ಕಾರ್ಕಳದಲ್ಲಿ ಹಿರಿಯ ನಾಗರಿಕರ ದಿನಾಚರಣೆ

Picture of RB NEWS

RB NEWS

Bureau Report

ಕಾರ್ಕಳ : ತಾಲೂಕು ಕಾನೂನು ಸೇವೆಗಳ ಸಮಿತಿ ಕಾರ್ಕಳ, ನ್ಯಾಯವಾದಿಗಳ ಸಂಘ (ರಿ.), ಕಾರ್ಕಳ, ಲಯನ್ಸ್ ಕ್ಲಬ್ ಕಾರ್ಕಳ, ಮತ್ತು ಹಿರಿಯ ನಾಗರಿಕರ ಸಂಘ (ರಿ.) ಕಾರ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಉಚಿತ ಕಾನೂನು ಅರಿವು ಮಾಹಿತಿ ಕಾರ್ಯಕ್ರಮವು ಕಾರ್ಕಳ ಲಯನ್ಸ್ ಕ್ಲಬ್ ನಲ್ಲಿ ಜರಗಿತು.

ಸಮಾರಂಭವನ್ನು ಉದ್ಘಾಟಿಸಿದ, ಹಿರಿಯ ಸಿವಿಲ್ ಮತ್ತು ಎ.ಸಿ.ಜೆ.ಎಂ. ನ್ಯಾಯಾಧೀಶೆ ಶರ್ಮಿಳಾ ಸಿ.ಎಸ್.ರವರು ಮಾತನಾಡಿ, ಹಿರಿಯ ನಾಗರಿಕರು ತಾಲೂಕು ಕಾನೂನು ಸೇವೆಗಳ ಸಮಿತಿಯಲ್ಲಿ ದೊರೆಯುವ ಹಲವಾರು ಸವಲತ್ತುಗಳ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ನ್ಯಾಯವಾದಿಗಳ ಸಂಘ (ರಿ.) ಕಾರ್ಕಳದ ಉಪಾಧ್ಯಕ್ಷ ಕೆ. ಹರೀಶ್ ಅಧಿಕಾರಿ ಮಾತನಾಡಿ, ಹಿಂದಿನ ಕಾಲಕ್ಕೆ ಹೋಲಿಸಿದರೆ ಹಿರಿಯ ನಾಗರಿಕರು ಸ್ಥಿತಿ ಈಗ ಅಷ್ಟು ಚೆನ್ನಾಗಿಲ್ಲ, ಹಿಂದಿನ ಕಾಲದಲ್ಲಿ ವೃದ್ಧರನ್ನು ಮೊಮ್ಮಕ್ಕಳು ಅತೀ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು ಎಂದು ತಿಳಿಸಿದರು. ಹಾಗೇನಾದರೂ ಅಗತ್ಯಬಿದ್ದರೆ ಹಿರಿಯ ನಾಗರಿಕರು ಕಾನೂನಿನ ಮೊರೆ ಹೋಗಬಹುದು ಎಂದು ತಿಳಿಸಿದರು.

ಹಿರಿಯ ನಾಗರಿಕರ ಸಂಘ (ರಿ.) ಕಾರ್ಕಳದ ಅಧ್ಯಕ್ಷ ಕಮಲಾಕ್ಷ ಕಾಮತ್‌ ಮಾತನಾಡಿ, ಹಿರಿಯ ನಾಗರಿಕರ ಸಂಘದ ಕೆಲವೊಂದು ಭವಿಷ್ಯದ ಧೈಯಗಳನ್ನು ವಿವರಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಕಾರ್ಕಳದ ನ್ಯಾಯವಾದಿ ಸುದೇಶ್ ಶೆಟ್ಟಿ ಎ. ಮಾತನಾಡಿ, ಹಿರಿಯ ನಾಗರಿಕರು ತಮ್ಮ ಆಸ್ತಿಗಳನ್ನು ಮಕ್ಕಳಿಗೆ ಅಥವಾ ಮೊಮ್ಮಕ್ಕಳಿಗೆ ಬರೆದುಕೊಟ್ಟ ನಂತರ ಅವರನ್ನು ಮಕ್ಕಳು ಮತ್ತು ಮೊಮ್ಮಕ್ಕಳು ಚೆನ್ನಾಗಿ ನೋಡಿಕೊಳ್ಳದಿದ್ದರೆ ಸದ್ರಿ ಆಸ್ತಿ ವರ್ಗಾವಣೆಯನ್ನು ರದ್ದುಪಡಿಸಬಹುದು. ಅಲ್ಲದೇ ಕೆಲವು ಹಿರಿಯ ನಾಗರಿಕರನ್ನು ಮಕ್ಕಳು, ಮೊಮ್ಮಕ್ಕಳು ಚೆನ್ನಾಗಿ ನೋಡಿಕೊಳ್ಳದಿದ್ದರೆ ಸಹಾಯಕ ಕಮೀಶನರ್‌ನವರ ನ್ಯಾಯಾಲಯದಲ್ಲಿ ಜೀವನಾಂಶಕ್ಕೆ ಆದೇಶ ಪಡೆಯಬಹುದೆಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಲಯನ್ಸ್ ಕ್ಲಬ್ ಅಧ್ಯಕ್ಷ ರಾಜಾರಾಮ್ ಕಡಂಬ, ಸಮಾರಂಭವನ್ನು ಲಯನ್ಸ್ ಕ್ಲಬ್‌ನಲ್ಲಿ ಆಯೋಜಿಸಿದುದಕ್ಕೆ ಕೃತಜ್ಞತೆ ಸಲ್ಲಿಸಿದರು.

ಜಯರಾಮ್ ಕಾಮತ್ ಪ್ರಾರ್ಥಿಸಿದರು. ಲಯನ್ಸ್ ಕ್ಲಬ್ ಕಾರ್ಕಳ ಕಾರ್ಯದರ್ಶಿ ಸುಭಾಸ್ ಸುವರ್ಣ ಸ್ವಾಗತಿಸಿ ವಂದಿಸಿದರು. ಹಿರಿಯ ನಾಗರಿಕ ಸಂಘ (ರಿ.) ಕಾರ್ಕಳದ ಕಾರ್ಯದರ್ಶಿ ಜಗದೀಶ್ ಗೋಖಲೆ ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top