ಕಾರ್ಕಳ : ಒಬ್ಬ ವ್ಯಕ್ತಿ ತನ್ನ ದಿನಚರಿಗೆ ಬೇಕಾದ ಅಗತ್ಯ ನೀರಿಗಿಂತ ಹೆಚ್ಚು ನೀರನ್ನು ವ್ಯರ್ಥ ಮಾಡುವುದು ಸರ್ವೇ ಸಾಮಾನ್ಯವಾಗಿದೆ. ಸೋಲಾರನಿಂದ ಬಾಟಲಿ ನೀರಿನ ವರೆಗೆ ಅನಗತ್ಯ ನೀರು ದುರ್ಬಳಕ್ಕೆ ಮಾಡುವುದು ಕಡಿವಾಣ ಬೀಳದೇ ಹೋದಾಗ ಇಂಧನಕ್ಕಿಂತ ದುಬಾರಿ ಬೆಲೆ ತೆತ್ತುಕುಡಿಯುವ ನೀರು ಖರೀದಿಸಬೇಕಾಗಬಹುದು. ಆದುದರಿಂದ ನೀರಿನ ಮಹತ್ವವನ್ನು ಅರಿತುಕೊಂಡು ಮಿತವಾಗಿ ಸದ್ಬಳಕೆ ಮಾಡಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು , ತಾಲೂಕು ಕಾನೂನು ನೆರವು ಸಮಿತಿಯ ಅಧ್ಯಕ್ಷರು ಶರ್ಮಿಳಾ ಸಿ.ಎಸ್ ಹೇಳಿದರು.
ತಾಲೂಕು ಕಾನೂನು ಸೇವೆಗಳ ಸಮಿತಿ ಕಾರ್ಕಳ, ವಕೀಲರ ಸಂಘ ಕಾರ್ಕಳ ಮತ್ತು ರಾಷ್ಟ್ರೀಯ ಸೇವಾ ಯೋಜನಾ ಘಟಕ, ಸರಕಾರಿ ಪಾಲಿಟೆಕ್ನಿಕ್ ಕಾಲೇಜು, ಕಾರ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಜಲ ದಿನಾಚರಣೆಯ ಅಂಗವಾಗಿ ಕಾನೂನು ಅರಿವು ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾಚ್೯ 27ರಂದು ಬೆಳಿಗ್ಗೆ 10.00 ಗಂಟೆಗೆ ಈ ಕಾರ್ಯಕ್ರಮವು ಕಾರ್ಕಳ ಸರಕಾರಿ ಪಾಲಿಟೆಕ್ನಿಕ್ ಕಾಲೇಜುನಲ್ಲಿ ಜರಗಿತು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಕಾರ್ಕಳ ವಕೀಲರ ಸಂಘದ ಅಧ್ಯಕ್ಷ ಸುನೀಲ್ ಕುಮಾರ್ ಶೆಟ್ಟಿಯವರು ಮಾತನಾಡಿ, ಹಿಂದೆ ರೈತರಿಗೆ ಕುಮ್ಮಿ ಹಕ್ಕು ಇದ್ದು, ಆ ಪ್ರದೇಶದಲ್ಲಿ ರೈತರು ಜಲ ವೃದ್ಧಿಗೊಳಿಸುವಂತಹ ಕೆಲಸಗಳನ್ನು ಮಾಡುತ್ತಿದ್ದರು ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಕಾರ್ಕಳ ವಕೀಲರ ಸಂಘದ ಕಾರ್ಯದರ್ಶಿ ಅನಿಲ್ ಕುಮಾರ್ ನಿಟ್ಟೆ, ವಿಶ್ವ ಜಲವನ್ನು ವೃದ್ಧಿಸಲು ವಿಶ್ವಸಂಸ್ಥೆಯ 1992ರ ನಿರ್ದೇಶನದಂತೆ ಅಮೇರಿಕ ಸಿಂಗಾಪುರ, ಇಸ್ರೇಲ್ ರಾಷ್ಟ್ರಗಳು ಮತ್ತು ಭಾರತದಲ್ಲಿ ಸಹ ವಿಶ್ವ ಜಲ ವೃದ್ಧಿಸುವ ಬಗ್ಗೆ ಕೈಗೊಂಡ ಕಾರ್ಯಕ್ರಮಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಶ್ರೀ ಕುಮಾರ ಕೆ. ಎಂ. ರವರು 25 ವರ್ಷಗಳ ಹಿಂದೆ 30-40 ಪೀಟು ಆಳದಲ್ಲಿ ಸಿಗುತ್ತಿದ್ದ ಬೋರ್‌ವೆಲ್ ನೀರು ಈಗ 400 ಯಾ 500 ಫೀಟ್ ತೆಗೆದರೂ ದೊರೆಯುತ್ತಿಲ್ಲ. ವಿಶ್ವ ಜಲವನ್ನು ಕಾಪಾಡಲು ನಾವು ಮಳೆಯ ನೀರನ್ನು ಮತ್ತು ವಾಶ್ ರೂಂ ನೀರನ್ನು ಇಂಗಿಸಿ ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಚಂದ್ರಶೇಖರ ಹೆಬ್ಬಾರ್ ಬೋಧಕರು ಸ್ವಾಗತಿಸಿದರು., ರಾಷ್ಟ್ರೀಯ ಯೋಜನಾ ಕೋ-ಆರ್ಡಿನೇಟರ್ ಹರೀಶ್ ವಂದನಾರ್ಪಣೆಗೈದರು. ಗುಣಪಾಲ ಜೈನ್ ಕಾರ್ಯಕ್ರಮ ನಿರೂಪಿಸಿದರು.






































