ಅಕ್ರಮ ಕಸಾಯಿಖಾನೆಗೆ ದಾಳಿ3ದನಗಳ ರಕ್ಷಣೆ : 50 ಕೆ ಜಿ ಮಾಂಸ ಪತ್ತೆ : 2 ಕಾರು ವಶಕ್ಕೆ

Picture of RB NEWS

RB NEWS

Bureau Report

ಅಕ್ರಮ ಕಸಾಯಿಖಾನೆಗೆ ದಾಳಿ
3ದನಗಳ ರಕ್ಷಣೆ : 50 ಕೆ ಜಿ ಮಾಂಸ ಪತ್ತೆ : 2 ಕಾರು ವಶಕ್ಕೆ

ಮೂಡುಬಿದಿರೆ: ಗಂಟಾಲ್ ಕಟ್ಟೆಯ ಜಲೀಲ್ ಎಂಬುವರ ಮನೆಯ ಹಿಂಭಾಗದ ಗುಡ್ಡೆಯ ಹಾಡಿಯಲ್ಲಿ ಅಕ್ರಮವಾಗಿ ತಲೆಎತ್ತಿದ್ದ ಕಾಸಾಯಿಖಾನೆಗೆ ಮೂಡುಬಿದಿರೆ‌ ಪೊಲೀಸ್ ನಿರೀಕ್ಷಕರಾದ ಸಂದೇಶ್ ಪಿ.ಜಿ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ.

ಕಾರ್ಯಚರಣೆ ಸಂದರ್ಭದಲ್ಲಿ ಆರೋಪಿತರು ಹಸುವನ್ನು ಕಡಿದು ಮಾಂಸ ಮಾಡುತ್ತಿದ್ದರೆಂಬ ಮಾಹಿತಿ ತಿಳಿದುಬಂದಿದೆ. ಸ್ಥಳದಲ್ಲಿದ್ದ ಸುಮಾರು 50 ಕೆ.ಜಿ ದನದ ಮಾಂಸ ಮತ್ತು ಪರಿಕರಗಳನ್ನು ವಶಕ್ಕೆ ಪಡೆಯಲಾಗಿದೆ. ಕಡಿಯಲು ಕದ್ದು ತಂದಿದ್ದ 3 ದನಗಳನ್ನು ರಕ್ಷಿಸಿ ಗೋಶಾಲೆಗೆ ಒಪ್ಪಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಜಲೀಲ್ ಕಲ್ಲಬೆಟ್ಟು, ಸಾಹಿಲ್ ಮತ್ತು ಆತನ ಮಗ ಸೊಹೇಲ್ ಮತ್ತು ಕುದ್ರೋಳಿ ನಿವಾಸಿ ಮೊಹಮ್ಮದ್ ಅಶ್ರಫ್ ಪರಾರಿಯಾಗಿರುತ್ತಾರೆ.

ಘಟನಾ ಸ್ಥಳದಲ್ಲಿದ್ದ ಮಾಂಸ ಪಡೆಯಲು ಬಂದಿದ್ದ 2 ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ವಿರುದ್ಧ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.‌

ಅಪರಾಧ ವಿಭಾಗದ ಸಿಬ್ಬಂಧಿಗಳಾದ ಪಿ.ಎಸ್.ಐ ಕೃಷ್ಣಪ್ಪ, ಅಖಿಲ್‌ ಅಹಮ್ಮದ್, ನಾಗರಾಜ್ ಕಾರ್ಯಚರಣೆ ಯಲ್ಲಿ ಪಾಲ್ಗೊಂಡಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top