ನಿಟ್ಟೆಯ ಪ್ರಿಷಾ ಪಿ ಪೂಜಾರಿ ಕರ್ನಾಟಕ ರಾಜ್ಯ ತಂಡಕ್ಕೆ ಆಯ್ಕೆ

Picture of RB NEWS

RB NEWS

Bureau Report

ಕಾರ್ಕಳ : ನಿಟ್ಟೆಯ ಕೆ.ಎಸ್. ಹೆಗ್ಡೆ ಬ್ಯಾಸ್ಕೆಟ್‌ಬಾಲ್ ಫೌಂಡೇಶನ್‌ನ ಪ್ರಿಷಾ ಪಿ ಪೂಜಾರಿ ಇವರು ಡಾ. ಎನ್‌ಎಸ್‌ ಎ ಎಂ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ 8 ನೇ ತರಗತಿಯಲ್ಲಿ ಓದುತ್ತಿದ್ದು, ಕರ್ನಾಟಕ ರಾಜ್ಯ ಬಾಸ್ಕೆಟ್ಬಾಲ್ ತಂಡಕ್ಕೆ ಆಯ್ಕೆಯಾಗಿರುತ್ತಾರೆ.

ಅ. 4 ರಿಂದ 9ರ ವರೆಗೆ ಉತ್ತರಖಂಡದ ಡೆಹರಾಡೂನ್ ನಲ್ಲಿ  ನಡೆಯಲಿರುವ 50 ನೇ ಸಬ್ ಜೂನಿಯರ್ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದ್ದಾರೆ.

ನಿಟ್ಟೆಯ ಮೈಂದಬೆಟ್ಟು ನಿವಾಸಿ  ಪ್ರಶಾಂತ್ ಪೂಜಾರಿ ಮತ್ತು ರೂಪಾ ಪೂಜಾರಿ ಅವರ ಪುತ್ರಿಯಾಗಿದ್ದು, ನಿಟ್ಟೆ ಎಜ್ಯುಕೇಷನ್ ಟ್ರಸ್ಟ್ ನ ತರಬೇತುದಾರ ರವಿ ಪ್ರಕಾಶ್ ರವರು ತರಬೇತಿಯನ್ನು ನೀಡಿರುತ್ತಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top