[t4b-ticker]

ಕರ್ನಾಟಕ ಸರ್ಕಾರ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಕರ್ನಾಟಕ ರಾಜ್ಯದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಬಗ್ಗೆ ಸಮೀಕ್ಷೆ

Picture of RB NEWS

RB NEWS

Bureau Report

ಬೆಂಗಳೂರು : 2025 ಸಪ್ಪೆಂಬರ್ 23ರ ಪತ್ರದ ಮೂಲಕ ಭಾರತೀಯ ಜನತಾ ಪಕ್ಷದ ಪದಾಧಿಕಾರಿಗಳಾದ ಛಲವಾದಿ ನಾರಾಯಣಸ್ವಾಮಿ (ವಿಧಾನ ಪರಿಷತ್ ವಿಪಕ್ಷ ನಾಯಕರು), ಎ.ನಾರಾಯಣಸ್ವಾಮಿ (ಕೇಂದ್ರದ ಮಾಜಿ ಸಚಿವರು) ಹಾಗೂ ವಿ. ಸುನಿಲ್ ಕುಮಾ‌ರ್(ಬಿ.ಜೆ.ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕರು) ಆಯೋಗದ ಅಧ್ಯಕ್ಷರಿಗೆ ಮನವಿ ಸಲ್ಲಿಸಿ ಈ ಕೆಳಕಂಡ ಜಾತಿಗಳನ್ನು ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಸೇರಿಸಬಾರದು ಎಂದು ಆಗ್ರಹಿಸಿರುತ್ತಾರೆ.

ಆದಿ ಆಂಧ್ರ ಕ್ರಿಶಿಯನ್

ಆದಿ ಕರ್ನಾಟಕ ಕ್ರಿಶ್ಚಿಯನ್

ಆದಿದ್ರಾವಿಡ ಕ್ರಿಶ್ಚಿಯನ್

ಬಂಜಾರ ಕ್ರಿಶ್ಚಿಯನ್

ಬುಡುಗ ಜಂಗಮ ಕ್ರಿಶ್ಚಿಯನ್

ಹೊಲೆಯ ಕ್ರಿಶ್ಚಿಯನ್

ಲಮಾಣಿ ಕ್ರಿಶ್ಚಿಯನ್

ಲಂಬಾಣಿ ಕ್ರಿಶ್ಚಿಯನ್

ಮಾದಿಗ ಕ್ರಿಶ್ಚಿಯನ್

ಮಹಾರ್ ಕ್ರಿಶ್ಚಿಯನ್

ಮಾಲಾ ಕ್ರಿಶ್ಚಿಯನ್

ಪರಯ ಕ್ರಿಶ್ಚಿಯನ್

ವಡ್ಡ ಕ್ರಿಶ್ಚಿಯನ್

ವಾಲ್ಮೀಕಿ ಕ್ರಿಶ್ಚಿಯನ್

ಮೇಲೆ ತೋರಿಸಲಾದ 14 ಜಾತಿಗಳ ಕುರಿತು ದಿನಾಂಕ: 23-09-2025 ರಂದು ನಡೆದ ಆಯೋಗದ ಸಭೆಯಲ್ಲಿ ದೀರ್ಘವಾಗಿ ಚರ್ಚಿಸಿ ಪರಿಶೀಲಿಸಲಾಯಿತು.

ದಿನಾಂಕ:22-08-2025 ರಂದು ಪತ್ರಿಕೆಗಳಲ್ಲಿ ಸಲಹೆ ಕೋರಿ ಪ್ರಕಟಿಸಿರುವ ಜಾತಿ ಪಟ್ಟಿಯಲ್ಲಿ ಈ ಜಾತಿಗಳ ಹೆಸರು ನಮೂದಾಗಿತ್ತು. ನಂತರ ಸ್ವೀಕರಿಸಿರುವ ಸಲಹೆ ಮತ್ತು ಚರ್ಚೆಯ ನಂತರ ಮೇಲಿನ ಜಾತಿಗಳು ಸೇರಿದಂತೆ ಹಲವು ಜಾತಿಗಳ ಹೆಸರನ್ನು ಅಂತಿಮ ಪಟ್ಟಿಯಲ್ಲಿ ಕೈಬಿಟ್ಟು ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ.

ಆದಾಗ್ಯೂ ಸಮೀಕ್ಷಾ ಕೈಪಿಡಿ-2025 ರ ಪುಟ ಸಂಖ್ಯೆ:57 ರಿಂದ 89 ರವರೆಗಿನ 1561 ಜಾತಿಗಳ ಪಟ್ಟಿಯಲ್ಲಿ ಹಾಗೂ EDCS ಸಂಸ್ಥೆಯು ಸಿದ್ಧಪಡಿಸಿರುವ ಸಮೀಕ್ಷಾ ಆಪ್‌ನಲ್ಲಿ ಅಳವಡಿಸಿರುವ ಜಾತಿ ಪಟ್ಟಿಯ Drop-down ನಲ್ಲಿಯೂ ಸಹ ಮೇಲ್ಕಂಡ 14 ಜಾತಿಗಳು ಸೇರಿರುವುದಿಲ್ಲವೆಂಬ ಅಂಶವನ್ನು ಖಚಿತಪಡಿಸಿಕೊಳ್ಳಲಾಗಿದೆ.

ಮೇಲಿನ ಸೃಷ್ಟಿಕರಣವನ್ನು ಸಾರ್ವಜನಿಕರ ಮಾಹಿತಿಗಾಗಿ ಈ ಮೂಲಕ ಪ್ರಕಟಿಸಲಾಗಿದೆ ಎಂದು ಸದಸ್ಯ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಬೆಂಗಳೂರು ತಿಳಿಸಿದ್ದಾರೆ.


ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿಗಾಗಿ ಪಟ್ಟಿ ಮಾಡಿದ ಜಾತಿಗಳ ಯಾದಿಯಲ್ಲಿ ಹಿಂದು ಉಪಜಾತಿಗಳ ಜತೆಗೆ ಮತಾಂತರಗೊಂಡ ಕ್ರಿಶ್ಚಿಯನ್ ರನ್ನು ಸೇರಿಸಲಾಗಿತ್ತು. ಒಟ್ಟು 46 ಇಂಥ ಹೊಸ ಜಾತಿಗಳ ಸೃಷ್ಟಿ ಕಾಯಕ ಸಮುದಾಯಗಳ ಮತಾಂತರ ಕ್ಕೆ ಇಂಬು ನೀಡುವ ಜತೆಗೆ ಭವಿಷ್ಯದಲ್ಲಿ ಮೀಸಲು ವ್ಯವಸ್ಥೆಯನ್ನು ಛಿದ್ರಗೊಳಿಸುವ ಅಪಾಯವಿತ್ತು.
ಈ ಹಿನ್ನೆಲೆಯಲ್ಲಿ ನಾವು ನಡೆಸಿದ ಹೋರಾಟಕ್ಕೆ ಆಯೋಗ ಮಣಿದಿದೆ. ಎರಡು ದಿನಗಳ ಹಿಂದೆ 33 ಜಾತಿಗಳನ್ನು ಈ ಪಟ್ಟಿಯಿಂದ ಕೈ ಬಿಟ್ಟ ಆಯೋಗ ಈಗ ಪರಿಶಿಷ್ಟ ಜಾತಿಗಳಲ್ಲಿ ಸೇರ್ಪಡೆಯಾಗಿದ್ದ 14 ಜಾತಿಗಳನ್ನು ಕೈ ಬಿಟ್ಟಿದೆ. ಒಟ್ಟಾರೆಯಾಗಿ ನಮ್ಮ ಹೋರಾಟಕ್ಕೆ ಜಯ ದೊರೆತಿದ್ದು, ಇನ್ನಾದರೂ ಯಾವುದೇ ಅಪಸವ್ಯವಿಲ್ಲದೇ ಆಯೋಗ ಸಮೀಕ್ಷೆ ನಡೆಸಲಿ. ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯಲಿ ಎಂದು ಆಶಿಸುತ್ತೇನೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top