃತಪಟ್ಚ ಮುಸ್ಲಿಮ್ ಬಂಧುಗಳಿಗೆ ಇಪ್ಪತ್ತೈದು ,ಐವತ್ತು ಲಕ್ಷ ರೂಪಾಯಿಗಳ ಧನಸಹಾಯ ನೀಡಿರುವುದನ್ನೂ ಸಿದ್ಧರಾಮಯ್ಯ ಉಲ್ಲೇಖಿಸುತ್ತಿರುತ್ತಾರೆ.
ಮುಂದಿನ ಬದಲಾವಣೆಯಲ್ಲಿ ಮುಸ್ಲಿಮ್ ವ್ಯಕ್ತಿಯನ್ನು ಜಿ. ಸಿ. ಎಮ್. ಮಾಡುವುದಂತೂ ಸತ್ಯ.
-ವಿ. ಕೆ. ವಾಲ್ಪಾಡಿ
Post Views: 265





































